ಅರಣ್ಯಾಧಿಕಾರಿಗಳ ಮೇಲೆ ಕ್ರಮಕ್ಕೆ ಮನವಿ- ಕರ್ನಾಟಕ ರೈತ ಸಂಘದ ಮುಖಂಡ ಆರ್ ಮಾನಸಯ್ಯ..!

ಮಸ್ಕಿ: ರಾಯಚೂರು ಜಿಲ್ಲೆಯ ಮಸ್ಕಿ ತಾಲ್ಲೂಕಿನ ಹೂವಿನಭಾವಿ ಗ್ರಾಮದ ಕುರಿ ಸಾಕಾಣಿಕೆದಾರರಿಗೆ ಅರಣ್ಯಾಧಿಕಾರಿಗಳು ಕಿರುಕುಳ ನೀಡುತ್ತಿರುವದನ್ನು ಖಂಡಿಸಿ ಕರ್ನಾಟಕ ರೈತ ಸಂಘದ ಮುಖಂಡ ಆರ್ ಮಾನಸಯ್ಯ ರವರ ನೇತೃತ್ವದಲ್ಲಿ ಪ್ರತಿಭಟನೆ ಮಾಡಿ ಲಿಂಗಸುಗೂರ ಸಹಾಯಕ ಆಯುಕ್ತರಗೆ ಮನವಿ ಪತ್ರ ಸಲ್ಲಿಸಿದರು. ಮಸ್ಕಿ ತಾಲೂಕಿನ ಹೂವಿನಭಾವಿ ಗ್ರಾಮದಲ್ಲಿ ಬಡ ಕುಟುಂಬಗಳು ಕುರಿ ಸಾಕಾಣಿಕೆ ಮಾಡಿ ಕಡುಬಡವರು ಜೀವನ ಸಾಗಿಸುತ್ತಿದ್ದಾರೆ ಈ ಕೂಡಲೇ ಕುರಿ ಸಾಕಾಣಿಕೆ ಮಾಡಲು ಪ್ರತ್ಯೇಕ ಭೂಮಿ ನೀಡಬೇಕು ಎಂದು ಲಿಂಗಸೂಗೂರು ಸಹಾಯಕ ಆಯುಕ್ತರಿಗೆ ಮನವಿ ಪತ್ರ ಸಲ್ಲಿಸಿದರು. ಪ್ರತಿಭಟನಾ ಮೆರವಣಿಗೆಯಲ್ಲಿ ರೈತ ಸಂಘದ ಮುಖಂಡರು ಹೂವನಬಾವಿ ಗ್ರಾಮದ ಕುರಿ ಗಾಯಿಗಳು ಪಾಲ್ಗೊಂಡಿದ್ದರು.

ವರದಿ-ವೀರೇಶ್ ಅರಮನಿ ಎಕ್ಸ್ಪ್ರೆಸ್ ಟಿವಿ ಲಿಂಗಸೂಗೂರು

Please follow and like us:

Related posts

Leave a Comment