ಅಂಬೇಡ್ಕರ್ ತತ್ವಾದರ್ಶಗಳಿಗೆ ಎಲ್ಲರೂ ಬದ್ಧರಾಗಿ – ಬಂತೇಜಿ..!

ಶಹಾಪುರ : ಭಾರತ ರತ್ನ ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರ ತತ್ವಾದರ್ಶಗಳಿಗೆ ಪ್ರತಿಯೊಬ್ಬರು ಬದ್ಧರಾಗವುದರ ಜೊತೆಗೆ ಸಿದ್ಧಾಂತ ಹಾಗೂ ನೈತಿಕತೆಯ ಬದುಕು ರೂಪಿಸಿಕೊಳ್ಳಬೇಕು ಎಂದು ಧಮ್ಮಗಿರಿಯ ಸಾರಿಪುತ್ರ ಬುದ್ದ ವಿಹಾರದ ಪೂಜ್ಯ ಕರುಣಾನಂದ ಬಂತೇಜಿ ಅವರು ಹೇಳಿದರು.ತಾಲೂಕಿನ ಕನ್ಯಾಕೋಳೂರು ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ರವರ ನೂತನ ಪುತ್ಥಳಿ ಅನಾವರಣಗೊಳಿಸಿ ಮಾತನಾಡಿ,ಈ ದೇಶಕ್ಕೆ ಶಾಂತಿ, ನ್ಯಾಯ, ನೀತಿ, ಸತ್ಯ, ಧರ್ಮವನ್ನು ತೋರಿಸಿಕೊಟ್ಟ ಬಾಬಾ ಸಾಹೇಬ ಅಂಬೇಡ್ಕರ್ ಅವರ ಹಾದಿಯಲ್ಲಿ ನಾವು-ನೀವು ಸಾಗಬೇಕು ಎಂದು ತಿಳಿಸಿದರು. ಜೆಡಿಎಸ್ ಮುಖಂಡರಾದ ಅಮೀನರಡ್ಡಿ ಪಾಟೀಲ್ ಯಾಳಗಿ ಧ್ವಜಾರೋಹಣ ನೆರವೇರಿಸಿದರು. ಈ ಕಾರ್ಯಕ್ರಮದ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷೆ ಸಿದ್ದಲಿಂಗಪ್ಪಗೌಡ ಪಾಟೀಲ, ಪರಶುರಾಮ ಕುರಕುಂದಿ,ಶಿವರಾಜಪ್ಪಗೌಡ ಪಾಟೀಲ್,ಅಯ್ಯಣ್ಣ ಕನ್ಯಾಕೋಳೂರ,ಸಿದ್ದಪ್ಪ ಹೊಸಮನಿ,ನೀಲಕಂಠ ಬಡಿಗೇರ, ಸೂರ್ಯವಂಶಿ, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಅಂಬಣ್ಣ ನಾಟೇಕರ್, ಪಿಡಿಒ ವೀರೇಶ ನಗರಸಭಾ ಸದಸ್ಯರಾದ ಶಿವಕುಮಾರ್ ತಳವಾರ, ನಾಗಣ್ಣ ಬಡಿಗೇರ್, ಭೀಮರಾಯ ಹೊಸಮನಿ, ರಾಮಣ್ಣ ಸಾದ್ಯಾಪುರ, ನಿಜಗುಣ ದೋರನಹಳ್ಳಿ, ಡಾ.ರವೀಂದ್ರನಾಥ ಹೊಸಮನಿ, ಶಿವಪುತ್ರ ಜವಳಿ,ಮರೆಪ ಕನೆಕೋಳುರ, ಶರಣು ದೋರನಹಳ್ಳಿ,ಶರಣರೆಡಿ ಹತ್ತಿಗೂಡುರ,ಹಾಗೂ ಇತರರು ಉಪಸ್ಥಿತರಿದ್ದರು.

ವರದಿ-ಬಸವರಾಜ್ ಸಿನ್ನೂರ ಎಕ್ಸ್ ಪ್ರೆಸ್ ಟಿವಿ ಶಹಾಪುರ

Please follow and like us:

Related posts

Leave a Comment