ಹೆಚ್.ಆರ್.ಎಸ್ ತಂಡದಿಂದ ನಗರದ ವಾರ್ಡ್ ಗಳಿಗೆ ಬ್ಲೀಚಿಂಗ್ ಸಿಂಪಡನೆ..!

ಸಿಂಧನೂರು:ಹ್ಯುಮ್ಯಾನಿಟೇರಿಯನ್ ರಿಲೀಫ್ ಸೊಸೈಟಿ (HRS) ತಂಡದಿಂದ ಇಂದು ನಗರದ ಕಸಾಬ್‌ವಾಡಿ ಮತ್ತು ಕಾಟಿಬೇಸ್ ವಾರ್ಡ್ ಗಳಲ್ಲಿ ಬ್ಲೀಚಿಂಗ್ ಪೌಡರ್ ಸಿಂಪಡಿಸಿ ಸ್ವಚ್ಚತಾ ಕಾರ್ಯಕ್ರಮ ನಡೆಸಲಾಯಿತು. ಡಾ.ವಸೀಮ್ ಮತ್ತು ಜಮಾತೆ ಇಸ್ಲಾಮೀ ಸಮಾಜ ಸೇವಾ ಘಟಕದ ಸಂಚಾಲಕ ಬಾಬರ್ ಬೇಗ್ ನೇತೃತ್ವದಲ್ಲಿ ಎರಡು ವಾರ್ಡ್ಗಳ ಚರಂಡಿ ಹಾಗೂ ಅಸ್ವಚ್ಚತೆಯ ತಾಣಗಳಲ್ಲಿ ಬ್ಲೀಚಿಂಗ್ ಪೌಡರ್ ಸಿಂಪಡಿಸಲಾಯಿತು. ಈ ಕಾರ್ಯದಲ್ಲಿ ಸುಮಾರು 15 ಜನ ಕಾರ್ಯಕರ್ತರು ಶ್ರಮದಾನ ಮಾಡಿದರು.ಇನ್ನೂ ಈ ಸ್ವಚ್ಚತಾ ಕಾರ್ಯದಲ್ಲಿ ಡಾ.ವಸೀಮ್,ಬಾಬರ್ ಬೇಗ್, ನೂರ್ ಮುಹಮ್ಮದ್, ಹುಸೇನ್ ಮದೀನಾ, ಹಾಮಿದ್ ಮುಲ್ಲಾ, ಅಸ್ರಾರ್,ರಿಯಾಜ್, ಉಸ್ಮಾನ್ ಖಾನ್, ಸಮದ್ ಚೌದ್ರಿ, ಚಾಂದ್‌ಪಾಷಾ ಜಾಗಿರ್ದಾರ್,ಇಸ್ಮಾಯಿಲ್ ಗಡಿಗಿ, ಅಲಿ ಮುರ್ತುಜಾ,ಬಾಬು ಸಾಬ್ ಸೇರಿದಂತೆ ಹಲವು ಕಾರ್ಯಕರ್ತರು ಭಾಗವಹಿಸಿದ್ದರು.

ವರದಿ-ಸೈಯದ್ ಬಂದೇನವಾಜ್ ಎಕ್ಸ್ ಪ್ರೆಸ್ ಟಿವಿ ಸಿಂಧನೂರು…

Please follow and like us:

Related posts

Leave a Comment