Connect with us

ಶಿರಾ

ಪ್ರಧಾನಮಂತ್ರಿ ನರೇಂದ್ರ ಮೋದಿಯವರ 2020 ರ ಹೊಸ ಶಿಕ್ಷಣ ನೀತಿ ಜಾರಿ….

Published

on

ಶಿರಾ :ಸ್ವದೇಶೀ ಶಿಕ್ಷಣಕ್ಕೆ ಒತ್ತು ನೀಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರೀಯ ಶಿಕ್ಷಣ ನೀತಿ- 2020 ಜಾರಿಗೆ ತರುತ್ತಿರುವುದು ಸ್ವಾಗತಾರ್ಹ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಿಂದ ಪ್ರತಿಯೊಬ್ಬರಿಗೂ ಸಮಾನ ಶಿಕ್ಷಣ ದೊರೆತು ಶಿಕ್ಷಣದ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆಯಾಗುವುದು ಎಂದು ಶಿಕ್ಷಣ ತಜ್ಞ ಹಾಗೂ ವಿಧಾನ ಪರಿಷತ್ ನ ಆಗ್ನೇಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಚಿದಾನಂದಗೌಡ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಸರ್ಕಾರಿ ಶಾಲೆಗಳು ಸಬಲೀಕರಣವಾಗಿ ಪೋಷಕರು ಸಹ ಸರ್ಕಾರಿ ಶಾಲೆಗಳ ಕಡೆ ಒಲವು ತೋರಿಸಲಿದ್ದಾರೆ. ಹೊಸ ಶಿಕ್ಷಣ ನೀತಿಯಿಂದಾಗಿ ದೇಶದಲ್ಲಿ ಏಕರೂಪದ ಶಿಕ್ಷಣ ಜಾರಿಗೊಳ್ಳಲಿದೆ. ಜೊತೆಗೆ ಮಾತೃಭಾಷೆಯಲ್ಲಿ ಶಿಕ್ಷಣ ದೊರೆಯುವುದರಿಂದ ಮಕ್ಕಳ ಶೈಕ್ಷಣಿಕ ಮಟ್ಟ ಸಹ ಹೆಚ್ಚುವುದು ಇದರಿಂದಾಗಿ ಸಶಕ್ತ ಯುವ ಭಾರತ ನಿರ್ಮಾಣವಾಗುವುದು ಎಂದರು. ಹೊಸ ಶಿಕ್ಷಣ ನೀತಿಯಿಂದ ಕಲಿಕಾ ಮಟ್ಟ ಹೆಚ್ಚುವುದು ಜೊತೆಗೆ ಯಾವುದೇ ಕಾರಣಕ್ಕೂ ಅಪೂರ್ಣವಾಗುವುದಿಲ್ಲ, ಒಂದು ವರ್ಷ ಪೂರೈಸಿದರೆ ವೃತ್ತಿಪರ ವಿಷಯಕ್ಕನುಗುಣವಾಗಿ ಪ್ರಮಾಣ ಪತ್ರ, ಎರಡು ವರ್ಷಕ್ಕೆ ಡಿಪ್ಲೋಮಾ, ಮೂರು ವರ್ಷಕ್ಕೆ ಪದವಿ ಇದರ ಜೊತೆಗೆ ಐಚ್ಚಿಕ ವಿಷಯಕ್ಕೆ 4 ವರ್ಷದ ಪದವಿಯನ್ನು ಪಡೆಯಬಹುದಾಗಿದೆ ಎಂದರು. ಹೊಸ ನೀತಿಯಿಂದಾಗಿ ಈಗಾಗಲೇ ಅಸ್ಥಿತ್ವದಲ್ಲಿರುವ ಶಿಕ್ಷಣ ನೀತಿಗೆ ಯಾವುದೇ ರೀತಿಯ ದಕ್ಕೆಯಾಗುವುದಿಲ್ಲ. 2021 ರಿಂದ ಪ್ರಾರಂಭವಾಗಿ 2030 ರವರೆಗೆ ಹಂತ ಹಂತವಾಗಿ ಜಾರಿಗೊಳಿಸಲು ತೀರ್ಮಾನಿಸಿರುವುದು ಸರ್ಕಾರದ ದೂರ ದೃಷ್ಟಿಕೊಂದು ಉದಾಹರಣೆಯಾಗಿದೆ. ಪ್ರತಿ ಗ್ರಾಮಕ್ಕೊಂದು ಪೂರ್ವ ಪ್ರಾಥಮಿಕ ಹಾಗೂ ಒಂದು ಮತ್ತು ಎರಡನೇ ತರಗತಿಗೆ ಶಾಲಾ ಸಂಕೀರ್ಣ, ಗ್ರಾಮ ಪಂಚಾಯಿತಿಗೊಂದು ಮಾಧ್ಯಮಿಕ ಮತ್ತು ಪ್ರೌಢಶಾಲೆಗಳ ಸಂಕಿರ್ಣ ಹಾಗೂ ಹೋಬಳಿ ಮಟ್ಟಕ್ಕೊಂದು ಪದವಿ ಕಾಲೇಜು ಪ್ರಾರಂಭಿಸಿ ಪ್ರತಿಭಾವಂತ ತರಭೇತಿ ಪಡೆದ ಶಿಕ್ಷಕರನ್ನು ನೇಮಿಸಿಕೊಂಡು ಮಕ್ಕಳಿಗೆ ಶಾಲಾ ವಾಹನದ ವ್ಯವಸ್ಥೆ ಮಾಡಿದರೆ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಪರಿಣಾಮಕಾರಿಯಾಗಿ ಜಾರಿಗೊಳ್ಳುವುದು ಎಂದು ನಿವೃತ್ತ ಪ್ರಾಂಶುಪಾಲ ಬಿ.ಗೋವಿಂದಪ್ಪ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

Continue Reading
Click to comment

Leave a Reply

Your email address will not be published. Required fields are marked *

ಶಿರಾ

ಶಿರಾ ಉಪಚುನಾವಣೆ ಪ್ರತಿದಿನವೂ ವಿಬೀನ್ನ- ಕಸರತ್ತುಗಳ ನಡುವೆ ಮುಖಂಡರ ನಡೆ ನಿಗೂಢ..!

Published

on

By

ಶಿರಾ: ಕಳೆದ ತಿಂಗಳು ಕ್ಷೇತ್ರದ ಹಾಲಿ ಶಾಸಕರು ನಿಧನರಾದ ನಂತರ ಶಿರಾ ಕ್ಷೇತ್ರ ಪ್ರತಿ ದಿನವೂ ಒಂದಲ್ಲ ಒಂದು ರೀತಿ ಸುದ್ದಿಯಲ್ಲಿ ಇದೆ. ಬಾಜಪ ಕಳೆದ ಹತ್ತು ದಿನಗಳಿಂದ ಗ್ರಾಮದಲ್ಲಿ ಬೂತ್ತ್ ಮಟ್ಟದ ಸಭೆಗಳನ್ನು ನಡೆಸಿದರೆ ಜೆಡಿಎಸ್ ನಲ್ಲಿ ಪಕ್ಷದ ವರಿಷ್ಠ ನಡೆಯ ಕಡೆ ಗಮನ ಹರಿಸುತ್ತದೆ. ಇನ್ನೂ ಕೆಲ ಸಮಾಜ ಸೇವಕರು ದೇವಾಲಕ್ಕೆ ಹಣ ರಸ್ತೆ, ಶಾಲಾ ಕಾಲೇಜುಗಳ ಅವರಣ ಸೇರಿದಂತೆ ವಿವಿಧ ಕಡೆ ಪ್ರೇಮಿಗಳಿಗೆ ಸೇರಿದಂತೆ ವೃದ್ಧರಿಗೆ ಅನುಕೂಲ ಕಲ್ಪಿಸಲು ಸಿಮೆಂಟ್ ಕಾಂಕ್ರೀಟ್ ಕುರ್ಚಿಗಳನ್ನು ನೀಡುವ ಮೂಲಕ ಜನಸೇವೆ ಆರಂಭವಾಗಿದೆ. ಮುಖಂಡರ ಇಬ್ಬರ ಮುಸುಕಿನ ಗುದಾಟ್ಟಾ ಜೊತೆಗೆ ಮಾಜಿ ಸಚಿವ ಜಯಚಂದ್ರ ಗ್ರಾಮಗಳ ಭೇಟೆ ಹಾಗೂ ಕುಟುಂಬದ ಜೊತೆ ದೇವಾಲಯಗಳಿಗೆ ತೆರಳಿ ವಿಶೇಷ ಪೂಜೆಯನ್ನು ನಡೆಸಲಾಗುತ್ತಿದೆ.ಗ್ರಾಮದಲ್ಲಿ ಯಾರು ಅಭ್ಯರ್ಥಿ ಅದರೆ ಯಾವ ಯಾವ ಮುಖಂಡರು, ಯಾವ ಪಕ್ಷದ ಕಡೆ ,ನಾವು ಯಾರನ್ನು ಹಿಂಬಾಲಿಸಿಬೇಕು, ಅವರಿಂದ ನಮಗೆ ಏನು ಪ್ರಯೋಜನ ಎಂಬುದರ ಬಗ್ಗೆ ಚರ್ಚೆಗಳಾಗುತ್ತಿದ್ದು ಇದುವರೆಗೂ ಯಾವುದೇ ಪಕ್ಷಗಳಲ್ಲಿ ಅಭ್ಯರ್ಥಿಯ ಹೆಸರು ಘೋಷಣೆಯಾಗಿಲ್ಲ ಮತ್ತು ಚುನಾವಣಾ ಆಯೋಗ ದಿನಾಂಕ ನಿಗಧಿಯಾಗಿಲ್ಲ ಅದರೆ ಎಲ್ಲಾ ಕಡೆ ಕಸರತ್ತುಗಳ ನಡುವೆ ಮುಖಂಡರ ನಡೆ ನಿಗೂಢಗಳ ನಡುವೆ ಭಾರಿ ಕುತೂಹಲ ಕೆರಳಿಸುತ್ತಿದೆ..

ವರದಿ- ಶ್ರೀಮಂತ್ ಎಕ್ಸ್ ಪ್ರೆಸ್ ಟಿವಿ ಶಿರಾ.

Continue Reading

ಶಿರಾ

ಮಧ್ಯವರ್ತಿಗಳ ಮೊರೆ ಹೋಗದೆ ನೇರವಾಗಿ ಅಧಿಕಾರಿಗಳ ಬಳಿ ತೆರಳಿ ಅರ್ಜಿಸಲ್ಲಿಸಿ- ತಹಸೀಲ್ದಾರ್ ನಾಹಿದಾ ಜಮ್ ಜಮ್..!

Published

on

By

ಶಿರಾ:- ರೈತರು ತಾಲ್ಲೂಕು ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಲು ಹೋಬಳಿ ಮಟ್ಟದಲ್ಲಿ ಕಂದಾಯ ಹಾಗೂ ಪಿಂಚಣಿ ಅದಾಲತ್ ಕಾರ್ಯಕ್ರಮವನ್ನು ಸರ್ಕಾರದ ವತಿಯಿಂದ ಮಾಡಲಾಗುತ್ತದೆ ಎಂದು ತಹಸೀಲ್ದಾರ್ ನಾಹಿದಾ ಜಮ್ ಜಮ್ ಅವರು ಹೇಳಿದರು.ಅವರು ಕಸಬಾ ಹೋಬಳಿ ವ್ಯಾಪ್ತಿಯಲ್ಲಿ ಮುದಗೆರೆ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಕಂದಾಯ ಹಾಗೂ ಪಿಂಚಣಿ ಅದಾಲತ್ ಕಾರ್ಯಕ್ರಮದಲ್ಲಿ ರೈತರಿಂದ ಅರ್ಜಿಗಳನ್ನು ಸ್ವೀಕರಿಸಿ ಅವರು ಮಾತನಾಡಿದರು.ಪಹಣಿಗಳಲ್ಲಿ ಲೋಪದೋಷ,ಪೌತಿ ವಾಸು ಖಾತೆ,ಸೇರಿದಂತೆ ಇಲಾಖೆಗೆ ಸಂಬಂಧಿಸಿದಂತಹ ಯಾವುದೇ ಕೆಲಸಗಳಲ್ಲಿ ದಾಖಲೆಗಳ ಸಮೇತ ಅರ್ಜಿಗಳನ್ನು ಸಲ್ಲಿಸಿದಲ್ಲಿ ನಿಮ್ಮ ಕೆಲಸ ಸುಲಭವಾಗಿ ಬೇಗ ಆಗುತ್ತದೆ ಎಂದರು.ಹೋಬಳಿ ಮಟ್ಟದ ಪಿಂಚಣಿ ಅದಾಲತ್ನಲ್ಲಿಭಾಗವಹಿಸಿ ಫಲಾನುಭವಿಗಳಿಗೆ ಮಂಜೂರಾತಿ ಪತ್ರ ವಿತರಿಸಿ. ಪಂಚ ಸೌಲಭ್ಯಗಳಾದ ಪಡಿತರ ಚೀಟಿ, ವೃದ್ಧಾಪ್ಯ ವೇತನ, ವಿಧವಾ ವೇತನ, ವಿಕಲಚೇತನ ವೇತನ, ವಸತಿ ಸೌಲಭ್ಯಗಳು ಅರ್ಹ ಫಲಾನುಭವಿಗಳಿಗೆ ತಲುಪಬೇಕಿದೆ. ಸರಕಾರದ ಯಾವುದೇ ಯೋಜನೆ, ಕಾರ್ಯಕ್ರಮಗಳ ಸದುಪಯೋಗ ಪಡೆಯಲು ಅರ್ಹ ಫಲಾನುಭವಿಗಳು ಮಧ್ಯವರ್ತಿಗಳ ಮೊರೆ ಹೋಗದೇ ನೇರವಾಗಿ ಸಂಬಂಧಪಟ್ಟ ಅಧಿಕಾರಿಗಳ ಬಳಿ ತೆರಳಿ ಅರ್ಜಿ ಸಲ್ಲಿಸುವಂತೆ ಕಿವಿಮಾತು ಹೇಳಿದರು. ಇದೆ ಸಂದರ್ಭದಲ್ಲಿ ಕಸಬಾ ವೃತ್ತದ ಕಂದಾಯ ಅಧಿಕಾರಿ ಸೇರಿದಂತೆ ಗ್ರಾಮಲೆಕ್ಕಿಕರು ಗ್ರಾಮದ ಮುಖಂಡರು ಭಾಗವಹಿಸಿದ್ದರು.

ವರದಿ-ಶ್ರೀಮಂತ್ ಎಕ್ಸ್ ಪ್ರೆಸ್ ಟಿವಿ ಶಿರಾ

Continue Reading

ಶಿರಾ

ಇಂದಿನಿಂದ ನೂತನ ವಿಧಾನ ಸೌಧ ಕಾರ್ಯಾರಂಭ….!

Published

on

By

ಶಿರಾ: ಶಿರಾ ನಗರದ ಬುಕ್ಕ ಪಟ್ಟಣ್ಣ ರಸ್ತೆಯಲ್ಲಿ ರಾಷ್ಟ್ರೀಯಾ ಹೆದ್ದಾರಿ ನಂ48 ಪಕ್ಕದಲ್ಲಿ ನಿರ್ಮಿಸಿರುವ ನೂತನ ಮಿನಿ ವಿಧಾನ ಸೌದ ತಾಲ್ಲೂಕು ಮಟ್ಟದ ಕಚೇರಿಗಳ ಸಮುಚ್ಛಯ ಕಟ್ಟಡಕ್ಕೆ ದಿನಾಂಕ 10-09-2020 ರಂದು ಹಲವಾರು ಗೊಂದಲಗಳ ನಡುವೆಯು ಮಿನಿ ಸೌಧದ ಉದ್ಘಾಟನೆ ನೆರೆವೇರಿಸಲಾಯಿತು. ಇನ್ನೂ ಕಾರ್ಯಕ್ರಮದಲ್ಲಿ ರಾಜ್ಯದ ಕಂದಾಯ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ಹಲವಾರು ಮುಖಂಡರು ಭಾಗಿಯಾಗಿದ್ದರು. ಉದ್ಘಾಟನೆ ನಂತರ ಇಂದು ಅಧಿಕೃತವಾಗಿ ತಹಶೀಲ್ದಾರರು ಕಚೇರಿ ಸೇರಿದಂತೆ ವಿವಿಧ ಇಲಾಖೆಗಳ ಕಚೇರಿಗಳು ಸ್ಥಳಾಂತರಗೊಂಡು ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿಸಿದರು.

ವರದಿ-ಶ್ರೀಮಂತ್ ಎಕ್ಸ್ ಪ್ರೆಸ್ ಟಿವಿ ಶಿರಾ..

Continue Reading

Trending

Copyright © 2023 EXPRESS TV KANNADA