ಕಾಂಗ್ರೆಸ್ ಅಭ್ಯರ್ಥಿ ಗೆಲುವು ಖಚಿತ- ಟಿ.ಬಿ ಜಯಚಂದ್ರ..!

ಶಿರಾ: ಉಪ ಚುನಾವಣೆ ಸಮರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಖಚಿತ ಕಾರ್ಯಕರ್ತರು ಬೇರು ಮಟ್ಟದದಿಂದ ಪಕ್ಷ ಸಂಘಟನೆ ಮಾಡಬೇಕು ಎಂದು ಕಾರ್ಯಕರ್ತರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ನಗರದ ಸುಖೀ ನಗರ ಬಡಾವಣೆಯಲ್ಲಿ ಇರುವ ಅನ್ನಪೂರ್ಣೇಶ್ವರಿ ಕಲ್ಯಾಣ ಮಂಟಪದಲ್ಲಿ ನಡೆದ ಸಂಭವನೀಯ ಅಭ್ಯರ್ಥಿ ಟಿ.ಬಿ ಜಯಚಂದ್ರ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಶಿರಾ ವಿಧಾನ ಸಭೆ ಕ್ಷೇತ್ರದ ಉಪ ಚುನಾವಣೆ ಸಂಬಂಧ ನಡೆದ ಸಮಾರಂಭದಲ್ಲಿ ಹಲವಾರು ಕಾರ್ಯಕರ್ತರ ಅಭಿಪ್ರಾಯ ಕೆಲ ತಿಂಗಳಲ್ಲಿ ವಿಧಾನ ಸಭೆ ಕ್ಷೇತ್ರದ ಉಪ ಚುನಾವಣೆ ನಡೆಯುವ ಸಾಧ್ಯತೆಗಳಿವೆ ಪಕ್ಷದ ಕಾರ್ಯಕರ್ತರು ಚುನಾವಣೆ ಎದುರಿಸಲು ಸಜ್ಜಾಗ ಬೇಕು ಬಿಜೆಪಿ ದುರಾಡಳಿತಕ್ಕೆ ಜನ ಬೇಸತ್ತಿದ್ದಾರೆ. ಮತ್ತು ಈ ಹಿಂದೆ ಕ್ಷೇತ್ರದ ಬಗ್ಗೆ ಕಾಳಜಿ ತೊರದ ಪಕ್ಷ ಸದ್ಯ ಉಪಚುನಾವಣೆ ಘೋಷಣೆ ಮುನ್ನ ಹಲವಾರು ಅನುದಾನ ಸೇರಿದಂತೆ ಜನರಿಗೆ ಮಂಕು ಬೂದಿ ಹಾಕುವ ಕೆಲಸ ಮಾಡುತ್ತಿದೆ. ಉಪಚುನಾವಣೆಯಲ್ಲಿ ವಿಧಾನ ಸಭೆ ಕ್ಷೇತ್ರ ಮತ್ತೊಮ್ಮೆ ಕೈ ವಶವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಉಪಚುನಾವಣೆ ತಯಾರಿ ಕುರಿತಾಗಿ ಗ್ರಾಮೀಣ ಪ್ರದೇಶಗಳ ಸಭೆಯಲ್ಲಿ ಹೋಬಳಿ ಮುಖಂಡರ ನಾಯಕತ್ವದ ಮೂಲಕ ಉಪಚುನಾವಣೆ ಎದುರಿಸುವ ಕುರಿತಾಗಿಯೂ ಚರ್ಚೆ ಬೂತ್ತ್ ಮಟ್ಟಗಳಿಗೆ ಚುನಾವಣಾ ಉಸ್ತುವಾರಿಗಳ ನೇಮಕವಾಗಿದ್ದು ಪ್ರತಿ ಗ್ರಾಮದಲ್ಲಿ ಮುಖಂಡರು ಭೇಟಿ ನೀಡಿ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಬೇಕು ಎಂಬ ನಿರ್ಧಾರವನ್ನು ಚುನಾವಣಾ ತಂತ್ರಗಾರಿಗೆ, ಪ್ರಚಾರ ಕುರಿತಾಗಿ ಸಭೆಯಲ್ಲಿ ಚರ್ಚೆ ಸಭೆಯಲ್ಲಿ ಕಾರ್ಯಕರ್ತರ ತಮ್ಮ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಶಿರಾ ಕ್ಷೇತ್ರದ ಉಪ ಚುನಾವಣೆಗೆ ಸಿದ್ಧತೆಗಳನ್ನು ವಿಧಾನಸಭಾ ಉಪಚುನಾವಣೆ ಯಾವಾಗ ಘೋಷಣೆ ಆಗುತ್ತೋ ಗೊತ್ತಿಲ್ಲ. ಹಿಂದೆ ಅದ ತಪ್ಪುಗಳನ್ನು ಬದಿಗೊತ್ತಿ ಭಿನ್ನಾಭಿಪ್ರಾಯ ಮರೆತು ಕೆಲಸ ಮಾಡಲು ತಿಳಿಸಿದರು..ಕಳೆದ 50 ವರ್ಷಗಳಿಂದ ಕಾಂಗ್ರೆಸ್ ನಲ್ಲಿದ್ದೇನೆ, ನಾನು ಈ ಕ್ಷೇತ್ರಕ್ಕಾಗಿ ಕೆಲಸ ಮಾಡಿದ್ದೇನೆ,ನಾನು ನನ್ನ ಕ್ಷೇತ್ರದ ಜನರ ಜೊತೆ ನಿರಂತರ ಸಂಪರ್ಕದಲ್ಲಿದೇನೆ, 2018 ರಲ್ಲಿ ಸಣ್ಣ ಪ್ರಮಾಣದ ಅಂತರದಲ್ಲಿ ಸೋಲನುಭವಿಸಿದ್ದೇನೆ ಮತ್ತು ನನ್ನ ಸುದೀರ್ಘ ರಾಜಕೀಯ ಜೀವನದಲ್ಲಿ ಅನೇಕ ಅಭಿವೃದ್ಧಿಗೆ ಕಾರಣವಾಗಿದೆ ನೀರಾವರಿ ಯೋಜನಗೆ ಗಮನಹರಿಸಿ ಶಿರಾ ಕ್ಷೇತ್ರದಲ್ಲಿ ಜಿಲ್ಲಾ ಕೇಂದ್ರ ಮೀರಿದ ಸಾಧನೆಯಾಗಿದೆ. ಬರುವ ಉಪಾ ಚುನಾವಣೆಯಲ್ಲಿ ನನಗೆ ಶಕ್ತಿ ಕೂಡಿ ರಾಜ್ಯ ಅದ್ಯಕ್ಷ ಡಿ.ಕೆ.ಶಿವಕುಮಾರ್. ಅವರ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ವಿಧಾನ ಸೌದದ ಮೂರನೇ ಮಹಡಿಯಲ್ಲಿ ಈಗಿನ ರಾಜ್ಯ ಸರ್ಕಾರದ ಭ್ರಷ್ಟಾಚಾರ ವಿರುದ್ಧ ದ್ವನಿ ಎತ್ತುವ ಕೆಲಸಕ್ಕೆ ಶಕ್ತಿ ನೀಡಿ, ಬಾಜಪ ನಾಯಕರು ,ಹಲಾವಾರು ಹಗರಣ ದಾಖಲೆಗಳನ್ನು ಹಿಂದೆ ಗಣಿ ಹಗರಣದಲ್ಲಿ ಸಿದ್ದರಾಮಯ್ಯ ಅವರ ನಾಯಕತ್ವದಲ್ಲಿ ಉಪನಾಯಕನಾಗಿ ಕೈಗೊಂಡ ನಿರ್ಧಾರ, ಹಾಗೂ ಸದ್ಯ ಕೊರೋನ ಹೆಸರಿನಲ್ಲಿ ಸರ್ಕಾರ ಖಜಾನೆಯನ್ನು ಲೂಟಿ ಮಾಡುತ್ತಿರುವುದನ್ನು ಬಯಲಿಗೆ ಎಳೆಯಲು ಶಕ್ತಿ ನೀಡಿ ಎಂದರು. ಕಾರ್ಯಕ್ರಮದಲ್ಲಿ ಹಿರಿಯ ಕಾಂಗ್ರೆಸ್ ಮುಖಂಡ ಮಾಜಿ ಶಾಸಕ ಅರ್ ನಾರಾಯಣ್.ಮುಖಂಡರಾದ ಎಸ್.ಎನ್.ಕೃಷ್ಣಯ್ಯ, ಕೆಂಚಾಮಾರಯ್ಯ, ಸೇರಿದಂತೆ ಮಹಿಳಾ ಘಟಕಗಳ ಅದ್ಯಕ್ಷರು ವಿವಿಧ ಘಟಕಗಳ ಸದಸ್ಯರು ಭಾಗಿಯಾಗಿದ್ದರು.

ವರದಿ-ಶ್ರೀಮಂತ್ ಎಕ್ಸ್ ಪ್ರೆಸ್ ಟಿವಿ ಶಿರಾ

Please follow and like us:

Related posts

Leave a Comment