ನೂತನ ಅಧ್ಯಕ್ಷರಾಗಿ ರಾಧನಾಗರಾಜು ಅವಿರೋಧವಾಗಿ ಆಯ್ಕೆ..!

ಮಳವಳ್ಳಿ: ಮಳವಳ್ಳಿ ಪಟ್ಟಣದ ಪುರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆ ಜಿಲ್ಲಾಧಿಕಾರಿಗಳ ಆದೇಶದಂತೆ ಇಂದು ಚುನಾವಣಾಧಿಕಾರಿ ಹಾಗೂ ತಹಸೀಲ್ದಾರ್ ಚಂದ್ರಮೌಳಿ ರವರು ನಿಗಧಿ ಮಾಡಿದ್ದ ಹಿನ್ನಲೆಯಲ್ಲಿ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದು,ಜೆಡಿಎಸ್ ಪಕ್ಷ 17 ನೇ ವಾರ್ಡಿನ ರಾಧನಾಗರಾಜು, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗ ಮೀಸಲಾಗಿದ್ದು 10 ವಾರ್ಡಿನ ಜೆಡಿಎಸ್ ಪಕ್ಷದ ನಂದಕುಮಾರ್ ರವರು ನಾಮಪತ್ರ ಸಲ್ಲಿಸಿದ್ದರು. ಅಧ್ಯಕ್ಷರು ಹಾಗೂ ಉಪಾಧ್ಯಕ್ಷ ಸ್ಥಾನ ಪ್ರತಿಸ್ಪರ್ಧಿ ಇಲ್ಲದ ಕಾರಣ ಅಧ್ಯಕ್ಷರಾಗಿ ರಾಧ ನಾಗರಾಜು, ಉಪಾಧ್ಯಕ್ಷ ರಾಗಿ ನಂದಕುಮಾರ್ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಚುನಾವಣಾಧಿಕಾರಿ ಚಂದ್ರಮೌಳಿ ಘೋಷಣೆ ಮಾಡಿದರು. ಇನ್ನೂ ಪುರಸಭೆಯಲ್ಲಿ ಒಟ್ಟು 23 ಸದಸ್ಯರಿದ್ದು, ಇದರಲ್ಲಿ ಜೆಡಿಎಸ್ 9 ,ಕಾಂಗ್ರೆಸ್ 5, ಬಿಜೆಪಿ 2, ಪಕ್ಷೇತರರಾಗಿ 7 ಮಂದಿ ಸದಸ್ಯರು ಗೆದ್ದಿದ್ದರು.ಶಾಸಕರು ಹಾಗೂ ಸಂಸದರು ಸಹ ಮತದಾನದ ಮಾಡುವ ಅವಕಾಶವಿತ್ತು. ಇಂದು ಚುನಾವಣೆಗೆ ಸಂಸದೆ ಸುಮಲತಾ ಹಾಗೂ ಕಾಂಗ್ರೆಸ್ ಪಕ್ಷದ 5 ಮಂದಿ ಸದಸ್ಯರು ಗೈರುಹಾಜರಾಗಿದ್ದರು.ಉಳಿದ ಎಲ್ಲಾ ಸದಸ್ಯರು ಹಾಜರಿದ್ದರು. ಇನ್ನೂ ಶಾಸಕ ಡಾ.ಕೆ ಅನ್ನದಾನಿರವರು ಮಾತನಾಡಿ, ನಮ್ಮಪಕ್ಷ ಅಧಿಕಾರ ಹಿಡಿದಿದ್ದು ಪಟ್ಟಣದ ಅಭಿವೃದ್ಧಿಗೆ ಮತ್ತಷ್ಟು ಬಲಬಂದಿದೆ. ಪಟ್ಟಣದಲ್ಲಿ ಸಾಕಷ್ಟು ಅಭಿವೃದ್ಧಿ ಯಾಗಬೇಕಾಗಿದೆ ಮುಂದಿನದಿನಗಳಲ್ಲಿ ಅಭಿವೃದ್ಧಿ ಪಡಿಸುವುದಾಗಿ ತಿಳಿಸಿದರು. ಇದೇ ವೇಳೆ ಜೆಡಿಎಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ನೂತನ ಅಧ್ಯಕ್ಷರು ಉಪಾಧ್ಯಕ್ಷರುಗಳಿಗೆ ಜೆಡಿಎಸ್ ಕಾರ್ಯಕರ್ತರು ಅಭಿನಂದಿಸಿದರು.

ವರದಿ-ಎ.ಎನ್ ಲೋಕೇಶ್ ಎಕ್ಸ್ ಪ್ರೆಸ್ ಟಿವಿ ಮಳವಳ್ಳಿ

Please follow and like us:

Related posts

Leave a Comment