ದತ್ತಾತ್ರೇಯ ದೇವಸ್ಥಾನದಲ್ಲಿ ಹುಂಡಿ ಹಣ ಏಣಿಕೆ..!

ಕಲಬುರುಗಿ- ದಕ್ಚಿಣ ಭಾರತದಲ್ಲಿಯೇ ಪ್ರಸಿದ್ದ ಯಾತ್ರಾ ಸ್ಥಳವಾದ ಕಲಬುರಗಿ ಜಿಲ್ಲೆ ಅಫಜಲಪುರ ತಾಲೂಕಿನ ಸುಕ್ಷೇತ್ರ ಗಾಣಗಾಪುರದ ದತ್ತಾತ್ರೇಯ ದೇವಸ್ಥಾನದಲ್ಲಿ ಪ್ರತಿ ವರ್ಷದಲ್ಲಿ ಮೂರುಬಾರಿ ದೇವಸ್ಥಾನದಲ್ಲಿರುವ ಹುಂಡಿ ಪೆಟ್ಟಿಗೆಗಳನ್ನು ಒಡೆಯುತ್ತಾರೆ. ಇಂದು ಸಹ ಹುಂಡಿಯನ್ನು ಹೊಡೆದಿದ್ದು, ಹಣ ಏಣಿಕೆ ಕಾರ್ಯ ಪ್ರಾರಂಭವಾಗಿದೆ. ಬೆಳಗ್ಗೆಯಿಂದ ಏಣಿಕೆ ಆರಂಭವಾಗಿದ್ದು, ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಕಂದಾಯ ಇಲಾಖೆ, ಬ್ಯಾಂಕ್ ಸಿಬ್ಬಂದಿಗಳು ಏಣಿಕೆ ಕಾರ್ಯದಲ್ಲಿ ತೊಡಗಿದ್ದಾರೆ. ಲಾಕ್ ಡೌನ್ ನಿಂದಾಗಿ ದೇವಸ್ಥಾನಗಳನ್ನು ಕೆಲ ತಿಂಗಳುಗಳ ಕಾಲ ಬಂದ್ ಮಾಡಲಾಗಿತ್ತು. ಅನ್ ಲಾಕ್ ಆದ ತಕ್ಷಣ ದೇವಸ್ಥಾನಕ್ಕೆ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದು, ಇದೀಗ ದೇವರ ಹುಂಡಿ ತುಂಬಿದೆ. ಇನ್ನೂ ದತ್ತ ದೇವಸ್ಥಾನ ಮತ್ತು ಸಂಗಮ್ ದೇವಸ್ಥಾನ ಸೇರಿ 8 ಹುಂಡಿ ಪೇಟ್ಟಿಗೆಗಳನ್ನು ಹೊಡೆಯಲಾಗಿದೆ. ಸುಮಾರು 42ಲಕ್ಷದ 27 ಸಾವಿರದ 520 ರೂಪಾಯಿ ನಗದು ಜೊತೆಗೆ ಬಂಗಾರ, ಬೆಳ್ಳಿಯವಡವೆ, ವಸ್ತ್ರಗಳನ್ನು ಕೂಡ ಭಕ್ತರು ದೇವರಿಗೆ ಕಾಣಿಕೆಯಾಗಿ ನೀಡಿದ್ದಾರೆ.

ವರದಿ-ಈರಣ್ಣ ವಗ್ಗೆ ಎಕ್ಸ್ ಪ್ರೆಸ್ ಟಿವಿ ಅಫಜಲಪುರ

Please follow and like us:

Related posts

Leave a Comment