ಮಳವಳ್ಳಿ ತಾಲ್ಲೂಕಿನ ಜನರನ್ನು ಬೆಂಬಿಡದೆ ಕಾಡುತ್ತೀರುವ ಕೊರೊನಾ..!

ಮಳವಳ್ಳಿ : ಮಳವಳ್ಳಿ ತಾಲ್ಲೂಕಿನಲ್ಲಿ ಕೋರೋನಾ ಸೋಂಕು ಬಿಂಬಿಡದೆ ಕಾಡುತ್ತಿದ್ದು , ಇದುವರೆಗೂ ಕೊರೊನಾ ಸೋಂಕಿಗೆ 8ನೇ ಬಲಿಯಾಗಿದೆ. ಮಳವಳ್ಳಿ ಪಟ್ಟಣದ ಗಂಗಾಮತ ಬೀದಿಯ 55 ವರ್ಷದ ಪುರುಷ ಸಾವನ್ನಪ್ಪಿದ್ದವನಾಗಿದ್ದು. ಈತನಿಗೆ ಹೃದಯ ಸಂಬಂಧ ಕಾಯಿಲೆಯಿಂದ ನರಳುತ್ತಿದ್ದ ಜೊತೆಗೆ ಕೊರೊನಾ ಸೋಂಕು ಕಾಣಿಸಿಕೊಂಡು ಸಾವನ್ನಪ್ಪಿದ್ದ ಮಳವಳ್ಳಿ ಪಟ್ಟಣದ ರುದ್ರಭೂಮಿಯಲ್ಲಿ ಶವ ಸಂಸ್ಕಾರ ಮಾಡಲಾಯಿತು. ಶವ ಸಂಸ್ಕಾರ ಮಾಡಲು ಜೆಸಿಪಿ ಮೂಲಕ ಗುಂಡಿ ತೋಡಿ ಪೂಜಾ ವಿಧಾನ ಮಾಡಲಾಯಿತು.ಈ ಶವವನ್ನು ನೋಡಲು ಸಂಬಂಧಿಕರು ಮುಗಿಬಿದ್ದ ದೃಶ್ಯವನ್ನು ಕಾಣಬಹುದು.ಇನ್ನೂ ಮಳವಳ್ಳಿ ತಾಲ್ಲೂಕಿನಲ್ಲಿ ಇದುವರೆಗೂ 560 ಮಂದಿ ಕೋರೋನಾ ಸೋಂಕಿತರಿದ್ದು ಇದರಲ್ಲಿ 285 ಮಂದಿ ಗುಣಮುಖರಾಗಿದ್ದು,277 ಮಂದಿ ಸಕ್ರಿಯ ಪ್ರಕರಣದಲ್ಲಿದ್ದು, ಮಳವಳ್ಳಿ ಪಟ್ಟಣ ಕೆ.ಎಸ್ ಆರ್ ಟಿ ಸಿ ಚಾಲಕರ ತರಬೇತಿ ಕೇಂದ್ರ ಹಾಗೂ ವಡ್ಡರಹಳ್ಳಿ ಗ್ರಾಮದಲ್ಲಿರುವ ವಸತಿ ಶಾಲೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದಿನೇ ದಿನೇ ಕೋರೋನಾ ಹೆಚ್ಚಾಗುತ್ತಿದ್ದರೂ ತಾಲ್ಲೂಕು ಆಡಳಿತ ಜನರಲ್ಲಿ ಜಾಗೃತಿ ಮೂಡಿಸಲು ವಿಫಲವಾಗಿರುವುದು ಎದ್ದು ಕಾಣುತ್ತಿದೆ.

ವರದಿ: ಎ.ಎನ್ ಲೋಕೇಶ್ ಎಕ್ಸ್ ಪ್ರೆಸ್ ಟಿವಿ ಮಳವಳ್ಳಿ

Please follow and like us:

Related posts

Leave a Comment