ಗಣಪತಿ ವಿಸರ್ಜನೆ ವಿಚಾರ ಸವರ್ಣಿಯರಿಂದ ದಲಿತರ ಮೇಲೆ ಹಲ್ಲೆ..!

ರಾಯಚೂರು: ಸಿಂಧನೂರಿನ ಎಲೆ ಕೂಡ್ಲಿಗಿ ಗ್ರಾಮದಲ್ಲಿ ದಲಿತ ವರ್ಗದವರು ಗಣಪನನ್ನು ಪ್ರತಿಷ್ಠಾಪನೆ ಮಾಡಿದ್ದರು. 3 ದಿನಗಳ ನಂತರ ಗಣಪನನ್ನು ವಿಸರ್ಜನೆ ಮಾಡಿ ಕೆರೆಯಿಂದ ತೆರಳುವ ಸಮಯದಲ್ಲಿ ಸವರ್ಣಿಯರು ದಲಿತರಿಗೆ ಜಾತಿ ನಿಂದನೆ ಮಾಡಿದ್ದು ಪ್ರಶ್ನೆ ಮಾಡಿದ್ದಕ್ಕೆ ದಲಿತ ಯುವಕನ ಮೇಲೆ ಹಲ್ಲೇ ನಡೆಸಿದ್ದಾರೆ.ಈ ಕುರಿತಂತೆ ತುರುವಿಹಾಳ ಪೋಲಿಸ್ ಠಾಣೆಯಲ್ಲಿ ದೂರು ನೀಡಲು ದಲಿತರು ತೆರಳಿದಾಗ ಎಲೆ ಕೂಡ್ಲಿಗಿ ಗ್ರಾಮದ ಕೆಲವರು ಅವರನ್ನು ತಡೆದು ಇದನ್ನು ನಾವೇ ಪಂಚಾಯತಿ ಮಾಡಿ ಸರಿಪಡಿಸಿಕೊಳ್ಳೋಣವೆಂದು ತಿಳಿಸಿದ್ದಾರೆ. ದಲಿತರು ಅವರ ಮಾತಿಗೆ ಬೆಲೆ ಕೊಟ್ಟು ದೂರು ನೀಡದೆ ವಾಪಾಸ್ ಆಗಿದ್ದಾರೆ. ಇಂದು ಮುಂಜಾನೆ ಪಂಚಾಯಿತಿ ನಡೆಸುವ ಸಂದರ್ಭದಲ್ಲಿ ಸವರ್ಣೀಯರು ಎಲ್ಲಾ ದಲಿತ ಯುವಕರು ಹಾಗೂ ಮಹಿಳೆಯರ ಮೇಲೆ ಸುಮಾರು 20 ಮಹಿಳೆಯರು 25 ದಲಿತ ಪುರುಷರ ಮೇಲೆ ಮತ್ತೇ ಹಲ್ಲೆ ನಡೆಸಿದ್ದಾರೆ. ಹಲ್ಲೆಗೊಳಗಾದ ದಲಿತರು ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆಪಡೆಯುತ್ತಿದ್ದು, ದಲಿತ ಯುವಕ ನಿರುಪಾದಿ ಎನ್ನುವ ಯುವಕನ ಸ್ಥಿತಿ ಚಿಂತಾಜನಕವಾಗಿದೆ. ಆತನನ್ನು ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಸಾರ್ವಜನಿಕ ತುರುವಿಹಾಳ ಪೋಲಿಸ್ ಠಾಣೆಯ ಪಿ.ಎಸ್. ಐ ಎರಿಯಪ್ಪ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ.

ವರದಿ-ಸೈಯದ್ ಬಂದೇನವಾಜ್ ಎಕ್ಸ್ ಪ್ರೆಸ್ ಟಿವಿ ಸಿಂಧನೂರು

Please follow and like us:

Related posts

Leave a Comment