ಹೇಮಾವತಿ ಯೋಜನೆಗೆ ಭೂ ಪರಿಹಾರ ಇಲ್ವಾಂತೆ- ಭೂಮಿಯನ್ನು ಕಬಳಿಸಲು ಯತ್ನಿಸಿದ ತುಮಕೂರು ಜಿಲ್ಲಾ ಆಡಳಿತ..!

ತಿಪಟೂರು: ತಿಪಟೂರು ತಾಲ್ಲೂಕಿನ ಹಾಲ್ಕುರಿಕೆ ಕೆರೆ ಮತ್ತು ಚಿಕ್ಕನಾಯ್ಕನಹಳ್ಳಿ ತಾಲೂಕಿನ 26 ಕೆರೆಗಳಿಗೆ ಹೇಮಾವತಿ ನೀರು ಹರಿಸುವ ಯೋಜನೆಯು 2013ರಿಂದ ಕುಂಟುತ್ತಾ ಸಾಗಿದೆ. ಸತತ ಬರಗಾಲದಿಂದ ತತ್ತರಿಸಿಹೋಗಿರುವ ಎರಡು ತಾಲೂಕಿನ ತೆಂಗು ಮತ್ತು ಅಡಿಕೆ ಬೆಳೆಗಾರರು ಸಾವಿರಾರು ಅಡಿಗಳವರೆಗೆ ಕೊಳವೆಬಾವಿಗಳನ್ನು ಹಾಕಿಸಿ ಆರ್ಥಿಕ ದಿವಾಳಿತನಕ್ಕೆ ಕಾರಣವಾಗಿದ. ಆದರೆ ನಮ್ಮನ್ನು ಆಳುತ್ತಿರುವ ಸರ್ಕಾರಗಳಿಗೆ ರೈತರ ಸಂಕಷ್ಟಗಳ ಬಗ್ಗೆ ಯಾವುದೇ ಪರಿವಿಲ್ಲಾ ಹಾಗೂ ಇನ್ನೊಂದು ಕಡೆ ರಾಜಕೀಯ ಮೇಲಾಟಗಳಲ್ಲಿ ತೊಡಗಿರುವ ಜನಪ್ರತಿನಿಧಿಗಳು ಯೋಜನೆಯ ಮಂದಗತಿಗೆ ಕಾರಣಕರ್ತರಾಗಿದ್ದಾರೆ.ಯೋಜನೆಗೆ ಭೂಮಿ ಕಳೆದುಕೊಳ್ಳುತ್ತಿರುವ ಸಂತ್ರಸ್ತರಿಗೆ ಯಾವುದೇ ಪರಿಹಾರದ ಮಾರ್ಗಸೂಚಿಯನ್ನು ರಚಿಸದಿರುವುದು ಜಿಲ್ಲಾಡಳಿತದ ವೈಫಲ್ಯ ಮತ್ತು ನಿರ್ಲಕ್ಷ್ಯ ಧೋರಣೆಯನ್ನು ಎತ್ತಿ ತೋರಿಸುತ್ತದೆ. ಒಂದು ಕಡೆ ಸರ್ಕಾರವು ಭೂಮಿ ಕಳೆದುಕೊಳ್ಳುವ ರೈತರಿಗೆ ಯಾವುದೇ ಪರಿಹಾರವನ್ನು ಕೊಡದೇ ಪೊಲೀಸ್ ಬಲವನ್ನು ಬಳಸಿ ಭೂಕಬಳಿಕೆ ಮಾಡಲು ಹೊರಟಿದೆ.ಇನ್ನೊಂದು ಕಡೆ ನಮ್ಮ ಕರ್ನಾಟಕದಲ್ಲಿ ಎಷ್ಟೋ ಯೋಜನೆಗಳಿಗೆ ಸರ್ಕಾರವು ಭೂ ಕಬಳಿಸಿ ಕೊಂಡಿದ್ದು ಹತ್ತಾರು ವರ್ಷಗಳೇ ಕಳೆದರೂ ಇಲ್ಲಿಯವರೆಗೂ ಭೂ ಪರಿಹಾರ ಮಾತ್ರ ಸಿಕ್ಕಿಲ್ಲ.ತಾಲೂಕಿನ ಕೆರೆಗಳಿಗೆ ಹೇಮಾವತಿಯ ನೀರು ಹರಿಯುವ ಆಶಾಭಾವನೆಯಿಂದ ರೈತರು ತಮ್ಮ ಜಮೀನನ್ನು ಯೋಜನೆಗೆ ಬಿಟ್ಟುಕೊಡಲು ಒಪ್ಪಿದ್ದಾರೆ. ಆದರೆ ಚಿಕ್ಕನಾಯಕನಹಳ್ಳಿ ತಾಲೂಕು,ಶೆಟ್ಟಿ ಕೆರೆ ಹೋಬಳಿ ಲಕ್ಮ ಗೊಂಡನಹಳ್ಳಿಯ ಸರ್ವೆ ನಂಬರನಲ್ಲಿ ಯಾವುದೇ ಪರಿಹಾರ ಕೊಡದೆ ಪೊಲೀಸ್ ಬಲದಿಂದ ಭೂಮಿಯನ್ನು ವಶಪಡಿಸಲು ಜಿಲ್ಲಾಡಳಿತ ಮುಂದಾಗಿದೆ.ಇದು ನಡೆಯುತ್ತಿರುವುದು ನಮ್ಮ ಜಿಲ್ಲಾ ಉಸ್ತುವಾರಿ ಸಚಿವರು,ಸಣ್ಣ ನೀರಾವರಿ ಸಚಿವರು, ಕಾನೂನು ಸಚಿವರು ಆಗಿರುವ ಸ್ವಕ್ಷೇತ್ರದಲ್ಲಿ. ಯೋಜನೆಗೆ ಭೂಮಿ ಪಡೆದುಕೊಳ್ಳುತ್ತಿರುವ ರೈತರಿಗೆ ಸರಿಯಾದ ಪರಿಹಾರ ಕೊಡಿಸಬೇಕಾದ ನಿರಾವರಿ ಸಚಿವರು ಹಾಗೂ ಅನ್ಯಾಯವಾದ ರೈತರ ಪರವಾಗಿ ನಿಲ್ಲಬೇಕಾದ ಕಾನೂನು ಸಚಿವರ ಸ್ವಕ್ಷೇತ್ರದಲ್ಲಿ ರೈತರ ಮೇಲೆ ದೌರ್ಜನ್ಯ ವಾಗುತ್ತಿರುವುದು ನಿಜಕ್ಕೂ ಖಂಡನೀಯ. ಜಿಲ್ಲಾಡಳಿತವು ರೈತರಿಗೆ ಸೇರಬೇಕಾದ ನ್ಯಾಯಯುತ ಪರಿಹಾರವನ್ನು ಕೊಟ್ಟು ನಂತರವೇ ಭೂಮಿಯನ್ನು ವಶಪಡಿಸಿಕೊಳ್ಳುವ ಕನಿಷ್ಠ ಜ್ಞಾನವು ಇಲ್ಲವೋ ಅಥವಾ ಮೋಸಗೊಳಿಸುವ ಪರಿಯೋ.ಆದ್ದರಿಂದ ಯೋಜನೆಗೆ ಭೂಮಿಯನ್ನು ಕಳೆದುಕೊಳ್ಳುವ ಕಳೆದುಕೊಳ್ಳುತ್ತಿರುವ ರೈತರಿಗೆ ಸರಿಯಾದ ಪರಿಹಾರದ ಮಾರ್ಗಸೂಚಿಯನ್ನು ತಯಾರು ಮಾಡಿ ತುರ್ತಾಗಿ ಪರಿಹಾರಗಳನ್ನು ಕೊಟ್ಟು ಹಾಗೂ ಯೋಜನೆಯನ್ನು ತುರ್ತಾಗಿ ಪೂರ್ಣಗೊಳಿಸಿ ಬರದಿಂದ ಬಳಲಿರುವ ಕೆರೆಗಳಿಗೆ ಹೇಮಾವತಿ ನೀರು ತುಂಬಿಸಿ, ಇಲ್ಲವಾದಲ್ಲಿ ಮುಂದಿನ ಹೋರಾಟವನ್ನು ರೂಪಿಸಲಾಗುವುದು ಎಂದು ಆಗ್ರಹಿಸಿದರು.

ವರದಿ-ಸಿದ್ದೇಶ್ವರ ಸಿಎನ್ ಎಕ್ಸ್ ಪ್ರೆಸ್ ಟಿವಿ ತಿಪಟೂರು

Please follow and like us:

Related posts

Leave a Comment