ಶಾಸಕರು ಬೇಗ ಗುಣಮುಖರಾಗಲೆಂದು ವಿಶೇಷ ಪೂಜೆ ಸಲ್ಲಿಸಿದ ಕಾಂಗ್ರೆಸ್ ಕಾರ್ಯಕರ್ತರು..!

ಲಿಂಗಸೂಗೂರು: ಇಡೀ ದೇಶವನ್ನೇ ತಲ್ಲಣಗೊಳಿಸಿದ ಕೊರೋನಾ ಮಾಹಾಮಾರಿ ತನ್ನ ಕಬಂದ ಭಾಹುವನ್ನು ಎಲ್ಲೆಡೇ ಭೀರಿದೆ. ಕಳೆದ ಐದು ದಿನಗಳ ಹಿಂದೆ ಲಿಂಗಸೂಗೂರು ಶಾಸಕರಿಗೆ ಕೊರೋನಾ ಪಾಸಿಟಿವ್ ಧೃಢಪಟ್ಟ ಹಿನ್ನೆಲೆ ತಾಲೂಕಿನ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮುಖಂಡರು ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ. ರಾಯಚೂರು ಜಿಲ್ಲೆಯ ಲಿಂಗಸೂಗೂರು ಶಾಸಕರಿಗೆ ಕೋವಿಡ್-19 ಧೃಢಪಟ್ಟ ಹಿನ್ನಲೆ ಶಾಸಕರು ಕೊರೋನಾವನ್ನು ಗೆದ್ದು, ಬೇಗನೇ ಗುಣಮುಖರಾಗಿ ಬರಲಿ ಎಂದು ತಾಲೂಕಿನ ಕೃಷ್ಣಾ ತೀರದ ಭಾಗ್ಯ ದೇವತೆಯಾದ ತೊಂಡಿಹಾಳ ಹುಲಿಗೆಮ್ಮ ದೇವಿಗೆ ಪಕ್ಷದ ಕಾರ್ಯಕರ್ತರು, ಹಿರಿಯ ಮುಖಂಡರು,ಯುವ ಕಾಂಗ್ರೇಸ್ ಘಟಕದ ಪದಾಧಿಕಾರಿಗಳು ಸೇರಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದರು. ಇದೇ ವೇಳೆ ಬಸನಗೌಡ ಕಂಬಳಿ,ಮಲ್ಲಪ್ಪ ಭಗವತಿ, ಮಲ್ಲಯ್ಯ ನರಕಲದಿನ್ನಿ, ಸಾಬಣ್ಣ ಮುಕ್ಕಣ್ಣವರ್, ರಮೇಶ್ ಕುಮಾರ್ ಗುತ್ತೇದಾರ್, ಶಶಿಕಾಂತ ಗೊರೇಬಾಳ್, ಹನಮಂತ ನಾಲತವಾಡ, ಬಾಲಪ್ಪ ಕನಕೇರಿ ಲಕ್ಕಪ್ಪ ತುಂಬಲಗಡ್ಡಿ, ಮಂಜುನಾಥ ಆನೆಹೊಸೂರು ದೇವಣ್ಣ ಲೆಕ್ಕಿಹಾಳ, ಶಿವನಗೌಡ ಜೂಲಗುಡ್ಡ, ಹನಮಂತ ಕಮತರ್, ದೇವೇಂದ್ರಪ್ಪ ಭಜಂತ್ರಿ ಉಪಸ್ಥಿತರಿದ್ದರು..
ವರದಿ-ವೀರೇಶ್ ಅರಮನಿ ಎಕ್ಸ್ ಪ್ರೆಸ್ ಟಿವಿ ಲಿಂಗಸೂಗೂರು

Please follow and like us:

Related posts

Leave a Comment