ಬಿಎಂಟಿಸಿ ಬಸ್ ಚಾಲಕನ ಸಮಯ ಪ್ರಜ್ಞೆಯಿಂದ ಬಚಾವಾದ 40 ಜನ ಪ್ರಯಾಣಿಕರು..!

ಹುಬ್ಬಳ್ಳಿ: ಹುಬ್ಬಳ್ಳಿ- ಧಾರವಾಡ ನಡುವೇ ಸಂಚರಿಸುವ ಬಿಎಂಟಿಸಿ ಬಸ್ ಚಾಲಕನ ಸಮಯ ಪ್ರಜ್ಞೆ 40ಕ್ಕೂ ಹೆಚ್ಚು ಜನರ ಪ್ರಾಣವನ್ನು ಉಳಿಸಿದೆ. ಬಸ್ ನಲ್ಲಿ ನಡೆದ ಪ್ರತಿ ಕ್ದಣವು ಬಸ್ ನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸೆಪ್ಟೆಂಬರ್ 5 ರಂದು ನವನಗರದ ಬ್ರಿಡ್ಜ್ ಬಳಿ ಬರುತ್ತಿದಂತೆ ಚಿಗರಿ ಬಸ್ ಚಾಲಕನಿಗೆ ತಲೆಸುತ್ತು ಶುರುವಾಗಿದೆ. ಅದರಲ್ಲಿಯೇ ಬಸ್ ಚಾಲಕ ಬಸ್ ಚಾಲನೆ ಮಾಡಿಕೊಂಡು ಬಂದಿದ್ದಾನೆ. ಆದ್ರೆ ಆತನಿಗೆ ಮುಂದೆ ಬಸ್ ಚಾಲನೆ ಮಾಡಲು ಸಾಧ್ಯವಾಗದ ಸ್ಥಿತಿಗೆ ಬಂದಿದ್ದಾನೆ. ಕೊನೆಗೆ ವೇಗವಾಗಿ ಚಲಿಸುತ್ತಿದ್ದ ಬಸ್ ನಿಯಂತ್ರಣ ಮಾಡಿ ರಸ್ತೆ ಪಕ್ಕಕ್ಕೆ ನಿಲ್ಲಿಸಿ ಸಿಟ್ ನಿಂದ ಕೆಳಗೆ ಬಿದಿದ್ದಾನೆ. ಆಗ ಬಸ್ ನಲ್ಲಿದ್ದ ಮಹಿಳಾ ಪ್ರಯಾಣಿಕರು ಗಾಬರಿಗೊಂಡು ಹಿಂದೆ ಓಡುತ್ತಾರೆ. ಆಗ ಕೆಲವರು ಚಾಲಕನಿಗೆ ನೀರು ಕುಡಿಸಿ ಹಾರೈಕೆ ಮಾಡುತ್ತಾರೆ. ಬಸ್ ಚಾಲಕ ಸರಿಯಾದ ಸಮಯಕ್ಕೆ ಬಸ್ ನಿಲ್ಲಿಸದಿದ್ರೆ ನವನಗರ ಬ್ರಿಡ್ಜ್ ನಿಂದ ಬಸ್ ಬಿಳುವದಿತ್ತು. ಇದರಿಂದ ಪ್ರಾಣ ಹಾನಿ ಸಂಭವಿಸುವ ಸಾಧ್ಯತೆ ಹೆಚ್ಚಾಗಿತ್ತು. ಬಸ್ ಚಾಲಕನ ಸಮಯ ಪ್ರಜ್ಞೆಯಿಂದ 40 ಕ್ಕೂ ಹೆಚ್ಚು ಪ್ರಯಾಣಿಕರ ಜೀವ ಉಳಿದಂತಾಗಿದ್ದು, ಪ್ರಯಾಣಿಕರು ನಿಟ್ಟುಸಿರು ಬಿಟ್ಟಿದ್ದಾರೆ.

ವರದಿ-ರಾಜುಮುದುಗಳ್ ಎಕ್ಸ್ ಪ್ರೆಸ್ ಟಿವಿ ಹುಬ್ಬಳ್ಳಿ..

Please follow and like us:

Related posts

Leave a Comment