ತಿಪ್ಪೆಗುಂಡಿ ತೆರವುಗೊಳಿಸಿ ಮಾರಣಾಂತಿಕ ಕಾಯಿಲೆ-ಗ್ರಾಮಸ್ಥರು..!

ಸಿಂಧನೂರು: ಸಿಂಧನೂರು ತಾಲೂಕಿನ ಕೆಂಗಲ್ ಗ್ರಾಮದ ವಾರ್ಡ್ ನಂ 1 ರಲ್ಲಿ ಖಾಸಗಿ ವ್ಯಕ್ತಿಗೆ ಸೇರಿದ ಬಯಲು ಜಾಗದಲ್ಲಿ ತಿಪ್ಪೆಗುಂಡಿ ಇದ್ದು .ಕೆಂಗಲ್ ಗ್ರಾಮದ ಕೆಲ ಜನರು ತಮ್ಮ ಕಸವನ್ನು ಈ ತಿಪ್ಪೆಗುಂಡಿಗೆ ಹಾಕುತ್ತಿದ್ದಾರೆ. ಇದರಿಂದ ಅಲ್ಲಿ ಸೊಳ್ಳೆ ಕಾಟ ಹೆಚ್ಚಾಗಿದ್ದು ಜನರು ಸಾಂಕ್ರಾಮಿಕ ರೋಗ ಹರಡುವ ಭೀತಿಯಲ್ಲಿ ವಾಸಿಸುತ್ತಿದ್ದಾರೆ . ಗ್ರಾಮಸ್ಥರು ಸಂಬಂಧಪಟ್ಟಂತಹ ವ್ಯಕ್ತಿಗೆ ತಿಪ್ಪೆ ತೆರವು ಮಾಡುವಂತೆ ಹೇಳಿದರೆ ಇದು ನನ್ನ ಜಾಗ ನನಗೀಷ್ಟ ಬಂದಹಾಗೇ ತಿಪ್ಪೆಗುಂಡಿ ಮಾಡಿದ್ದೇನೆ ಯಾವುದೇ ಕಾರಣಕ್ಕೂ ಇದನ್ನು ತೆರವು ಮಾಡುವುದಿಲ್ಲವೆಂದು ಬೇಜವಾಬ್ದಾರಿಯಿಂದ ಉತ್ತರ ಕೊಡುತ್ತಿದ್ದಾನೆಂದು ಸ್ಥಳೀಯರು ಆರೋಪಿಸುತ್ತಿದ್ದಾರೆ. ಇನ್ನೂ ಸಂಬಂಧಪಟ್ಟಂತಹ ಅಧಿಕಾರಿಗಳಿಗೆ ದೂರು ನೀಡಿದ್ದರೂ ಅಧಿಕಾರಿಗಳು ಮಾತ್ರ ಕ್ಯಾರೆ ಅನ್ನದೇ ನಮಗೂ ಇದಕ್ಕೂ ಸಂಬಂಧ ಇಲ್ಲದಂತೆ ವರ್ತಿಸುತ್ತಿದ್ದಾರೆ.

ವರದಿ : ಸೈಯದ್ ಬಂದೇನವಾಜ್ ಎಕ್ಸ್ ಪ್ರೆಸ್ ಟಿವಿ ಸಿಂಧನೂರು

Please follow and like us:

Related posts

Leave a Comment