ಮಾಟ ಮಂತ್ರಕ್ಕೆ ಬೆಚ್ಚಿ ಬಿದ್ದ ಸಿಂಧನೂರು ಜನ…!

ಸಿಂಧನೂರು : ಈಗಾಗಲೇ ಜಿಲ್ಲೆಯ ಜನ ಕೊರೋನಾ ವೈರಸ್ ನಿಂದ ಬೇಸತ್ತು ಹೋಗಿದ್ದಾರೆ. ಈ ಮಧ್ಯ ಕೆಲ ಕಿಡಿಗೇಡಿಗಳು ಸಿಂಧನೂರು ನಗರದಲ್ಲಿ ವಾಮಾಚಾರ ಮಾಡುತ್ತಿದ್ದು ಇದರಿಂದ ಬಡಾವಣೆ ಜನ ಭಯದ ವಾತವರಣದಲ್ಲಿ ಓಡಾಡುವಂತಾಗಿದೆ. ರಾಯಚೂರು ಜಿಲ್ಲೆಯ ಸಿಂಧನೂರು ನಗರದ ವಾರ್ಡ್ ನಂಬರ್ 18 A K ಗೋಪಾಲ್ ನಗರದಲ್ಲಿ ಅಮಾವಾಸ್ಯೆ ದಿನದಂದೆ ಮಾಟ ಮಂತ್ರ ಮಾಡುತ್ತಿದ್ದು ಬಡಾವಣೆಯಲ್ಲಿ ಜನ ಭಯದಲ್ಲೆ ಓಡಾಡುತ್ತಿದ್ದಾರೆ. ಇನ್ನೂ ಕಿಡಿಗೇಡಿಗಳು ರಾತ್ರಿ ವೇಳೆಯೇ ಬಂದು ತಿಂಗಳಲ್ಲಿ 4 ಸಾರಿ ಕುಂಕುಮ, ವಿಭೂತಿ ಭಂಡಾರ, ಗೊಂಬೆಗಳು, ಕುಂಬ್ಳೆ ಕಾಯಿ ಇತರ ವಸ್ತುಗಳನ್ನು ಚೆಲ್ಲಿ ಹೋಗುತ್ತಿದ್ದಾರೆ. ಮನುಷ್ಯನ ರೂಪ ಹೊಂದಿರುವ ಗೊಂಬೆಗಳನ್ನು ನಡು ರಸ್ತೆಯಲ್ಲೇ ಇಟ್ಟು ಹೋಗುತ್ತಿರುವುದರಿಂದ ಇದನ್ನು ಕಂಡು ಸಾರ್ವಜನಿಕರು ಭಯಭೀತರಾಗಿದ್ದಾರೆ. ಇನ್ನೂ ವಾಮಾ ಚಾರ ಮಾಡುವ ವೀಡಿಯೋ ಅಲ್ಲೆ ಇದ್ದ ಒಂದು ಅಂಗಡಿಯ ಸಿಸಿಟಿವಿಯಲ್ಲಿ ವ್ಯಕ್ತಿಯ ಚಿತ್ರ ಸೆರೆಯಾಗಿದೆ. ಇದನ್ನು ಆಧರಿಸಿ ಸಂಬಂಧ ಪಟ್ಟ ಅಧಿಕಾರಿಗಳು ಮತ್ತು ಪೊಲೀಸರು ಕ್ರಮ ಕೈಗೊಳ್ಳಬೇಕು ಎಂದು ನಿವಾಸಿಗಳು ಮನವಿ ಮಾಡುತ್ತಿದ್ದಾರೆ.

ವರದಿ : ಸೈಯದ್ ಬಂದೇನವಾಜ್

Please follow and like us:

Related posts

Leave a Comment