ಹೇರ್ ಕಟಿಂಗ್ ಮಾಡಿದ್ದಕ್ಕೆ ಗ್ರಾಸ್ಥರಿಂದ ಕ್ಷೌರಿಕನಿಗೆ ಸಾಮಾಜಿಕ ಬಹಿಷ್ಕಾರ..!

ನಂಜನಗೂಡು: ಪರಿಶಿಷ್ಠ ಜಾತಿ ವರ್ಗದವರಿಗೆ ಹೇರ್ ಕಟಿಂಗ್ ಮಾಡಿದ್ದಕ್ಕೆ ಸವಿತಾ ಸಮಾಜದ ಕುಟುಂಬಕ್ಕೆಗ್ರಾಮದ ಮುಖಂಡರು ಸಾಮಾಜಿಕ ಬಹಿಷ್ಕಾರ ಹೇರಿರುವ ಘಟನೆ ನಂಜನಗೂಡು ತಾಲೂಕಿನ ಹಲ್ಲರೆ ಗ್ರಾಮದಲ್ಲಿ ನಡೆದಿದೆ. ಸಾಮಾಜಿಕ ಬಹಿಷ್ಕಾರದಿಂದ ಮನನೊಂದು ಕುಟುಂಬಸ್ಥರು ಆತ್ಮಹತ್ಯೆ ಮುಂದಾಗಿದ್ದಾರೆ. ಇನ್ನೂ ತಾತ ಮುತ್ತಾತರ ಕಾಲದಿಂದಲೂ ವಂಶಪಾರಂಪರ್ಯವಾಗಿ ಗ್ರಾಮದಲ್ಲಿ ಕ್ಷೌರಿಕ ಕೆಲಸ ಮಾಡುತ್ತಿರುವ ಏಕೈಕ ಕುಟುಂಬ ಮಲ್ಲಿಕಾರ್ಜುನ ಶೆಟ್ಟಿ ಅವರದ್ದು, ಹಲ್ಲರೆ ಗ್ರಾಮದ ಚನ್ನನಾಯಕ ಮತ್ತು ಸಹಚರರಿಂದ ಪರಿಶಿಷ್ಟ ಜಾತಿ ವರ್ಗದವರಿಗೆ ಹೇರ್ ಕಟಿಂಗ್ ಮತ್ತು ಶೇವಿಂಗ್ ಮಾಡಬಾರದು ಎಂದು ನಿರ್ಬಂಧವನ್ನು ಗ್ರಾಮಸ್ಥರು ಏರಿದ್ದರು. ಆದ್ರೆ ಪರಿಶಿಷ್ಠ ಜಾತಿ ವರ್ಗಕ್ಕೆ ಕಟಿಂಗ್ ಹಾಗೂ ಶೇವಿಂಗ್ ಮಾಡಲೇಬೇಕೆಂದು ಸರ್ಕಾರದ ಆದೇಶವನ್ನು ನೀಡಿತ್ತು. ಆದ್ರೆ ಮಲ್ಲಿಕಾರ್ಜುನ ರವರಿಗೆ ಸರ್ಕಾರದ ಆದೇಶ ಪಾಲಿಸಿದ್ದಕ್ಕೆ ಗ್ರಾಮದಿಂದ ಬಹಿಷ್ಕಾರದ ಶಿಕ್ಷೆಯಾಗಿದೆ.ಇನ್ನೂ ಗ್ರಾಮದ ಮುಖಂಡರ ಆದೇಶವನ್ನು ಧಿಕ್ಕರಿಸಿ ಚೆನ್ನನಾಯಕ ಮತ್ತು ಸಹಚರರು ಮಲ್ಲಿಕಾರ್ಜುನ ಶೆಟ್ಟಿ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಿದ್ದು, ಜಾತಿ ತಾರತಮ್ಯವಿಲ್ಲದೆ ಕಸುಬಿನಲ್ಲಿ ತೊಡಗಿದ್ದ ಕುಟುಂಬಕ್ಕೆ ಶಿಕ್ಷೆ 50 ಸಾವಿರ ದಂಡ ಕಟ್ಟುವಂತೆ ಕಟ್ಟಪ್ಪಣೆ ಆದೇಶವನ್ನು ಗ್ರಾಮದ ಮುಖಂಡರು ಹೊರಡಿಸಿದ್ದಾರೆ. ಈಗಾಗಲೇ ಎರಡು ಬಾರಿ ದಂಡ ಕಟ್ಟಿರುವ ಮಲ್ಲಿಕಾರ್ಜುನ ಶೆಟ್ಟಿ ಸಾಮಾಜಿಕ ಬಹಿಷ್ಕಾರದಿಂದ ನೊಂದು ತಹಸೀಲ್ದಾರ್ ಕಚೇರಿಗೆ ಅಲೆಯುತ್ತಿದ್ದಾರೆ. ಮಲ್ಲಿಕಾರ್ಜುನ ಶೆಟ್ಟಿ ಕುಟುಂಬ 3 ತಿಂಗಳಿಂದ ಪರಿಪಾಟಲು ಪಡುತ್ತಿದ್ದು, ಸಾಮಾಜಿಕ ಬಹಿಷ್ಕಾರದಿಂದ ಆತ್ಮಹತ್ಯೆಗೆ ಮುಂದಾಗಿದ್ದಾರೆ.ಇನ್ನೂ ಈ ವಿಚಾರಕ್ಕೆ ಸಂಬಂಧಿಸಿದಂತೆ ನಂಜನಗೂಡಿನ ತಹಸೀಲ್ದಾರ್ ಗೆ ದೂರು ನೀಡಿದರೂ ನೋ ಯೂಸ್ ಅಂತೇ ಇನ್ನೂ ಈ ಕುಟುಂಬಕ್ಕೆ ತಾಲ್ಲೂಕು ಆಡಳಿತ ನ್ಯಾಯ ದೊರಕಿಸುವುದೇ ಕಾದುನೋಡಬೇಕಿದೆ

ವರದಿ- ಹುಲ್ಲಹಳ್ಳಿ ಮೋಹನ್ ಎಕ್ಸ್ ಪ್ರೆಸ್ ಟಿವಿ ನಂಜನಗೂಡು

Please follow and like us:

Related posts

Leave a Comment