ಆಡಂಬರವಿಲ್ಲದೆ ಸಂಪ್ರಾದಾಯಿಕವಾಗಿ ಗಣೇಶೋತ್ಸವ ಮಾಡಿ… ತಹಶಿಲ್ದಾರ್ ಚಂದ್ರಶೇಖರ್ ಸ್ಪಷ್ಟನೆ..!

ತಿಪಟೂರು :ಆಡಂಬರವಿಲ್ಲದೇ, ಸಾಂಪ್ರದಾಯಕವಾಗಿ ಗಣೇಶೋತ್ಸವವನ್ನು ಆಚರಿಸಲು ಯಾವುದೇ ತೋಂದರೆಯಿಲ್ಲ, ಆದರೆ ಸಾರ್ವಜನಿಕವಾಗಿ ಗಣೇಶನನ್ನು ಕೂರಿಸಿದರೆ ಮಾತ್ರ ಕೆಲವು ಸರ್ಕಾರಿ ನಿಯಮಗಳಿದ್ದು ಅವುಗಳಿಗನುಗುಣವಾಗಿ ಅನುಮತಿಯನ್ನು ನೀಡಲಾಗುವುದು ಎಂದು ತಹಸೀಲ್ದಾರ್ ಚಂದ್ರಶೇಖರ್ ತಿಳಿಸಿದರು.ನಗರದ ತಾಲ್ಲೂಕು ಕಛೇರಿಯಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕೋವಿಡ್-೧೯ ಇರುವುದರಿಂದ ಕೇಂದ್ರ ಸರ್ಕಾರದ ನಿಯಮಾವಳಿಗಳನ್ನು ಪಾಲಿಸುವಂತೆ ತಿಳಿಸಿ, ಗಣೇಶನನ್ನು ಕೂರಿಸಲು ಅನುಮತಿ ಪಡೆಯಲು ಯಾವುದೇ ಕಛೇರಿಗಳನ್ನು ಅಲೆಯುವಂತಿಲ್ಲ,ನಗರಸಭೆಯ ಆವರಣದಲ್ಲಿ ಆರಕ್ಷಕ, ವಿದ್ಯುತ್, ಅಗ್ನಿಶಾಮಕ ಇಲಾಖೆಗಳ ಪ್ರತಿನಿಧಿಗಳಿದ್ದು ಏಕಗವಾಕ್ಷಿಯ ಮೂಲಕ ಅನುಮತಿ ನೀಡಲಾಗುತ್ತಿದೆ ಎಂದು ತಿಳಿಸಿದರು.ಡಿ.ವೈ.ಎಸ್ಪಿ ಮಾತನಾಡಿ ನಿಯಮಾನುಸಾರ ಅನುಮತಿ ಪಡೆದು ಕಾರ್ಯಕ್ರಮಗಳಿಗೆ ಸಂಪೂರ್ಣ ಜವಾಬ್ದಾರಿಯಾಗಿರುತ್ತದೆ. ಸಾರ್ವಜನಿಕ ಸ್ಥಳಗಳಲ್ಲಿ ಇರುವಂತಹ ಗಣೇಶಮೂರ್ತಿ ೪ ಅಡಿಗೆ ಸೀಮಿತಗೊಳಿಸಲಾಗಿದ್ದು ಮನರಂಜನೆ, ಅನ್ನದಾನ ಮುಂತಾದಕಾರ್ಯಕ್ರಮಗಳನ್ನು ಮಾಡುವ ಹಾಗಿಲ್ಲ, ಜೊತೆ ಸಂಪೂರ್ಣವಾಗಿ ಪಟಾಕಿಯನ್ನು ನಿಷೇದಿಸಲಾಗಿದೆ ಎಂದು ತಿಳಿಸಿದ ಅವರು ಗಾಂಧಿನಗರದಲ್ಲಿ ಗಣೇಶನನ್ನು ಕೂರಿಸುವವರಿಗಾಗಿ ಗಾಂಧಿನಗರದ ಪೋಲೀಸ್ ಚೌಕಿ ಮುಂಭಾಗ ತಾತ್ಕಾಲಿಕವಾಗಿ ಗಣೇಶನ ವಿಸರ್ಜನೆಗಾಗಿ ತೊಟ್ಟಿಯನ್ನು ನಿರ್ಮಿಸಲಾಗುವುದೆಂದು ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಪೌರಾಯುಕ್ತ ಉಮಾಕಾಂತ್ ಇ.ಓ ಸುದರ್ಶನ್ ಇದ್ದರು.

ವರದಿ- ಸಿದ್ದೇಶ್ವರ ಸಿ.ಎನ್ ಎಕ್ಸ್ ಪ್ರೆಸ್ ಟಿವಿ ತಿಪಟೂರು.

Please follow and like us:

Related posts

Leave a Comment