ಜಾಬ್ ಕಾರ್ಡ್ ವಿತರಿಸುವಂತೆ ಪಿಡಿಓ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ- ಇಓ ಸತೀಶ್ ..!

ಮಳವಳ್ಳಿ: ಕಾಯಕ ಬಂಧುಗಳನ್ನು ಗುರುತಿಸಲು ವಿಫಲವಾದರೆ ನಿರ್ಧಾಕ್ಷಣ್ಯವಾಗಿ ಕ್ರಮಕೈಗೊಳ್ಳುವುದಾಗಿ ತಾಲ್ಲೂಕು ಪಂಚಾಯಿತಿ ಇಓ ಸತೀಶ್ ರವರು ಪಿಡಿಓಗಳಿಗೆ ಖಡಕ್ ಎಚ್ಚರಿಕೆ ನೀಡಿದರು.ಮಳವಳ್ಳಿ ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನರೇಗಾ ಹಾಗೂ ಕಾಯಕಬಂಧು ಯೋಜನೆಯಡಿಯಲ್ಲಿ ಪಿಡಿಓ ಹಾಗೂ ಜನವಾದಿ ಮಹಿಳಾ ಸಂಘಟನೆ ಮತ್ತು ವಿವಿಧ ಸಂಘಟನೆಗಳ ಜೊತೆ ಕುಂದುಕೊರತೆ ಸಭೆ ಅಧ್ಯಕ್ಷತೆವಹಿಸಿ ಮಾತನಾಡಿ ನರೇಗಾ ಕೆಲಸ ನೀಡಲು ಕಾಯಕ ಬಂಧುಗಳನ್ನು ಗುರುತಿಸಿ ಅರ್ಜಿ ಪಡೆದು ಜಾಬ್ ಕಾರ್ಡುಗಳನ್ನು ನೀಡಬೇಕು ಇದು ಕೊನೆಯ ಎಚ್ಚರಿಕೆ ಎಂದು ಪಿಡಿಓಗಳಿಗೆ ತಾಕೀತು ಮಾಡಿದರು.ಇನ್ನೂ ಜನವಾದಿ ಮಹಿಳಾ ಸಂಘಟನೆ ರಾಜ್ಯಘಟಕ ಅಧ್ಯಕ್ಷೆ ದೇವಿ ಮಾತನಾಡಿ,ಎನ್ ಆರ್ ವೈಜಿ ಯ ಯೋಜನೆ ಪಿಡಿಓಗಳು ಉಲ್ಲಂಘನೆ ಮಾಡುತ್ತಿದ್ದಾರೆ. ಗ್ರಾಮಪಂಚಾಯಿತಿ ಮಟ್ಟದಲ್ಲಿ ಸರಿಯಾಗಿ ಕೆಲಸ ನೀಡುತ್ತಿಲ್ಲ ಎಂದು ಆರೋಪಿಸಿದರು. ಇನ್ನೂ ಜನವಾದಿ ಮಹಿಳಾ ಸಂಘಟನೆಯಾಗಲಿ ವಿವಿಧ ಸಂಘಟನೆಯಾಗಲಿ ಸುಮ್ಮನೆ ಬಂದು ತಾಲ್ಲೂಕು ಪಂಚಾಯಿತಿ ಮುಂದೆಯಾಗಲಿ, ಗ್ರಾಮಪಂಚಾಯಿತಿ ಮುಂದೆಯಾಗಲಿ ಹೋರಾಟ ಮಾಡುತ್ತಿಲ್ಲ .ಇದಲ್ಲದೆ ಇಲ್ಲಿ ಬಂದಿರುವವರು ಕೂಲಿಕಾರರು, ಪ್ರತಿನಿತ್ಯ ಕೂಲಿಮಾಡಿದರೇ ಮಾತ್ರ ಊಟ ಸರ್ ಅರ್ಥಮಾಡಿಕೊಳ್ಳಿ ದಯವಿಟ್ಟು ಕೆಲಸನೀಡಿ.ಎಂದು ದೇವಿ ಸಭೆಯಲ್ಲಿ ಖಾರವಾಗಿ ಮಾತನಾಡಿದರು.ಸಭೆಯಲ್ಲಿ ಉದ್ಯೋಗ ಖಾತರಿ ಯೋಜನೆಯ ಪ್ರಭಾರ ಸಹಾಯಕ ನಿರ್ದೇಶಕ ಕೃಷ್ಣಪ್ಪಗೌಡ, ಜನವಾದಿ ಮಹಿಳಾ ಸಂಘಟನೆ ರಾಜ್ಯ ಘಟಕದ ಅಧ್ಯಕ್ಷೆ ದೇವಿ, ತಾಲ್ಲೂಕು ಅಧ್ಯಕ್ಷೆ ಸುಶೀಲ ಮಂಜುಳ ಸೇರಿದಂತೆ ಮತ್ತಿತ್ತರರು ಇದ್ದರು.

ವರದಿ- ಎ.ಎನ್ ಲೋಕೇಶ್ ಎಕ್ಸ್ ಪ್ರೆಸ್ ಟಿವಿ ಮಳವಳ್ಳಿ

Please follow and like us:

Related posts

Leave a Comment