ಆರ್ ಎಸ್ ಎಸ್ ಖಾಖಿ ಚಡ್ಡಿ, ಕರಿ ಟೋಪಿ ಹಾಕಿ ಸಾಕಷ್ಟು ಅನಾಹುತ ಮಾಡಿದ್ದಾರೆ- ಬಿ.ಕೆ.ಹರಿಪ್ರಸಾದ್

ಹುಬ್ಬಳ್ಳಿ ದೇಶದಲ್ಲಿ ನಾಥೋರಾಂ ಗೋಡ್ಸೇಯನ್ನು ವೈಭವೀಕರಿಸುವ ಕೆಲಸವನ್ನ ಕೆಲವರು ಮಾಡುತ್ತಿದ್ದಾರೆ. ಮಾಜಿ ಸಚಿವ ವಿನಯ ಕುಲಕರ್ಣಿ ಬಂಧನ ವಿಚಾರದಲ್ಲಿ, ವಿನಾಕಾರಣ ವಿನಯ ಕುಲಕರ್ಣಿಯವರನ್ನ ಜೈಲಿಗೆ ಹಾಕಲಾಗಿದೆ ಎಂದು ಎಐಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿ ಬಿ.ಕೆ.ಹರಿಪ್ರಸಾದ್ ಹೇಳಿದರು.ಗಾಂಧೀಜಿ ಸವಿ ನೆನಪಿನ ಸ್ಮರಿಸಿ ಮಾತನಾಡಿದ ಅವರು, ರಾಜಕೀಯ ಷಡ್ಯಂತ್ರದಿಂದ ಅವರನ್ನ ಜೈಲಿಗೆ ಹಾಕಲಾಗಿದೆ. ದೇಶದಲ್ಲಿ ಗಾಂಧೀಜಿಯವರು ಅನೇಕ ಕನಸು ಕಂಡಂತಹ ಮಹಾತ್ಮರು. ಆದ್ರೆ ಗಾಂದೀಜಿ ಕಂಡಂತಹ ಹಲವು ಕನಸಗಳನ್ನು ಕರಿ ಟೋಪಿ ಖಾಖಿ ಚಡ್ಡಿ ಹಾಕಿ ಬಿಜೆಪಿ ಮತ್ತು ಆರ್ ಎಸ್ ಎಸ್ ನುಚ್ಚುನೂರು ಮಾಡುತ್ತಿದೆ. ಅಂತಹ ಅನಾಹುತಗಳನ್ನು ತಡೆಯಲು ಕಾಂಗ್ರೆಸ್ ಕಾರ್ಯಕರ್ತರು ದೇಶಪ್ರೇಮ ಮೆರೆಯಬೇಕು. ಹಿಂದೂ ಧರ್ಮಕ್ಕೂ ಆರ್ ಎಸ್ ಎಸ್ ಗೂ ಸಂಬಂಧವಿಲ್ಲ. ನಮಗೆ ಬೇಕಾಗಿರುವುದು ಗಾಂಧೀಜಿ ಮತ್ತು ವಿವೇಕಾನಂದರ ಹಿಂದೂತ್ವ.ಗೋಡ್ಸೇ ಮತ್ತು ಗೋಲ್ವಾಳಕರ ಅವರ ಹಿಂದೂತ್ವ ನಮಗೆ ಬೇಡ ಎಂದು ವ್ಯಂಗ್ಯವಾಡುವ ಮೂಲಕ ಆರ್ ಎಸ್ ಎಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬಿಜೆಪಿ

ವರದಿ-ರಾಜುಮುದುಗಲ್ ಎಕ್ಸ್ ಪ್ರೆಸ್ ಟಿವಿ ಹುಬ್ಬಳ್ಳಿ

Please follow and like us:

Related posts

Leave a Comment