ದಲಿತರ ಮೇಲಿನ ದೌರ್ಜನ್ಯ ಖಂಡಿಸಿ ಪ್ರತಿಭಟನೆ..!!

ಮಳವಳ್ಳಿ: ದಲಿತರ ಮೇಲಿನ ದೌರ್ಜನ್ಯಗಳನ್ನು ತಡೆಯಲು ಒತ್ತಾಯಿಸಿ ದಲಿತ ಹಕ್ಕುಗಳ ಸಮಿತಿ ಕರ್ನಾಟಕದ ವತಿಯಿಂದ ಮಳವಳ್ಳಿ ಪಟ್ಟಣದ ತಾಲ್ಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.ದಲಿತರ ಮೇಲೆ ಶೋಷಣೆ ಮಾಡುತ್ತಿರುವವರ ವಿರುದ್ದ ಘೋಷಣೆಯನ್ನು ಕೂಗಿದರು. ದಲಿತ ಹಕ್ಕುಗಳ ಸಮಿತಿ ಜಿಲ್ಲಾ ಸಂಚಾಲಕ ಆರ್ .ಕೃಷ್ಣ ಮಾತನಾಡಿ, ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಬೂದಿಹಾಳ ಪಿ.ಎಚ್ ಗ್ರಾಮದ ಮಲ್ಲಿಕಾರ್ಜುನ ದೇವಸ್ಥಾನದ ಜಗುಲಿಯ ಮೇಲೆ ಅನಿಲ್ ಇಂಗಳಗಿ ಎಂಬ ದಲಿತ ಯುವಕ ಸವರ್ಣಿಯರಿಗೆ ಸಮಾನವಾಗಿ ಕುಳಿತನೆಂದು ಹಾಡುಹಗಲೇ ಚೂರಿಯಿಂದ ಇರಿದು ಕೊಲೆ ಮಾಡಿರುವುದು ದಲಿತ ಹಕ್ಕುಗಳ ಸಮಿತಿ ಖಂಡಿಸುತ್ತದೆ ಎಂದರು.ಇದರ ಬೆನ್ನಲ್ಲೇ ಕೋಲಾರ ಜಿಲ್ಲೆ ಕೆ.ಜಿ ಎಫ್ ತಾಲ್ಲೂಕಿನ ಕೆ.ಸಿ ರೆಡ್ಡಿ ಗಾಂಡ್ಲಹಳ್ಳಿ ಗ್ರಾಮದಲ್ಲಿ ದಲಿತರಿಗೆ ಸೇರಿದ ಜಮೀನಿನ ವಿಷಯವಾಗಿ ಶಿವರಾಮಪ್ಪ ಎಂಬ ದಲಿತನ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿರುವುದು ಖಂಡನೀಯ.ಇತ್ತೀಚಿಗೆ ಮದ್ದೂರು ತಾಲ್ಲೂಕಿನ ಎಸ್.ಐ ಹೊನ್ನಲಗೆರೆ ಗ್ರಾಮದಲ್ಲಿ ಮಹಾನಾಯಕ ಅಂಬೇಡ್ಕರ್ ಪ್ಲೇಕ್ಸ್ ಗೆ ಬೆಂಕಿ ಹಂಚಿದ್ದು ಹೀಗೆ ದಲಿತರ ಮೇಲೆ ನಿರಂತರವಾಗಿ ನಡೆಯುತ್ತಿದ್ದರೂ ಯಾವ ಕ್ರಮಕೈಗೊಳ್ಳುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.ಇನ್ನೂ ಪತ್ರಿಭಟನಾಕಾರು ಉಪತಹಸೀಲ್ದಾರ್ ವಸಂತಕುಮಾರರವರಿಗೆ ಮನವಿ ಪತ್ರ ಸಲ್ಲಿಸಿದರು.ಪ್ರತಿಭಟನೆಯಲ್ಲಿ ದಲಿತ ಹಕ್ಕುಗಳ ಸಮಿತಿ ತಾಲ್ಲೂಕು ಸಂಚಾಲಕ ಎಂ.ಡಿ ಶಂಕರ್, ಗಿರಿಜಮ್ಮ, ಶಿವರತ್ನಮ್ಮ, ಸುಮತಿ, ಗೌರಮ್ಮ ಸೇರಿದಂತೆ ಮತ್ತಿತ್ತರರು ಭಾಗಿಯಾಗಿದ್ದರು.

ವರದಿ-ಎ.ಎನ್ ಲೋಕೇಶ್ಎಕ್ಸ್ ಪ್ರೆಸ್ ಟಿ ವಿ ಮಳವಳ್ಳಿ

Please follow and like us:

Related posts

Leave a Comment