ಗುಡಿಸಿಲಿನಲ್ಲಿ ಅರಳಿದ ಪ್ರತಿಭೆ….!ಜನಸ್ಪಂದನ ಟ್ರಸ್ಟ್‌ ನಿಂದ ಆರ್ಥಿಕ ಧನ ಸಹಾಯ…

ತಿಪಟೂರು: ತಿಪಟೂರು ಟೌನ್ ಹಾಸನ ಸರ್ಕಲ್ ಶಾರದ ನಗರ ರೈಲ್ವೆ ಸ್ಟೇಷನ್ ಬಳಿ ವಾಸವಾಗಿರುವ ಅಲೆಮಾರಿ ಜನಾಂಗದ ಮೆಹಬೂಬ್ ಇವರ ಪುತ್ರಿ ರಿಜ್ವಾನಾ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ನಗರದ ಸುಮತಿ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದು. ಈ ಭಾರಿಯ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ 82%ರಷ್ಟು ಅಂಕಗಳಿಸಿದ್ದು ,ಕಡು ಬಡತನದಲ್ಲಿ ವಿದ್ಯುತ್ ಇಲ್ಲದ ಗುಡಿಸಲಿನಲ್ಲಿ ಓದಿ ಪೋಷಕರಿಗೆ ಮತ್ತು ಓದಿದ ಶಾಲೆಗೆ ಕೀರ್ತಿ ತಂದಿರುತ್ತಾರೆ. ಈ ಬಾಲಕಿ ಯನ್ನು ಗುರುತಿಸಿದ ತುಮಕೂರು ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ಜನಸ್ಪಂದನ ಟ್ರಸ್ಟ್ ಅಧ್ಯಕ್ಷರಾದ ಸಿ‌.ಬಿ.ಶಶಿಧರ್ ರವರು ಬಾಲಕಿಯ ವಾಸಿಸುತ್ತಿರುವ ಮನೆಗೆ ಭೇಟಿ ಕೊಟ್ಟು ಧನ ಸಹಾಯ ಮಾಡಿದರು, ಮತ್ತು ಅವರ ಮುಂದಿನ ಉನ್ನತ ಶಿಕ್ಷಣಕ್ಕೆ ಆರ್ಥಿಕ ಸಹಾಯದ ಭರವಸೆ ನೀಡಿದರು.ಇವರ ಜೊತೆ ಬಾಲಕಿಯ ಕುಟುಂಬ ಮತ್ತು ಸ್ನೇಹ ಜ್ಯೋತಿ ಸಂಸ್ಥೆಯ ಸಂತೋಷ ಮತ್ತಿಘಟ್ಟ ಇವರು ಜೊತೆಯಲ್ಲಿದ್ದರು.

ವರದಿ-ಸಿದ್ದೇಶ್ವರ ಸಿಎನ್ ಎಕ್ಸ್ ಪ್ರೆಸ್ ಟಿವಿ ತಿಪಟೂರು.

Please follow and like us:

Related posts

Leave a Comment