ಗಾಂಜಾ ಮಾರುತ್ತಿದ್ದ ವ್ಯಕ್ತಿಯ ಬಂಧನ…

ತಾಲೂಕಿನ ಆರ್. ಹೆಚ್. ಕ್ಯಾಂಪ್ 2 ರಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಹನುಮೇಶ ಸರ್ಕಾರ್ ತಂದೆ ಸುನೀಲ್ ಸರ್ಕಾರ್ (38) ವರ್ಷದ ವ್ಯಕ್ತಿಯು ತನ್ನ ಜಮೀನಿನಲ್ಲಿ 1000 ರೂಪಾಯಿ ಬೆಲೆಬಾಳುವ ಗಾಂಜಾ ಗಿಡಗಳನ್ನು ಸಿಬ್ಬಂದಿ ಗಳೊಂದಿಗೆ ದಾಳಿ ಮಾಡಿ 1- ಕೆ.ಜಿ 140 ಗ್ರಾ. ನಷ್ಟು ವಶಪಡಿಸಿಕೊಂಡ ಆರೋಪಿಯನ್ನು ದಸ್ತಗಿರಿ ಮಾಡಿ ಪ್ರಕರಣ ದಾಖಲಿಸಲಾಗಿದೆ.ಸದರಿ ಕಾರ್ಯಾಚರಣೆಯಲ್ಲಿ ಎಸ್.ಪಿ. ಶ್ರೀ ನಿಕ್ಕಮ್ ಪ್ರಕಾಶ ಅಮ್ರಿತ್, ಹೆಚ್ಚುವರಿ ಎಸ್.ಪಿ.ಹರಿಬಾಬು, ಡಿವೈಎಸ್ಪಿ ವಿಶ್ವನಾಥರಾವ್ ಕುಲಕರ್ಣಿ ಮಾರ್ಗದರ್ಶನದಲ್ಲಿ ಸಿ.ಪಿ.ಐ ಬಾಲಚಂದ್ರ ಲಕ್ಕಂ ಹಾಗೂ ಗ್ರಾಮೀಣ ಪೋಲಿಸ್ ಠಾಣೆಯ ಪಿ.ಎಸ್.ಐ ರಾಘವೇಂದ್ರ ನೇತೃತ್ವದಲ್ಲಿ ಪೋಲಿಸ್ ಸಿಬ್ಬಂದಿಗಳಾದ ಹೆಚ್.ಸಿ ಚನ್ನಬಸವ, ದ್ಯಾಮಣ್ಣ, ಪರಶುರಾಮ ಅಮರೇಶ್ ಶರಣಪ್ಪ ರವರನ್ನೊಳಗೊಂಡಿರುವ ತಂಡವನ್ನು ರಚಿಸಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕಾರ್ಯಚರಣೆಗೆ ರಾಯಚೂರು ಜಿಲ್ಲಾ ಪೋಲಿಸ್ ವರಿಷ್ಠ ಅಧಿಕಾರಿಗಳು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

ವರದಿ-ಸೈಯದ್ ಬಂಧೇನವಾಜ್ ಎಕ್ಸ್ ಪ್ರೆಸ್ ಟಿವಿ ಸಿಂಧನೂರು..

Please follow and like us:

Related posts

Leave a Comment