ಉತ್ತರ ಪ್ರದೇಶ ಸರ್ಕಾರವನ್ನು ವಜಾಗೋಳಿಸುವಂತೆ ರಾಷ್ಟ್ರಪತಿಗಳಿಗೆ ಮನವಿ.

ಬಾಗಲಕೋಟೆ: ಉತ್ತರ ಪ್ರದೇಶ ಹತ್ರಾಸ್ ನಲ್ಲಿ ನಡೆದ ದಲಿತ ಕುಟುಂಬದ 19 ವರ್ಷದ ಮನೀಷಾ ವಾಲ್ಮೀಕಿ ಎಂಬ ಯುವತಿಯ ಮೇಲಿನ ಅತ್ಯಾಚಾರ ಹಾಗೂ ಕೋಲೆಗೆ ಸಂಭಂದಿಸಿದಂತೆ ದೇಶ್ಯಾದ್ಯಂತ ಶೋಕ ಚಿತ್ತ ಪ್ರತಿಭಟನೆಗಳು ನಡೆಯುತ್ತಿವೆ, ಅದರಂತೆ ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲ್ಲೂಕಿನ ಮಹಾಲಿಂಗಪುರ ಪಟ್ಟಣದಲ್ಲಿ ದಲಿತ ಸಂಘಟನೆಗಳು ಮತ್ತು ಇನ್ನಿತರ ಸಂಘಟನೆಗಳು ಪ್ರತಿಭಟನೆಯನ್ನು ನಡೆಸಿದರು. ಅತ್ಯಾಚಾರ ಮಾಡಿದ ವ್ಯಕ್ತಿಗಳನ್ನು ಮಟ್ಟಹಾಕಿ ಅವರಿಗೆ ಕಾನೂನಿನ ಪ್ರಕಾರ ಶಿಕ್ಷೆ ವಿಧಿಸುವಲ್ಲಿ ಯೋಗಿ ಅದಿತ್ಯನಾಥ್ ರವರ ಸರ್ಕಾರವು ವಿಫಲವಾಗಿದೆ. ಆದ್ದರಿಂದ ಈ ಸರ್ಕಾರವನ್ನು ಕೆಳಗೆ ಇಳಿಸಿ ರಾಷ್ಟ್ರಪತಿಗಳ ಅಳ್ವಿಕೆಯನ್ನು ಸರ್ಕಾರ ರಚಿಸಬೇಕು ಮತ್ತು ಅಪರಾಧಿಗಳನ್ನು ಹಿಡಿದು ಗಲ್ಲು ಶಿಕ್ಷೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿ ಪುರಸಭೆ ಮುಖ್ಯಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿಯನ್ನು ಸಲ್ಲಿಸಿದರು.

ವರದಿ :- ಶ್ಯಾಮ್ ತಳವಾರ ಎಕ್ಸ್ ಪ್ರೆಸ್ ಟಿವಿ ಮುಧೋಳ

Please follow and like us:

Related posts

Leave a Comment