ಮೀನು ಮಾರುಕಟ್ಟೆ ಸ್ಥಳಾಂತರಿಸಲು ಚಕ್ಕಡಿಯಿಂದ ಪ್ರತಿಭಟನೆ..!

ಹುಬ್ಬಳ್ಳಿ- ಮಂಟೂರ ರಸ್ತೆಯಲ್ಲಿ ಹಾಕಲಾಗಿದ್ದ ಮೀನು ಮಾರುಕಟ್ಟೆಯನ್ನು ತಕ್ಷಣವೇ ವಜಾಗೋಳಿಸಬೇಕು ಎಂದು ನಗರದಲ್ಲಿ ರೈತರು ಎತ್ತಿನ ಚಕ್ಕಡಿಯನ್ನು ಓಡುಸುವುದರ ಮೂಲಕ ಪ್ರತಿಭಟನೆ ಮಾಡಿದರು.ನಗರದ ವಿರಾಪೂರ ಓಣಿ, ಯಲ್ಲಾಪುರ ಓಣಿಯ ರೈತರಿಗೆ ತಮ್ಮ ಹೊಲಗಳಿಗೆ ಹೋಗಲು ಇರೊದೊಂದೆ ದಾರಿ, ಅದನ್ನೆ ಮೀನು ಮಾರುಕಟ್ಟೆ ಮಾಡಿ, ರೈತರಲ್ಲಿ ತೊಂದರೆ ಮಾಡಿದ್ದಾರೆ ಶಾಸಕರು, ಮೀನಿನ ವಾಸನೆಗೆ ಹಸುಗಳಿಗೂ ಸಹ ಸಾಕಷ್ಟು ತೊಂದರೆ ಆಗುತ್ತಿದೆ. ಆದ್ದರಿಂದ ಪಾಲಿಕೆ ಆಯುಕ್ತರು ಆದಷ್ಟು ಬೇಗ ಅಲ್ಲಿರುವ ಮೀನು ಮಾರುಕಟ್ಟೆಯನ್ನು ಸ್ಥಳಾಂತರ ಮಾಡಬೇಕು ಮತ್ತು ಮಂಟೂರ ರಸ್ತೆಯನ್ನು ಅಗಲಿಕರಣ ಮಾಡಬೇಕು ಎಂದು ಮನವಿ ಸಲ್ಲಿಸಿದರು. ಮನವಿಗೆ ಅಧಿಕಾರಿಗಳು ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರವಾದ ಹೊರಟ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ವರದಿ-ರಾಜುಮುದುಗಲ್ ಎಕ್ಸ್ ಪ್ರೆಸ್ ಟಿವಿ ಹುಬ್ಬಳ್ಳಿ

Please follow and like us:

Related posts

Leave a Comment