ಪೌಷ್ಟಿಕ ಆಹಾರ ಪ್ರದರ್ಶನ ರಥಕ್ಕೆ ತಹಶಿಲ್ದಾರ್ ಕುಂಜಿ ಅಹಮದ್ ಚಾಲನೆ ಚಾಲನೆ..!

ನಾಗಮಂಗಲ: ತಾಲೂಕು ಕಚೇರಿ ಆವರಣದಲ್ಲಿ ಪೌಷ್ಟಿಕ ಆಹಾರ ಪ್ರದರ್ಶನ ಶಿಬಿರ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಂಚಾರಿ ಪೌಷ್ಟಿಕಾಂಶ ರಥಕ್ಕೆ ತಹಶಿಲ್ದಾರ್ ಕುಂಜಿ ಅಹಮದ್ ರವರು ಚಾಲನೆ ನೀಡಿದರು. ಇದೇ ವೇಳೆ ಮಾತನಾಡಿದ ಅವರು ಹಿಂದಿನ ಕಾಲದಲ್ಲಿ ತಮ್ಮ ಮನೆಗಳಿಗೆ ಬೇಕಾದ ಸೊಪ್ಪು ತರಕಾರಿ ಹಣ್ಣುಗಳನ್ನು ಜನರೇ ಬೆಳೆದು ಕೊಳ್ಳುತ್ತಿದ್ದರು ಇಂದೂ ಕೊಂಡುಕೊಳ್ಳುವ ಪ್ರವೃತ್ತಿ ಎಲ್ಲಾ ಕಡೆ ಕಂಡು ಬರುತ್ತಿರುವುದು ವಿಷಾದನೀಯ ಮುಂದಿನ ಕೆಲವೇ ದಿನಗಳಲ್ಲಿ ಶಾಲಾ-ಕಾಲೇಜುಗಳು ಪ್ರಾರಂಭವಾಗುತ್ತಿದೆ. ಈ ಸಮಯದಲ್ಲಿ ಕೊರೊನಾ ವೈರಸ್ ನಿಂದ ಮಕ್ಕಳನ್ನು ರಕ್ಷಿಸಿಕೊಳ್ಳುವುದು ನಿಜಕ್ಕೂ ಒಂದು ಸವಾಲಾಗಿದೆ.ಅಪೌಷ್ಟಿಕತೆ ಹಿಂದಿನಿಂದಲೂ ಇರುವ ಒಂದು ಆರೋಗ್ಯ ಸಮಸ್ಯೆ ಮುಖ್ಯವಾಗಿ ಮಕ್ಕಳು ಗರ್ಭಿಣಿ ಹಾಗೂ ಬಾಣತಿ ಯರಲ್ಲಿ ಅಪೌಷ್ಟಿಕತೆ ಬರದಂತೆ ತಡೆಗಟ್ಟುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಹೇಳಿದರು.ಮಹಿಳಾ ಮತ್ತು ಮಕ್ಕಳ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿ ರಾಜನ್ ಮಾತನಾಡಿ ಇಂದು ಈ ರಥವು ತಾಲೂಕಿನ ವ್ಯಾಪ್ತಿಯ ಎಲ್ಲ ಹೋಬಳಿಗಳಲ್ಲಿ ಸಂಚರಿಸಿ ಬಂದಿದೆ ಈ ದಿನ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚಾರ ಮಾಡುವ ಮೂಲಕ ,ಅಪೌಷ್ಟಿಕತೆ ತಡೆಗಟ್ಟುವಲ್ಲಿ ನಮ್ಮ ಇಲಾಖೆಯ ಕೈಗೊಂಡಿರುವ ಕ್ರಮಗಳ ಬಗ್ಗೆ ಸಾರ್ವಜನಿಕ ಮಹಿಳೆಯರಲ್ಲಿ ಅರಿವು ಮೂಡಿಸಲಾಗುವುದು ಈ ಕಾರ್ಯಕ್ರಮದಲ್ಲಿ ನಮ್ಮ ಇಲಾಖೆಯ ಪ್ರತಿಯೊಂದು ಅಂಗನವಾಡಿ ಕಾರ್ಯಕರ್ತರು ಕೈಜೋಡಿಸಿದ್ದಾರೆ.ಮಕ್ಕಳಲ್ಲಿ ಅಪೌಷ್ಟಿಕತೆ ತೊಲಗಿಸಿ ಪೌಷ್ಟಿಕ ಆಹಾರದ ಬಗ್ಗೆ ಜಾಗೃತಿ ಮೂಡಿಸಲು ಸಜ್ಜಾಗಿದ್ದೇವೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಅನಂತರಾಜು ಶಿಶು ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಿರಿಯ ಮೇಲ್ವಿಚಾರಕರಾದ ಭಾರತಿ ಮೇಲ್ವಿಚಾರಕರಾದ ಎಸ್ ಡಿ ರೂಪ. ಕಮಲಮ್ಮ ತಾಲೂಕು ಪೋಷಣ ಅಭಿಯಾನ ಸಂಯೋಜಕರಾದ ಲಕ್ಷ್ಮಿ. ದಿವ್ಯ ಮಂಜುಳಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಭಾಗವಹಿಸಿದ್ದರು.

ವರದಿ- ಎಸ್.ವೆಂಕಟೇಶ್ ಎಕ್ಸ್ ಪ್ರೆಸ್ ಟಿವಿ ನಾಗಮಂಗಲ.

Please follow and like us:

Related posts

Leave a Comment