ಬೆಳ್ಳಂ ಬೆಳಿಗ್ಗೆ ಅಟ್ಟಹಾಸ ಮೆರೆದ ಜವರಾಯ- ಬೆಚ್ಚಿ ಬಿದ್ದ ರಾಮದುರ್ಗ ಜನತೆ..!

ಕೂಡ್ಲಿಗಿ: ಹರಪನಹಳ್ಳಿ ಮಾರ್ಗದಿಂದ ಬಳ್ಳಾರಿಗೆ ಹೋಗುತ್ತಿರುವಾಗ ರಾಮದುರ್ಗದ ಹತ್ತಿರ ರಸ್ತೆ ಬದಿಯಲ್ಲಿ ಇರುವ ತುಂಗಭದ್ರಾ ಇನ್ನಿರಿನ ಪೈಪಿಗೆ ಚಾಲಕನ ನಿಯಂತ್ರಣ ತಪ್ಪಿ ಕಾರು ಗುದ್ದಿದೆ.ಪರಿಣಾಮ ಚಾಲಾಕ ಪ್ರಜ್ಞೆ ತಪ್ಪಿ ಬಿದ್ದಿದ್ದು, ಯಾರೊಬ್ಬರು ಆತನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಾದೆ ಕೈಕಟ್ಟಿ ನಿಂತು ನೊಡುತ್ತಿದ್ದರು. ಇದೆ ಸಮಯದಲ್ಲಿ ಸ್ಥಳಕ್ಕೆ ಬಳ್ಳಾರಿ ಜಿಲ್ಲೆಯ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾದ ಸೂರೆ ಪಾಪಣ್ಣ ಗಾಡಿಯಲ್ಲಿ ಇದ್ದವರನ್ನು ಹೊರಕ್ಕೆ ತೆಗೆದು ಆಂಬುಲೆನ್ಸ್ ಗೆ ಕರೆ ಮಾಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇನ್ನೂ ಕಾರಿನಲ್ಲಿ ಸಾಕಷ್ಟು ಹಣವಿದ್ದುದ್ದನ್ನು ನೊಡಿದ ಸೂರೆ ಪಾಪಣ್ಣ ಗಾಬರಿಯಿಂದ ಗುಡೆಕೋಟೆ ಪೋಲಿಸರಿಗೆ ವಿಚಾರ ಮುಟ್ಟಿಸಿದಾಗ ತಕ್ಷಣ ಕಾರ್ಯ ಪ್ರರುತ್ತರಾದ ಗುಡೆಕೋಟೆ ಪಿಎಸ್ಐ ರಾಮಪ್ಪ ಹಾಗೂ ಸಿಬ್ಬಂದಿ ವರ್ಗದವರು ಸ್ಥಳಕ್ಕೆ ಆಗಮಿಸಿ ಸ್ಥಳೀಯರ ಸಹಕಾರದೊಂದಿಗೆ ಕೂಡ್ಲಿಗಿ ತಾಲ್ಲೂಕು ಆಸ್ಪತ್ರೆಗೆ ಆಂಬುಲೆನ್ಸ್ ಮುಕಾಂತರ ಕಳುಹಿಸಿ ಮಾನವಿತೆ ಮೆರೆದಿದ್ದಾರೆ. ಮಾದ್ಯಮಾದವರೊಂದಿಗೆ ಮಾತನಾಡಿದ ಪಿಎಸ್ಐ ರಾಮಪ್ಪ ಗಾಯಳುಗಳ ಮಾಹಿತಿ ಖಚಿತವಾಗಿ ತಿಳಿಯದು ಅವರು ಮಾತನಾಡುವ ಸ್ಥಿತಿಯಲ್ಲಿ ಇಲ್ಲಾ ಆದ್ದರಿಂದ ಹೆಚ್ಚಾಗಿ ತಿಳಿಯದು ಎಂದರು ಮತ್ತು ನಮ್ಮ ಗುಡೆಕೋಟೆ ಭಾಗದಲ್ಲಿ ಪಾಪಣ್ಣ ಸಹಕಾರ ದೊಡ್ಡದು ಇಂಥ ಸಂದರ್ಭದಲ್ಲಿ ಅವರು ತಕ್ಷಣ ಸ್ಪಂದಿಸುತ್ತಾರೆ ಎಂದು ತಿಳಿಸಿದರು.

ವರದಿ-ನಂದೀಶ್ ನಾಯಕ ಎಕ್ಸ್ ಪ್ರೆಸ್ ಟಿವಿ ಕೂಡ್ಲಿಗೆ..

Please follow and like us:

Related posts

Leave a Comment