ಕಾಡುಗೋಲ ಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯ ಸಿಗಲಿ- ಸಂಚಾಲಕ ಡಾ.ದೊಡ್ಡ ಮಲ್ಲಯ್ಯ..

ಶಿರಾ: ವಿಧಾನ ಸಭೆ ಉಪ ಚುನಾವಣೆಯಲ್ಲಿ ಕಾಡು ಗೋಲ ಸಮುದಾಯಕ್ಕೂ ಪ್ರಾತಿನಿಧ್ಯ ನೀಡಬೇಕು. ಎಂದು ಕರ್ನಾಟಕ ರಾಜ್ಯ ಕಾಡುಗೋಲ ಸಂಘಟನೆಯ ಒಕ್ಕೂಟದ ಸಂಚಾಲಕ ಡಾ.ದೊಡ್ಡ ಮಲ್ಲಯ್ಯ ಅಗ್ರಹಿಸಿದ್ದಾರೆ.ಚಿತ್ರದುರ್ಗ ಮತ್ತು ತುಮಕೂರು ಭಾಗದಲ್ಲಿ ಹೆಚ್ಚು ಜನಸಂಖ್ಯೆ ಹೊಂದಿರುವ ಕಾಡುಗೋಲ ಸಮುದಾಯಕ್ಕೆ ಯಾವುದೇ ಪಕ್ಷದಿಂದ ಸ್ಪರ್ಧಿಸಲು ಕಾಡುಗೋಲ ಸಮುದಾಯದವರಿಗೆ ಅವಕಾಶ ಮಾಡಿಕೊಡಬೇಕು ಎಂದು ಕಾಡುಗೊಲ್ಲ ಸಂಘದವರು ಒತ್ತಾಯಿಸಿದ್ದಾರೆ.ನಗರದ ಖಾಸಗಿ ಕಲ್ಯಾಣ ಮಂಟಪದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಂಘಟನೆ ಪದಾಧಿಕಾರಿಗಳು ಗುರುತ್ತಿಸಿ ಸಮುದಾಯವನ್ನು ಹಿಂದೆ ವಿಧಾನ ಪರಿಷತ್ ಸದಸ್ಯೆ ಜಯಮ್ಮ ಬಾಲರಾಜ್ ಅವರನ್ನು ಅಯ್ಕೆ ಮುಕ್ತಾಯವಾಗಲಿದೆ.ಅವರಿಂದ ಶಿರಾ ಉಪ ಚುನಾವಣೆಗೆ ಕಾಡುಗೋಲದವರಿಗೆ ಪಕ್ಷದ ಟಿಕೆಟ್ ನೀಡಬೇಕು. ಮತ್ತು ಸದ್ಯ ಕ್ಷೇತ್ರದಲ್ಲಿ ಸಮುದಾಯದಲ್ಲಿ ಜನಾಂಗದ ಹೆಸರಿನಲ್ಲಿ ಕೆಲ ಮುಖಂಡರು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದ ಇದನ್ನು ಕಾಡುಗೋಲ ಸಮುದಾಯ ಅವರಿಗೆ ತಕ್ಕ ಉತ್ತರ ನೀಡಲ್ಲಿದೆ ಎಂದು ತಿಳಿಸಿದ್ದಾರೆ. ಕಾಡುಗೊಲ್ಲ ಸಮುದಾಯವನ್ನು ನಿರ್ಲಕ್ಷ್ಯ ತೋರಿದ್ದರೆ ಮುಂದಿನ ದಿನಗಳಲ್ಲಿ ಆಕ್ರೋಶಕ್ಕೆಕಾರಣತ್ತದೆ ಮತ್ತು ಚುನಾವಣೆ ಬಹಿಷ್ಕಾರವನ್ನು ಹಾಕುವ ಮೂಲಕ ಉಪ ಚುನಾವಣೆ ವಿಧಾನಸಭೆ ಚುನಾವಣೆಯಲ್ಲಿ ಎಲ್ಲ ಪಕ್ಷಕ್ಕೆ ತೀವ್ರ ಹಿನ್ನಡೆಯಾಗುತ್ತದೆ ಎಂದು ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ಮಾರಣ್ಣ, ಕರಿಯಪ್ಪ,ಶಿವಕುಮಾರ್ ಸೇರಿದಂತೆ ಹಲವಾರು ಹಾಜರಾಗಿದ್ದರು.

ವರದಿ- ಶ್ರೀಮಂತ್ ಎಕ್ಸ್ ಪ್ರೆಸ್ ಟಿವಿ ಶಿರಾ

Please follow and like us:

Related posts

Leave a Comment