ಶ್ರೀ ವೀರತಪಸ್ವಿ ಸೌಹಾರ್ಧ ಸಹಕಾರಿ ನಿ. ಸರಸಂಬಾ 8 ನೇ ವಾರ್ಷಿಕ ಸಾಮಾನ್ಯ ಸಭೆ..!

ಕಲಬುರಗಿ : ಜಿಲ್ಲೆಯ ಆಳಂದ ತಾಲೂಕಿನ ಸರಸಂಬಾ ಗ್ರಾಮದಲ್ಲಿ ಶ್ರೀ ವೀರತಪಸ್ವಿ ಸೌಹಾರ್ಧ ಸಹಕಾರಿ ನಿ. ಸರಸಂಬಾ ಇದರ 8 ನೇ ವಾರ್ಷಿಕ ಸರ್ವ ಸದಸ್ಯರ ಸಾಮಾನ್ಯ ಸಭೆ ನಡೆಯತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸನ್ಮಾನ್ಯ ಶ್ರೀ ಆರ್ ಕೆ ಪಾಟೀಲ ಅಧ್ಯಕ್ಷರು KMF ಕಲಬುರಗಿ ಸೌಹಾರ್ದ ಸಹಕಾರಿಯ ಸಂಘಗಳು ಕೇವಲ ಆರ್ಥಿಕ ವ್ಯವಹಾರ ಅಷ್ಟೇ ಅಲ್ಲದೇ ಗ್ರಾಮಗಳಲ್ಲಿ ಪರಸ್ಪರ ಮದ್ಯ ಸೌಹಾರ್ದತೆಯನ್ನು ಬೆಳೆಸಬೇಕು ಮತ್ತು ಬಡವರನ್ನು, ರೈತರನ್ನು ಸ್ವಾಲಂಬಿಗಳಾಗಿ ಬದುಕಲು ಸಹಕಾರ ನೀಡಬೇಕು ಎಂದು ಮಾತನಾಡಿ ರೈತರು ಕೃಷಿಯ ಜೊತೆಗೆ ಹೈನುಗಾರಿಕೆ ಉದ್ಯಮದಲ್ಲಿ ಬರಬೇಕು ಆರ್ಥಿಕ ಶಕ್ತಿ ವೃಧ್ಧಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು, ಈ ಸಮಯದಲ್ಲಿ ತಾ ಪಂಚಾಯತ ಸದಸ್ಯ ಸಾತಲಿಂಗಪ್ಪ ಪಾಟೀಲ,ಪಂಡಿತ ಜಿಡಗೆ ಚಂದ್ರಶೇಖರ ಗುಂಜೋಟಿ, ಬಸವರಾಜ ಪಾಟೀಲ,ಶಿವಶರಣಪ್ಪ ಮುಳೆಗಾಂವ ಉಪನಿರ್ದೇಶಕರು ಪದವಿ ಪೂರ್ವ ಶಿಕ್ಷಣ ಇಲಾಖೆ ಕಲಬುರ್ಗಿ,ಶರಣಬಸಪ್ಪ ಸಡ್ಡು ಜಂಟಿ ನಿರ್ದೇಶಕರು ಕೈಗಾರಿಕಾ ತರಬೇತಿ ಕೇಂದ್ರ ಕಲಬುರ್ಗಿ, ಸಂಘದ ಉಪಾದ್ಯಕ್ಷರು ಹಾಗೂ ಸರ್ವ ನಿರ್ದೇಶಕರು ಹಾಜರಿದ್ದರು.

ವರದಿ-ಡಾ.ರಾಜ್ ಕುಮಾರ್ ಎಕ್ಸ್ ಪ್ರೆಸ್ ಟಿವಿ ಕಲಬುರುಗಿ

Please follow and like us:

Related posts

Leave a Comment