ಉತ್ತಮ ಶೈಕ್ಷಣಿಕ ಪ್ರಗತಿ ಸಾಧಿಸಲು ವಠಾರ ಸಂಚಾರ ಕಾರ್ಯಕ್ರಮ- ಬಿಇಒ ವೀರಭದ್ರಪ್ಪ..!

ಬಳ್ಳಾರಿ: ಹರಪನಹಳ್ಳಿ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಉಚ್ಚಂಗಿದುರ್ಗ ಚಟ್ನಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ವಠಾರ ಸಂಚಾರ-ಕೊರೊನಾ ಜಾಗೃತಿ-ಕಲಿಕಾ ಪ್ರಗತಿ ಎನ್ನುವ, ವಿನೂತನ ಕಾರ್ಯಕ್ರಮಕ್ಕೆ ಹರಪನಹಳ್ಳಿ ಬಿಇಒ ವೀರಭದ್ರಪ್ಪ ಚಾಲನೆ ನೀಡಿದರು.ಕೋವಿಡ್ 19 ಮಹಾಮಾರಿ ದೇಶಾದ್ಯಂತ ವ್ಯಾಪಕವಾಗಿ ಹರಡುತ್ತಿರುವುದರಿಂದ ಸರ್ಕಾರವು ಮಕ್ಕಳಿರುವ ಮನೆಯ ಹತ್ತಿರ ಹೋಗಿ ಮಕ್ಕಳಿಗೆ ಪಾಠವನ್ನು ಕಲಿಸಿ ಕೊಡಬೇಕು ಎನ್ನುವ ಉದ್ದೇಶದಿಂದ ವಿದ್ಯಾಗಮ ಯೋಜನೆಯನ್ನು ಜಾರಿಗೆ ತಂದಿದ್ದು, ಸುಮಾರು 17 ತಂಡಗಳನ್ನು ರಚನೆ ಮಾಡಿ, ವಠಾರ ಶಾಲೆಯಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಅನುಸರಿಸಬೇಕಾದ ನಿಯಮಗಳು,ಹಾಗೂ ಮಕ್ಕಳಿಗೆ ಕೊರೊನ ರೋಗ ಹರಡದಂತೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಹರಪನಹಳ್ಳಿ ಸಾರ್ವಜನಿಕ ಶಿಕ್ಷಣ ಇಲಾಖೆವತಿಯಿಂದ ಜಾಗೃತಿ ಮೂಡಿಸಲಾಯಿತು.

ವರದಿ. ಮೆಹೆಬೂಬ್ ಸಬ್ ಎಕ್ಸ್ ಪ್ರೆಸ್ ಟಿವಿ ಹರಪನಹಳ್ಳಿ

Please follow and like us:

Related posts

Leave a Comment