ಬಹುಜನ ಸಮಾಜ ಪಾರ್ಟಿಯ ಸಂಸ್ಥಾಪಕ ದಾದಾಸಾಹೇಬ್ ರವರ14 ನೇ ವರ್ಷದ ಪುಣ್ಯಸ್ಮರಣೆ..!

ದೇವದುರ್ಗ: ಬಹುಜನ ಸಮಾಜ ಪಾರ್ಟಿಯ ಸಂಸ್ಥಾಪಕರು ಹಾಗೂ ಬಹುಜನ ನಾಯಕರಾದ ಮಾನ್ಯವರ್ ದಾದಾಸಾಹೇಬ್ ಕಾನ್ಸಿರಾಮ್ ಜೀ ರವರ 14 ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಇಂದು ದೇವದುರ್ಗ ತಾಲೂಕ ಕೇಂದ್ರದಲ್ಲಿ ಆಚರಿಸಲಾಯಿತು.ಇನ್ನೂ ಈ ಕಾರ್ಯಕ್ರಮದಲ್ಲಿ ನೂತನ ಕಾರ್ಯಕರ್ತರಿಗೆ ದಾದಾಸಾಹೇಬರ ಭಾವಚಿತ್ರ ನೀಡಿ ಸ್ವಾಗತಿಸಿ ಬಹುಜನ ಸಮಾಜ ಪಕ್ಷ ಹಾಗೂ ಪಕ್ಷದ ನಾಯಕರ ಬಗ್ಗೆ ಸಂಪೂರ್ಣ ಇತಿಹಾಸವನ್ನು ತಿಳಿಸಲಾಯಿತು. ಈ ಸಂದರ್ಭದಲ್ಲಿ ಸಂಯೋಜಕರಾದ ಜೆ.ಶರಣಪ್ಪ ಬಲ್ಲಟಗಿ, ಉಸ್ತುವಾರಿಗಳಾದ ಶಿವಪ್ಪ ಬಲ್ಲಿದ, ಅಧ್ಯಕ್ಷರಾದ ಪ್ರಭು ಧಳಪತಿ ಕಾಕರಗಲ್, ಕಾರ್ಯದರ್ಶಿಗಳಾದ ಯೇಸು ಕಮಲದಿನ್ನಿ, ಸೇರಿದಂತೆ ಮತ್ತೀತರು ಉಪಸ್ಥೀತರಿದ್ದರು.

ವರದಿ-ಸುರೇಶ್ ಭವಾನಿ ಎಕ್ಸ್ ಪ್ರೆಸ್ ಟಿವಿ ದೇವದುರ್ಗ

Please follow and like us:

Related posts

Leave a Comment