ಶಿಥಿಲಾವಸ್ಥೆಯಲ್ಲಿ ಬಿಇಓ ಕಛೇರಿ : ಪ್ರಾಣಭಯದಲ್ಲೆ ಸಿಬ್ಬಂದಿಗಳು ಕೆಲಸ..

ಸಿಂಧನೂರು: ಮಕ್ಕಳ ಭದ್ರ ಬುನಾದಿ ಹಾಕಬೇಕಾದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಬುನಾದಿಯೇ ಸರಿ ಇಲ್ಲದೆ ಶಿಥಿಲಾವಸ್ಥೆಗೆ ತಲುಪಿದ್ದು ಪ್ರಾಣ ಭಯದಲ್ಲೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ.ರಾಯಚೂರು ಜಿಲ್ಲೆಯ ಸಿಂಧನೂರು ನಗರದ ಪಿಡಬ್ಲೂಡಿ ಕ್ಯಾಂಪಿನಲ್ಲಿ ಇರುವ ಕ್ಷೇತ್ರ ಶಿಕ್ಷಣ ಅಧಿಕಾರಿಗಳ ಕಾರ್ಯಾಲಯವು ಸಂಪೂರ್ಣವಾಗಿ ಹದಗೆಟ್ಟಿದ್ದು ಶೀತಲ ವ್ಯವಸ್ಥೆ ತಲುಪಿದ್ದೆ. ಕಟ್ಟಡದ ತುಂಬೆಲ್ಲ ಬಿರುಕು ಬಿಟ್ಟಿದ್ದು ಎಲ್ಲೆಂದರಲ್ಲಿ ನೆಲ ಕುಸಿದಿದೆ.ಇನ್ನೂ ಮಳೆ ಬಂದರೆ ಕಚೇರಿಯ ತುಂಬೆಲ್ಲಾ ತುಂಬಿ ಸೊರಲು ಪ್ರಾರಂಭಿಸುತ್ತದೆ. ಕಾರ್ಯಾಲಯದ ನೆಲ ದಿನದಿಂದ ದಿನಕ್ಕೆ ಕುಸಿಯುತ್ತಿದ್ದು ಕೆಲವೇಡೆ ರಂಧ್ರಗಳು ಬಿದ್ದಿದ್ದು,ಕಟ್ಟಡ ಇಂದೊ ನಾಳೆಯೋ ಬೀಳುವ ಪರೀಸ್ಥಿತಿಯಲ್ಲಿದೆ. ಈ ಕುರಿತು ಕ್ಷೇತ್ರ ಶಿಕ್ಷಣ ಅಧಿಕಾರಿಗಳಿಗೆ ಕೇಳಿದಾಗ ಇನ್ನು ಕೆಲವೇ ದಿನಗಳಲ್ಲಿ ಈ ಕಟ್ಟಡ ಶೀತಲ ವ್ಯವಸ್ಥೆಗೆ ತಲುಪಿದ ಕಾರಣ ಪರಿಣಾಮವಾಗಿ ನಗರದ ಪಿಡಬ್ಲು ಕ್ಯಾಂಪಿನಲ್ಲಿರುವ ಆದರ್ಶ ಮಹಾವಿದ್ಯಾಲಯಕ್ಕೆ ವರ್ಗಾವಣೆ ಮಾಡಲಾಗುವುದು ಎಂದು ತಿಳಿಸಿದ್ದಾರೆ..

ವರದಿ-ಸೈಯದ್ ಬಂದೇನವಾಜ್ ಎಕ್ಸ್ ಪ್ರೆಸ್ ಟಿವಿ ಸಿಂಧನೂರು

Please follow and like us:

Related posts

Leave a Comment