ನಾಗಮಂಗಲ ತಾ.ಪಂ.ಅಧ್ಯಕ್ಷರ ವಿರುದ್ದ ಅವಿಶ್ವಾಸ ನಿರ್ಣಯ ವಾಪಸ್ಸ್.

ನಾಗಮಂಗಲ: ಕಳೆದ ಮೂರು ತಿಂಗಳಿಂದ ಮಂಡ್ಯ ಜಿಲ್ಲೆ, ನಾಗಮಂಗಲ ತಾಲ್ಲೂಕು, ಪಂಚಾಯ್ತಿ ಅಧ್ಯಕ್ಷರ ವಿರುದ್ದ ಅವಿಶ್ವಾಸ ನಿರ್ಣಯದ ಹಗ್ಗ-ಜಗ್ಗಾಟ,ನಡೆಯುತ್ತಲೇ ಇದೆ. ಇನ್ನೂ ಅಧ್ಯಕ್ಷರ ವಿರುದ್ದ ಅವಿಶ್ವಾಸ ನಿರ್ಣಯದ ಗೊತ್ತುವಳಿಗೆ,ಸಲ್ಲಿಸಲಾಗಿದ್ದ ಅರ್ಜಿಯನ್ನು ವಾಪಸ್ಸ್ ಪಡೆಯುವ ಮೂಲಕ, ರಾಜಕೀಯ ಹೊಸ ಆಯಮಕ್ಕೆ ಮಾಜಿ ಶಾಸಕ ಚೆಲುವರಾಯಸ್ವಾಮಿ ಬಣದ ತಾಲ್ಲೂಕು ಪಂಚಾಯ್ತಿ ಸದಸ್ಯರು ನಾಂದಿಯಾಡಿದ್ದಾರೆ.ಹಾಲಿ ಮತ್ತು ಮಾಜಿ ಶಾಸಕರ ಪ್ರತಿಷ್ಟೆಯ ಕಣವಾಗಿರುವ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷಗಿರಿಗೆ ತಾಲ್ಲೂಕಿನ ಅಭಿವೃದ್ದಿ ಕಾರ್ಯಗಳು ಕುಂಠಿತವಾಗಿರುವುದೆಂತು ಸತ್ಯ ಎಂಬುದು ರಾಜಕೀಯ ಪಡಸಾಲೆಯ ಮಾತು. ಒಟ್ಟು 18 ಸದಸ್ಯರ ಬಲವುಳ್ಳ, ನಾಗಮಂಗಲ ತಾಲ್ಲೂಕು ಪಂಚಾಯ್ತಿಯ, ಆಡಳಿತ ಹಿಡಿಯುವಲ್ಲಿ ಅಂದಿನ ಜೆಡಿಎಸ್ ಶಾಸಕ ಎನ್.ಚೆಲುವರಾಯಸ್ವಾಮಿ ಬಣದಿಂದ 16 ಸದಸ್ಯರು ಆಯ್ಕೆಯಾಗುವ ಮೂಲಕ ಯಶಸ್ವಿಯಾಗಿದ್ದರು. ಇದೆ.ಅ.01 ರಂದು ಕರೆಯಲಾಗಿದ್ದ ಅವಿಶ್ವಾಸ ನಿರ್ಣಯ ಗೊತ್ತುವಳಿ ಸಭೆಗೆ ಯಾವೊಬ್ಬ ಸದಸ್ಯರು ಹಾಜರಾಗದ ಕಾರಣಕ್ಕೆ ಇಂದು ಸಭೆಯನ್ನು ನಡೆಸುವುದಕ್ಕೆ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದರು. ಆದರೆ ತಮ್ಮ ಅವಿಶ್ವಾಸ ನಿರ್ಣಯಕ್ಕಾಗಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಹಿಂಪಡೆಯಲು ಸಲ್ಲಿಸಲಾಗಿದ್ದ ದಾವೆಯನ್ನು ಹೈಕೋರ್ಟ್ ಪುರಸ್ಕರಿಸಿರುವ ಹಿನ್ನಲೆಯಲ್ಲಿ ಇಂದಿನ ಸಭೆಗೆ ಆಗಮಿಸಿದ್ದ ಜಿಲ್ಲಾಧಿಕಾರಿಗಳು ನಿಯಮಾನುಸಾರ ಅವಿಶ್ವಾಸ ನಿರ್ಣಯ ಗೊತ್ತುವಳಿ ಸಭೆಯನ್ನು ಕೈ ಬಿಟ್ಟು ತೆರಳಿದ್ದಾರೆ.ಅಂದಿನ ಸನ್ನಿವೇಶದಲ್ಲಿ ಚೆಲುವರಾಯಸ್ವಾಮಿ ಬಣದಲ್ಲಿದ್ದ ಪ್ರಸ್ತುತ ಅಧ್ಯಕ್ಷ ಸ್ಥಾನದಲ್ಲಿರುವ ದಾಸೇಗೌಡರು,ಬದಲಾದ ರಾಜಕೀಯದಲ್ಲಿ ಜೆಡಿಎಸ್ ಪಕ್ಷದಿಂದ ಆಯ್ಕೆಯಾದ ಶಾಸಕ ಸುರೇಶ್ ಗೌಡರ ಬಣದಲ್ಲೇ ಉಳಿದರು.ರಾಜಕೀಯ ಜಿದ್ದಾಜಿದ್ದಿಗಿಳಿದ ಸದಸ್ಯರು ಅಧ್ಯಕ್ಷರನ್ನು ಅಧಿಕಾರದಿಂದ ಕೆಳಗಿಳಿಸುವ ಪ್ರಯತ್ನಕ್ಕೆ ಮುಂದಾಗಿ ಅಧ್ಯಕ್ಷರ ವಿರುದ್ದ 12 ಜನ ಸದಸ್ಯರ ಸಹಿ ಸಂಗ್ರಹದೊಂದಿಗೆ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದರು.ನಿಯಮಾನುಸಾರ ಇದೆ.ಅ.01 ರಂದು ಕರೆಯಲಾಗಿದ್ದ ಅವಿಶ್ವಾಸ ನಿರ್ಣಯ ಗೊತ್ತುವಳಿ ಸಭೆಗೆ ಯಾವೊಬ್ಬ ಸದಸ್ಯರು ಹಾಜರಾಗದ ಕಾರಣ 08.10.2020 ಕ್ಕೆ ಸಭೆಯನ್ನು ಮುಂದೂಡಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದರು. ಆದರೆ ತಮ್ಮ ಅವಿಶ್ವಾಸ ನಿರ್ಣಯಕ್ಕಾಗಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಹಿಂಪಡೆಯಲು ಸಲ್ಲಿಸಲಾಗಿದ್ದ ದಾವೆಯನ್ನು ಹೈಕೋರ್ಟ್ ಪುರಸ್ಕರಿಸಿರುವ ಹಿನ್ನಲೆಯಲ್ಲಿ ಇಂದಿನ ಸಭೆಗೆ ಆಗಮಿಸಿದ್ದ ಜಿಲ್ಲಾಧಿಕಾರಿಗಳು ನಿಯಮಾನುಸಾರ ಅವಿಶ್ವಾಸ ನಿರ್ಣಯ ಗೊತ್ತುವಳಿ ಸಭೆಯನ್ನು ಕೈ ಬಿಟ್ಟು ತೆರಳಿದರು. ಈ ವಿಷಯವಾಗಿ ಪ್ರತಿಕ್ರಿಯಿಸಿದ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ದಾಸೇಗೌಡ, ನನ್ನ ವಿರುದ್ದ ಸಲ್ಲಿಸಲಾಗಿದ್ದ ಅವಿಶ್ವಾಸ ನಿರ್ಣಯ ಗೊತ್ತುವಳಿಯ ಅರ್ಜಿಯನ್ನು ಸದಸ್ಯರು ನನ್ನ ಮೇಲಿಟ್ಟಿರುವ ವಿಶ್ವಾಸದಿಂದ ಹಿಂಪಡೆದಿದ್ದಾರೆ.ಇದು ನನ್ನ ಪಾಲಿಗೆ ಸಿಕ್ಕಿರುವ ದೊಡ್ಡ ಜಯ. ಮತ್ತೊಮ್ಮೆ ನನ್ನ ವಿರುದ್ದ ಅವಿಶ್ವಾಸದ ಪ್ರಯತ್ನ ಮಾಡುವುದಿಲ್ಲ ಎಂಬ ನಂಬಿಕೆ ಇದೆ ಎಂದರು.

ವರದಿ-ಎಸ್.ವೆಂಕಟೇಶ್.ಎಕ್ಸ್ ಪ್ರೆಸ್ ಟಿವಿ ನಾಗಮಂಗಲ

Please follow and like us:

Related posts

Leave a Comment