ಅಧಿಕಾರಿಗಳ ನಿರ್ಲಕ್ಷ್ಯತನಕ್ಕೆ ನೀರುಪಾಲಾದ ವರ್ಷದ ಕೂಳು…!

ಲಿಂಗಸೂಗೂರು: ಲಿಂಗಸೂಗೂರು ತಾಲ್ಲೂಕಿನ ಕುಪ್ಪೆಗುಡ್ಡದಲ್ಲಿ ಅತಿಯಾದ ಮಳೆಯಿಂದಾಗಿ ಕಾಲುವೆ ಒಡೆದು ಜಮೀನಿಗೆನೀರು ನುಗ್ಗಿದೆ. ನೀರಿನ ರಭಸಕ್ಕೆ ಶರಣಪ್ಪ ಚಲವಾದಿ ಎಂಬುವರ ಸುಮಾರು ಒಂದು ಎಕರೆ ಜಮೀನಿನಲ್ಲಿ ಬೆಳೆದಿದ್ದ ಸಜ್ಜೆ, ಎಳ್ಳು, ಈರುಳ್ಳಿ ಬೆಳೆ ಹಾಳಾಗಿದ್ದು ರೈತ ಕಂಗಾಲಾಗಿದ್ದಾರೆ.ರಾಂಪೂರ ಏತ ನೀರಾವರಿಯಿಂದ ಕಾಲುವೆಗೆ ನೀರು ಬಿಟ್ಟಿದ್ದು, ಅಧಿಕಾರಿಗಳ ಈ ನಿರ್ಲಕ್ಷ್ಯಕ್ಕೆ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವರ್ಷದ ಕೂಳೂ ನೀರಿನಲ್ಲಿ ಕೊಚ್ಚಿ ಹೋಗಿದ್ದರಿಂದ ರೈತ ಕಂಗಾಲಾಗಿದ್ದು ಸರ್ಕಾರದಿಂದ ಪರಿಹಾರ ನೀಡಬೇಕು ಎಂದು ಪಟ್ಟು ಹಿಡಿದಿದ್ದಾರೆ.

ವೀರೇಶ್ ಅರಮನಿ ಎಕ್ಸ್ ಪ್ರೆಸ್ ಟಿವಿ ಲಿಂಗಸೂಗೂರು..

Please follow and like us:

Related posts

Leave a Comment