ಹೆಸರಿಗೆ ಹೈಟೆಕ್ , ವಾಸ್ತವವಾಗಿ ಗಬ್ಬು ನಾರುತ್ತಿರುವ ಬಸ್ ನಿಲ್ದಾಣ…!

ರಾಯಚೂರು: ರಾಯಚೂರು ಜಿಲ್ಲೆಯ ಸಿಂಧನೂರು ನಗರದಲ್ಲಿರುವ ಹೈಟೆಕ್ ಬಸ್ ನಿಲ್ದಾಣದ ಗೋಡೆಗಳ ಮೇಲೆ ಗುಟ್ಕಾ ಕಲೆಗಳೆ ರಾರಜಿಸುತ್ತಿವೆ, ಇತ್ತ ನಿಲ್ದಾಣದಲ್ಲಿನ ಶೌಚಾಲಯ ನಿರ್ವಹಣೆ ಇಲ್ಲದೇ, ತ್ಯಾಜ್ಯ ನೀರು ನಿಲ್ದಾಣದಲ್ಲೆ ಹರಿಯುತ್ತಿದೆ. ಹಲವು ವರ್ಷಗಳ ಹಿಂದೆ ರಾಯಚೂರು ಜಿಲ್ಲೆಗೆ ಎರಡು ಹೈಟೆಕ್ ಬಸ್ ನಿಲ್ದಾಣಗಳನ್ನು ಸರ್ಕಾರ ಮಂಜೂರು ಮಾಡಿತ್ತು. ನಿರ್ಮಾಣವಾದ ಬಸ್ ನಿಲ್ದಾಣಗಳು ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ನಿರ್ವಹಣೆ ಕೊರತೆಯಿಂದ ಇಂದು ಹೈಟೆಕ್ ಬಸ್ ನಿಲ್ದಾಣ ಕಸದ ತೊಟ್ಟಿಯಾಗಿ ಗಬ್ಬು ನಾರುತ್ತಿದೆ. ಇನ್ನೂ ಸಾರಿಗೆ ಇಲಾಖೆಯ ನಿಯಮದಂತೆ ಬಸ್ ನಿಲ್ದಾಣದಲ್ಲಿ ದೂಮಪಾನ ಮತ್ತು ಗುಟ್ಕಾ ತಿಂದು ಗೋಡೆಗಳ ಮೇಲೆ ಉಗಿದರೆ ದಂಡ ಹಾಕಬೇಕು, ಈ ನಿಲ್ದಾಣದಲ್ಲಿ ಅದ್ಯಾವುದು ಪಾಲನೆ ಮಾಡುತ್ತಿಲ್ಲ. ಇದರಿಂದ ನಿಲ್ದಾಣದ ಪ್ರತೀ ಗೋಡೆಯ ಮೇಲೆ ಗುಟ್ಕಾಗಳದ್ದೆ ಕಾರುಬಾರಾಗಿದೆ. ಇನ್ನು ನಿಲ್ದಾಣದಲ್ಲಿರುವ ಶೌಚಾಲಯದ ಸಂಪೂರ್ಣ ಹದಗೆಟ್ಟಿದ್ದು ಇದರ ನೀರು ನಿಲದ್ದಾಣದಲ್ಲೆ ಹರಿಯುತ್ತಿದೆ. ಇದರಿಂದ ನಿಲ್ದಾಣದ ತುಂಬ ದುರ್ವಾಸನೇ ಬರುತ್ತಿದ್ದು ಪ್ರಯಾಣಿಕರು ದುರ್ವಾಸನೆಯಲ್ಲೆ ಕುಳಿತು ಅಧಿಕಾರಿಗಳಿಗೆ ಹಿಡಿ ಶಾಪ ಹಾಕಿ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನೂ ಕೆಲ ಪ್ರಯಾಣಿಕರೆಗೆ ಇದು ಬಸ್ ನಿಲ್ದಾಣವೂ ಕೊಳಚೆ ಪ್ರದೇಶವೋ ಎನ್ನುವಷ್ಟರ ಮಟ್ಟಿಗೆ ನಿಲ್ದಾಣ ಬಂದು ನಿಂತಿದೆ. ಇಷ್ಟಾದರೂ ಸಿಂಧನೂರು ವಿಭಾಗದ ಸಾರಿಗೆ ಇಲಾಖೆ ವ್ಯವಸ್ಥಾಪಕರು ಏನು ಆಗಿಲ್ಲ ಎಂಬ ರೀತಿಯಲ್ಲೇ ವರ್ತಿಸುತ್ತಿರುವುದು ಎಷ್ಟರ ಮಟ್ಟಿಗೆ ಸರಿ..

ವರದಿ-ಸೈಯದ್ ಬಂದೇನವಾಜ್ ಎಕ್ಸ್ ಪ್ರೆಸ್ ಟಿವಿ ಸಿಂಧನೂರು

Please follow and like us:

Related posts

Leave a Comment