ಅಕ್ರಮ ಮರಳು ದಂದೆ : ಕಣ್ಮುಚ್ಚಿ ಕುಳಿತ ಅಧಿಕಾರಿಗಳು..!

ಸಿಂಧನೂರು: ರಾಯಚೂರು ಜಿಲ್ಲೆಯಲ್ಲಿ ಕೊರೋನಾ ಮಧ್ಯ ಅಕ್ರಮ ಮರಳುಗಾರಿಕೆ ಹೆಗ್ಗಿಲ್ಲದೇ ನಡೆಯುತ್ತಿದೆ. ಇನ್ನೂ ಈ ಅಕ್ರಮ ತಡೆಗಟ್ಟಬೇಕಾದ ಜಿಲ್ಲಾಡಳಿತ ಮೌನಕ್ಕೆ ಜಾರಿದೆ. ರಾಯಚೂರು ಜಿಲ್ಲೆಯಲ್ಲಿ ಎರಡು ನದಿಗಳು ಹರಿಯುವುದರಿಂದ ದೋಅಬ್ ಪ್ರದೇಶ ಅಂತ ಕರೆಯಲಾಗುತ್ತದೆ. ನದಿಗಳಿರುವುದರಿಂದ ಇಲ್ಲಿ ಯತೇಚ್ಚವಾಗಿ ಮರಳು ದೊರೆಯುವುದರಿಂದ ಇದನ್ನೆ ದಂದ್ದೆಯಾಗಿಸಿಕೊಂಡ ಮರಳುಗಳ್ಳರು ವಾಮ‌ಮಾರ್ಗದಲ್ಲಿ ಅಕ್ರಮವಾಗಿ ಮರಳು ಸಾಗಿಸಿ ಹಣ ಮಾಡುತ್ತಿದ್ದಾರೆ. ಇನ್ನೂ ತುಂಗಭದ್ರ ನದಿ ಪಾತ್ರದಲ್ಲಿರುವ ಸಿಂಧನೂರು ತಾಲೂಕಿನ ಕೆಂಗಲ್ ಗ್ರಾಮದ ಭಾಗದಲ್ಲಿ ದೊರೆಯುವ ಮರಳುಗಳಿಗೆ ಜಿಲ್ಲೆ ಸೇರಿದಂತೆ ಬೆಂಗಳೂರು. ಹುಬ್ಬಳ್ಳಿ ನಗರಗಳಲ್ಲಿ ಬಾರಿ ಬೇಡಿಕೆ ಇದೆ. ಇದರಿಂದ ಕೆಲ ಪ್ರಭಾವಿ ವ್ಯಕ್ತಿಗಳು ಸೇರಿ ಹಗಲು ರಾತ್ರಿ ಎನ್ನದೇ ಅಕ್ರಮವಾಗಿ ಮರಳು ತುಂಬಿಕೊಂಡು ಅಕ್ಕ ಪಕ್ಕದಲ್ಲಿ ಹೊಲಗದ್ದೆಗಳಲ್ಲಿ ಅನಧಿಕೃತ ಮರಳು ಪಾಯಿಂಟ್ ಗಳನ್ನು ನಿರ್ಮಿಸಿಕೊಂಡು ರಾತ್ರೋರಾತ್ರಿ ಟಿಫರ್ ಗಳ ಮೂಲಕ ಮರಳನ್ನು ಸಾಗಾಟ ಮಾಡುತ್ತಿದ್ದಾರೆ. ಈ ಕುರಿತು ಪೊಲೀಸ್ ಇಲಾಖೆಗೆ ದೂರು ನೀಡಿ ಪೋಲಿಸ್ ಅಧಿಕಾರಗಳು ಸ್ಥಳಕ್ಕೆ ಬಂದಾಗ ಮಾತ್ರ ಈ ಅಕ್ರಮ ಮರಳು ದಂದೆ ಒಂದು ಎರಡೂ ದಿನಗಳ ಮಟ್ಟಿಗೆ ಕಡಿಮೆಯಾಗುತ್ತದೆ. ನಂತರ ಯಥಾ ರೀತಿ ಮರಳು ಸಾಗಿಸಲಾಗುತ್ತದೆ ಎಂದು ಸಿ.ಪಿ.ಐ.ಎಮ್ ಪಕ್ಷದ ಮುಖಂಡ ಯಂಕಪ್ಪ ಕೆಂಗಲ್ ಆರೋಪಿಸಿದ್ದಾರೆ. ನಾವು ಹಲವಾರು ಬಾರಿ ಸಂಬಂಧಿಸಿದ ಅಧಿಕಾರಿಗಳಿಗೆ ನಮ್ಮ ಗ್ರಾಮದಲ್ಲಿ ನಡೆಯುವ ಅಕ್ರಮ ಮರಳು ಗಾರಿಕೆ ಬಗ್ಗೆ ತಿಳಿಸಿದರು ಅಧಿಕಾರಿಗಳು ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ. ಇನ್ನೂ ಇದೀಗ ಹೊಸದಾಗಿ ಜಿಲ್ಲೆಗೆ ಬಂದಿರುವ ಎಸ್ಪಿ ಪ್ರಕಾಶ್ ನಿಕ್ಕಂ ಅವರು ಈ ಆಕ್ರಮ ಬಗ್ಗೆ ಗಮನಹರಿಸಿ ಸೂಕ್ತ ಕ್ರಮಕ್ಕೆ ಮುಂದಾಗುತ್ತಾರೆ ಎಂಬ ನಿರೀಕ್ಷೆ ಜನರದ್ದಾಗಿದೆ.

ವರದಿ : ಸೈಯದ್ ಬಂದೇನವಾಜ್ ಎಕ್ಸ್ ಪ್ರೆಸ್ ಟಿವಿ ಸಿಂಧನೂರು

Please follow and like us:

Related posts

Leave a Comment