ಅಪರಾದಿಗಳನ್ನು ನೋಡಲು ಮುಗಿಬಿದ್ದ ಜನ- ಕೊರೊನಾಗೂ ಡೋಂಟ್ ಕೇರ್ ..!

ಸಿಂಧನೂರು: ಇತ್ತೀಚೆಗೆ ಹಾಡು ಹಗಲೇ ಭೀಕರವಾಗಿ ಕೊಲೆ ಮಾಡಿ ನಗರವನ್ನೆ ತಲ್ಲಣಗೊಳಿಸಿದ್ದ ಅಪರಾಧಿಗಳನ್ನು ಇಂದು ಕೋರ್ಟ್ ಗೆ ಹಾಜರ್ ಪಡಿಸಲು ಪೋಲಿಸರು ಕರೆ ತಂದಿದ್ದರು. ಈ ವೇಳೆ ಅಪರಾಧಿಗಳನ್ನು ನೋಡಲು ಜನತೆ ಮುಗಿಬಿದ್ದಿರುವ ಘಟನೆ ಸಿಂಧನೂರು ತಾಲೂಕಿನಲ್ಲಿ ನಡೆದಿದೆ. ಕಳೆದ ಕೆಲವು ದಿನಗಳ ಹಿಂದೆ ರಾಯಚೂರು ಜಿಲ್ಲೆಯ ಸಿಂಧನೂರು ನಗರದ ಸುಕಾಲಪೇಟೆಯಲ್ಲಿ ನಡೆದ ಕೊಲೆ ಜಿಲ್ಲೆಯನ್ನೇ ಭಯಭೀತಿಗೊಳಿಸಿತ್ತು. ಇನ್ನು ಕೊಲೆ ಮಾಡಿದ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲು ಪೋಲಿಸರು ಕರೆತರುತ್ತಿದ್ದ ವೇಳೆ ಆರೋಪಿಗಳನ್ನು ನೋಡಲು ಜನ್ರು ಯಾವುದೇ ಕೊರೊನಾ ಭಯವಿಲ್ಲದೇ ಸಾಮಾಜಿಕ ಅಂತರವನ್ನು ಮರೆತು ಆರೋಪಿಗಳನ್ನು ನೋಡಲು ಮುಗಿ ಬಿದ್ದಿದ್ದಾರೆ,

ವರದಿ-ಸೈಯದ್ ಬಂದೇ ನವಾಜ್ ಎಕ್ಸ್ ಪ್ರೆಸ್ ಟಿವಿ ಸಿಂಧನೂರು

Please follow and like us:

Related posts

Leave a Comment