ಅಯೋಧ್ಯೆ ರಾಮ ಮಂದಿರ ನಿರ್ಮಾಣದ ತಯಾರಿ ಹೇಗಿದೆ ಗೋತ್ತಾ..?

ಉತ್ತರ ಪ್ರದೇಶ : ಭಾರತೀಯರ ದಶಕಗಳ ಕನಸು ನಾಳೆ ಈಡೇರಲಿದೆ. ಐತಿಹಾಸಿಕ ರಾಮ ಮಂದಿರ ನಿರ್ಮಾಣದ ಭೂಮಿ ಪೂಜೆ ನಡೆಯಲ್ಲಿದ್ದು, ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗಲಿದ್ದಾರೆ. ಅಯೋಧ್ಯೆಯಲ್ಲಿ ರಾಮ ಮಂದಿರ ಹಂತ ಹಂತವಾಗಿ ನಿರ್ಮಾಣವಾಗಲಿದ್ದು, ಕೊನೆಯದಾಗಿ ದೇವಾಲಯ ಯಾವ ರೀತಿ ಕಾಣಲಿದೆ ಎಂದು ಚಿತ್ರ ಬಿಡುಗಡೆ ಮಾಡಿದ್ದು, ಎಲ್ಲೇಡೆ ವೈರಲ್ ಆಗಿದೆ. ದೇಶದಲ್ಲಿ ಹಿಂದೂ ದೇವಾಲಯಗಳ ವಾಸ್ತುಶಿಲ್ಪ ‘ ನಾಗರ ಶೈಲಿ’ ಪ್ರಕಾರ ರಾಮ ಮಂದಿರ ನಿರ್ಮಾಣವಾಗಲಿದೆ. ದೇವಾಲಯಲ್ಲಿ ಒಟ್ಟು ಐದು ಗುಮ್ಮಟಗಳು, ರಾಮನ ಗರ್ಭಗುಡಿಯ ಮೇಲೆ ಶಿಖರ ಸೇರಿದಂತೆ ಹಲವು ಸಂಖ್ಯೆಯಲ್ಲಿ ಬರುವ ಭಕ್ತರಿಗೆ ಹೋಗಲು ಅವಕಾಶವಿರುವ ರೀತಿಯಲ್ಲಿ ನಿರ್ಮಾಣಕ್ಕೆ ಸಜ್ಜಾಗಿದೆ. ದೇವಾಲಯದಲ್ಲಿ ಒಟ್ಟು ಸ್ತಂಬಗಳಿರಲಿದ್ದು, ದೇವಾಲಯದ ಸುತ್ತಮುತ್ತ 4 ಮಂದಿರಗಳು ಕೂಡ ನಿರ್ಮಾಣಗೊಳ್ಳಲಿದೆ. ಒಟ್ಟು ರಾಮ ಮಂದಿರ 161 ಅಡಿಯಲ್ಲಿ ಎತ್ತರ ನಿರ್ಮಾಣಗೊಳ್ಳಲಿದೆ ಎನ್ನಲಾಗಿದೆ.

ವರದಿ-ಸುಪ್ರಿಯಾಶರ್ಮಾ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು.

Please follow and like us:

Related posts

Leave a Comment