ಅನುದಾನ ರಹಿತ ಶಾಲಾ ಕಾಲೇಜುಗಳ ಶಿಕ್ಷಕರ ಪ್ರತಿಭಟನೆ..!

ಕೊರೋನ ಸಾಂಕ್ರಮಿಕ ರೋಗ ಇಡೀ ಪ್ರಪಂಚದಾದ್ಯಂತ ಹರಡಿದ್ದು ಅನೇಕ ಸಾವು ನೋವುಗಳು ಸಂಭವಿಸಿವೆ … ಇದರಿಂದ ದೇಶಾದ್ಯಂತ ಶಾಲಾಕಾಲೇಜುಗಳಿಗೆ ಬೀಗ ಹಾಕಿದ್ದು ಇದರಿಂದಾಗಿ ಅನುದಾನರಹಿರ ಶಾಲೆ ಹಾಗು ಕಾಲೇಜಿನ ಶಿಕ್ಷಕರಿಗೆ ಕಳೆದ ಆರು ತಿಂಗಳಿಂದ ಸಂಬಳವಿಲ್ಲದೆ ಬದುಕು ಕಷ್ಟ ಕರವಾಗಿದೆ ..‌ ಹಾಗಾಗಿ ಕೂಡಲೇ ಸರ್ಕಾರ ಶಿಕ್ಷಕರಿಗೆ ಸಹಾಯ ಮಾಡುವಂತೆ ಶಾಲಾ‌ಶಿಕ್ಷಕರು ಒತ್ತಾಯಿಸುತ್ತಿದ್ದಾರೆ ….
ಹೀಗೆ ತಾಲ್ಲೂಕು ಕಚೇರಿ ಮುಂಭಾಗ ಸಾಲು ಗಟ್ಟಿ ಕೂತು ಪ್ರತಿಭಟನೆ ನಡೆಸುತ್ತಿರುವವರು ಯಾವುದೇ ಹೋರಾಟಗಾರರಲ್ಲ .. ಬದಲಿಗೆ ವಿದ್ಯಾರ್ಥಿಗಳ ಬವಿಷ್ಯವನ್ನು ರೂಪಿಸುವ ಶಾಲಾ ಶಿಕ್ಷಕರು .. ಹೌದು ಇವರೆಲ್ಲ ಬೆಂಗಳೂರು ಹೊರವಲಯದ ಆನೇಕಲ್ ನ ಸುತ್ತಮುತ್ತಲ ಖಾಸಗಿ ಶಾಲೆಗಳ ಶಿಕ್ಷಕರುಗಳು … ಕೊರೋನ ದಿಂದಾಗಿ ಇವರ ಬದುಕು ಸಾಗಿಸಲೂ ಸಹ ಸಹ ಕಷ್ಟ ಪಡುವಂತಾಗಿರುವ ಪರಿಸ್ಥಿತಿ ‌ನಿರ್ಮಾಣವಾಗಿದ್ದು ಇದರಿಂದಾಗ ಸರ್ಕಾರ ನಮಗೆ ಯಾವುದೇ ಸಹಾಯ ಮಾಡಿಲ್ಲ … ಜೊತೆಗೆ ಎಲ್ಲರಿಗೂ ಆಟೋ ಕ್ಯಾಬ್ ಡ್ರೈವರ್ ಗಳಿಗೆ ಸೇರಿದಂತೆ ಇನ್ನು ಹಲವರಿಗೆ ವಿಶೇಷ ಪ್ಯಾಕೇಜ್ ಘೋಷಿಸಿರುವ ಸರ್ಕಾರ ನಮ್ಮ ವಿಚಾರದಲ್ಲಿ ನಿರ್ಲಕ್ಷ್ಯ ಧೋರಣೆ ತೋರ್ತಾ ಇದೆ ಎಂದು ಆರೋಪಿಸಿ ಇಂದು ಆನೇಕಲ್ ನ ತಾಲ್ಲೂಕು ಕಚೇರಿ ಮುಂಭಾಗ ಪ್ರತಿಭಟನೆ ಯನ್ನು ನಡೆಸಿದ್ದಾರೆ ….
ಇನ್ನು ಈ ಕುರಿತು ಈಗಾಗಲೇ ಸನ್ಮಾನ್ಯ ದೇವೇಗೌಡರು ಸಹ ಸರ್ಕಾರಕ್ಕೆ ಪತ್ರ ಬರೆದಿದ್ದು ..‌ಜೊತೆಗೆ ಸಿಎಂ ಯಡಿಯೂರಪ್ಪ ಅವರಿಗೆ ಈಗಾಗಲೇ ಮನವರಿಗೆ ಮಾಡಿಕೊಟ್ಟಿದ್ದರೂ ಸಹ ಸರ್ಕಾರ ನಿರ್ಲಕ್ಷ್ಯ ಮಾಡುತ್ತಿದೆ ‌ಇನ್ನು ಶಿಕ್ಷಕರಿಗೆ ಕೊರೋನದಿಂದಾಗಿ ಕಳೆದ ೬ ತಿಂಗಳಿಂದ ಯಾವುದೇ ಸಂಬಳ ವಿಲ್ಲದೆ ಜೀವನ ಬಹಳ ಕಷ್ಟ ಕರವಾಗಿದೆ ‌..ಅನೇಕ ವಲಯಗಳಲ್ಲಿನ ಜನರ ಸಮಸ್ಯೆಗೆ ನೆರೆವಾದ ಸರಕಾರ ನಮ್ಮ ವಿಚಾರದಲ್ಲಿ ನಿರ್ಲಕ್ಷ್ಯ ತೋರಿದೆ .. ಇನ್ನಾದರೂ ಸರ್ಕಾರ ನಮ್ಮ ಕಷ್ಟಗಳಿಗೆ ಸ್ಪಂದಿಸಿ ವಿಶೇಷ ಪ್ಯಾಕೇಜ್ ಬಿಡುಗಡೆ ಮಾಡಬೇಕು ಎಂದು ಶಿಕ್ಷಕರು ಮನವಿ ಮಾಡಿಕೊಂಡಿದ್ದಾರೆ …‌
ಒಟ್ಟಾರೆ ಕೊರೋನ ಈಗಾಗಲೇ ಎಷ್ಟೋ ಮಂದಿಯ ಬದುಕನ್ನು ಕಿತ್ತುಕೊಂಡಿದ್ದು ಸರ್ಕಾರ ಸಹ ಶಿಕ್ಷಕರು, ಕುಂಬಾರರು ಸೇರಿದಂತೆ ಅನೇಕ‌ ವಲಯಗಳ ಜನರನ್ನು ಮರೆತಿದ್ದು ಇನ್ನಾದರೂ ಸರ್ಕಾರ ಎಚ್ಚೆತ್ತುಕೊಂಡು ಇವರಿಗೆಲ್ಲ. ನೆರವಾಗಲಿ ಎಂಬುದು ಎಲ್ಲಾರ ಆಶಯವಾಗಿದೆ.

ವರದಿ- ಕಾರ್ತಿಕ್ ಗೌಡ ಆನೇಕಲ್

Please follow and like us:

Related posts

Leave a Comment