ಮಳೆಯಿಂದಾಗಿ ನೀರುಪಾಲಾದ ರೈತನ ವರ್ಷದ ಕೂಳು..!

ಲಿಂಗಸೂಗೂರು: ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಬಯ್ಯಾಪುರ ತಾಂಡಾದಲ್ಲಿ ರೈತ ಮಹಾಂತೇಶ್ ರಾಠೋಡ್ ನ ಪಾಲಿಗೆ ವರವಾಗಬೇಕಿದ್ದ ಈರುಳ್ಳಿ ಶಾಪವಾಗಿ ಪರಿಣಮಿಸಿದೆ..ಜೇಬು ತುಂಬಿಸಬೇಕಿದ್ದ ಈರುಳ್ಳಿ ಕೇವಲ ಕಣ್ಣೀರನ್ನಷ್ಟೇ ತರಿಸಿದೆ. ನಿರಂತರವಾಗಿ ಸುರಿದ ಮಳೆಯಿಂದಾಗಿ ಕೊಳೆ ರೋಗ ಉಂಟಾಗಿ 10 ಎಕರೆಯಲ್ಲಿ ಬೆಳೆದಿದ್ದ ಶೇ 90 ರಷ್ಟು ಬೆಳೆ ಹಾನಿಯಾಗಿದೆ. ಮಳೆ ನೀರು ನಿಂತು ಕೊಳೆ ರೋಗ ಬಂದಿರುವುದರಿಂದ ಕೊಯ್ಲಿಗೆ ಬಂದಿದ್ದ ಬೆಳೆ ಹಳದಿ ಬಣ್ಣಕ್ಕೆ ತಿರುಗಿ ಕೊಳೆಯುತ್ತಿದೆ.ಒಂದು ಎಕ್ಕರೆಗೆ ಸುಮಾರು 30 ರಿಂದ 40 ಸಾವಿರ ರೂಪಾಯಿ ಖರ್ಚು ಮಾಡಿ ಬೆಳೆದಿದ್ದ ಈರುಳ್ಳಿ ಬೆಳೆ ಮಳೆಗೆ ಕೊಚ್ಚಿ ಹೋಗಿ ಜಮೀನಿನ ತುಂಬೆಲ್ಲಾ ಮರಳು ತುಂಬಿಕೊಂಡಿದೆ. ಮುಂದಿನ ಬೆಳೆಗೆ ಭೂಮಿಯನ್ನು ಹದಗೊಳಿಸಲು ರೈತನ ಕೈಯಲ್ಲಿ ಹಣ ಇಲ್ಲದೇ ರೈತ ಪರದಾಡುತ್ತಿದ್ದು ಕಂಗಾಲಾಗಿದ್ದಾರೆ.ಜೀವನ ನಡೆಸಲು ಕೃಷಿಯನ್ನೇ ಕಸುಬು ಮಾಡಿಕೊಂಡಿದ್ದು, ವರ್ಷ ಪೂರ್ತಿ ಜೀವನ ನಡೆಸಲು ಬೆಳೆಯನ್ನೇ ನಂಬಿಕೊಂಡಿದ್ದರಿಂದ ಈಗ ಜೀವನ ಏಗಾಪ್ಪ ನಡೆಸುವುದು ಎಂದು ರೈತ ಕಂಗಾಲಾಗಿದ್ದಾನೆ. ಇನ್ನೂ ಸರ್ಕಾರ ಈ ಕೂಡಲೇ ನೆರವು ನೀಡಬೇಕು ಇಲ್ಲವಾದರೇ ಜೀವನ ನಡೆಸುವುದಕ್ಕೆ ತುಂಬಾ ಕಷ್ಷವಾಗುತ್ತದೆ ಎಂದು ಕಣ್ಣೀರಿಡುತ್ತಾ ಸರ್ಕಾರದ ನೆರವಿಗೆ ಎದುರು ನೋಡುತ್ತಾ ಕೂತಿದ್ಧಾರೆ.

ವರದಿ: ವೀರೇಶ್ ಅರಮನಿ ಎಕ್ಸ್ ಪ್ರೆಸ್ ಟಿವಿ ಲಿಂಗಸೂಗೂರು

Please follow and like us:

Related posts

Leave a Comment