ಆರ್ ಸಿಬಿಗೆ ಸೋಲು ಇಂಗ್ಲೇಂಡ್ ಆಟಗಾರ್ತಿ ಅಲೆಕ್ಸಾಂಡ್ರಾ ಹಾರ್ಟ್ಲಿ ಬೇಸರ

ಅಬುಧಾಬಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಬಾರಿಯೂ ಕಪ್ ಗೆಲ್ಲುವ ಅವಕಾಶ ಕೈ ತಪ್ಪಿಸಿಕೊಂಡಿದೆ. ನಿನ್ನೆ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ ಎಲಿಮಿನೇಟರ್ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಬೆಂಗಳೂರು ತಂಡ 6 ವಿಕೆಟ್ ಸೋಲನುಭವಿಸಿ ಈ ಸೀಸನ್ನಲ್ಲಿ ಸ್ಪರ್ಧೆ ಮುಗಿಸಿದೆ. ವಿರಾಟ್ ಕೊಹ್ಲಿ ಪಡೆಯ ಸೋಲು ಅಪಾರ ಸಂಖ್ಯೆಯ ಅಭಿಮಾನಿಗಳಿಗೆ ಬೇಸರ ತಂದಿದ್ದು, ಭಾರತದಲ್ಲಷ್ಟೇ ಅಲ್ಲದೇ ವಿದೇಶದಲ್ಲೂ ಆರ್ಸಿಬಿ ಅಭಿಮಾನಿಗಳು ಹೆಚ್ಚಿದ್ದಾರೆ. ಇಂಗ್ಲೆಂಡ್ ಆಟಗಾರ್ತಿ ಅಲೆಕ್ಸಾಂಡ್ರಾ ಹಾರ್ಟ್ಲಿ ಕೂಡ ಆರ್ಸಿಬಿಯ ದೊಡ್ಡ ಅಭಿಮಾನಿ. ಆರ್ಸಿಬಿ ಸೋಲಿಗೆ ಬೇಸರ ವ್ಯಕ್ತಪಡಿಸಿ ಹಾರ್ಟ್ಲಿ ಟ್ವೀಟ್ ಮಾಡಿದ್ದಾರೆ. ನಾವು ಮತ್ತೊಂದು ಗೇಮ್ ಅನ್ನು ನರಕ ಮಾಡಿಕೊಂಡು ಟೂರ್ನಿಯಿಂದ ಹೊರ ಬಿದ್ದಿದ್ದೇವೆ. ಮತ್ತೆ ನಾವು ಯಾವತ್ತಾದರೂ ಕಪ್ ಗೆಲ್ಲುತ್ತೀವಾ?’ ಎಂದು ಟ್ವೀಟ್ನಲ್ಲಿ ಬರೆದುಕೊಂಡಿರುವ ಹಾರ್ಟ್ಲಿ ಜೊತೆಗೆ ಅಳುವ ಇಮೋಜಿಯನ್ನೂ ಸೇರಿಸಿಕೊಂಡಿದ್ದಾರೆ.

Please follow and like us:

Related posts

Leave a Comment