ಸಾಲು ಮರದ ತಿಮ್ಮಕ್ಕ_ಸಸ್ಯೋಧ್ಯಾನ ಉದ್ಯಾನವನವ ಉದ್ಘಾಟನೆ..!

ಪಾವಗಡ: ಅರಣ್ಯ ಇಲಾಖೆ ವತಿಯಿಂದ ನಿರ್ಮಿಸಲಾಗಿದ್ದ ಸಾಲು ಮರದ ತಿಮ್ಮಕ್ಕ_ಸಸ್ಯೋಧ್ಯಾನ ಉದ್ಯಾನವನವನ್ನು ಉದ್ಘಾಟನೆ ಮಾಡಿದ ತುಮಕೂರು ಜಿಲ್ಲಾ ಉಸ್ತುವಾರಿ ಹಾಗೂ ರಾಜ್ಯ ಕಾನೂನು ಮತ್ತು ಸಣ್ಣ ನೀರಾವರಿ ಸಚಿವರಾದ ಜೆ ಸಿ ಮಾಧುಸ್ವಾಮಿರವರು ಮಾತನಾಡಿ ಅವರು ಸಾರ್ವಜನಿಕ ಜೊತೆ ಜನ ಸ್ನೇಹಿಗಳು ಆಗುವವರೆಗೂ ನೀವೂ ಏನೆ ಕೆಲಸ ಮಾಡಿದರು ಅದು ಪ್ರಯೋಜನವಿಲ್ಲ. ಇತ್ತಿಚಿನ ದಿನಗಳಲ್ಲಿ ಅರಣ್ಯ ಇಲಾಖೆಯ ಮೇಲೆ ಹೆಚ್ಚು ದೂರುಗಳು ಬರಲಾಗುತ್ತಿವೆ. ಕಾರ್ಯಕ್ರಮಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮಾಡುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ನರೇಗಾ ಯೋಜನೆಯಲ್ಲಿ ಎಷ್ಟು ರೈತರಿಗೆ ಗಿಡಗಳು ನೆಟ್ಟಲು ಆಯ್ಕೆ ಮಾಡಲಾಗಿದೆ ಎಂಬುದು ಸರಿಯಾಗಿ ಮಾಹಿತಿ ನಿಡಲ್ಲ. ಕಾಡು ನಾಶದಿಂದ ಮನುಷ್ಯನ ಆಯಸ್ಸು ಕಡಿಮೆ ಮಾಡುಕೂಳ್ಳುತ್ತಿದ್ದರೆ. ಪ್ರಕೃತಿಗೆ ಯಾವೂದೇ ಇಂಜಿನಿಯರ್ ಅಗಲಿ ವೈದ್ಯರು ಬೇಕಾಗಿಲ್ಲ. ವಾತಾವರಣಕ್ಕೆ ಅಣುಗುಣವಾಗಿ ಗಿಡಗಳು ಬೆಳಸಬೇಕು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾಜಿ ಸಚಿವರು ಹಾಲಿ ಪಾವಗಡ ಜನಪ್ರಿಯ ಶಾಸಕರಾದ ವೆಂಕಟರವಣಪ್ಪ ನವರು ಮಾತನಾಡಿ ಅರಣ್ಯ ಇಲಾಖೆಯವರು ಗಿಡ ಬೆಳಸಿ ಎಂದರೆ ಯಾರು ರಸ್ತೆ ಹಾಕುತ್ತಿದ್ದರೆ.ಯಾರು ನೀರಿನ ಟ್ಯಾಂಕ್ ನಿರ್ಮಾಣ ಮಾಡುತ್ತಿರುವ ಕೆಲಸ ನಿಲ್ಲಿಸಲು ಒಡಿಹೋಗುತ್ತಾರೆ.ಅರಣ್ಯ ಇಲಾಖೆಯ ರಾಜ್ಯ ಹಾಗೂ ಜಿಲ್ಲಾ ಪಟ್ಟಣದ ಮೇಲಾಧಿಕಾರಿಗಳು ಕಚೇರಿಯ ಏಸಿ ಕೊಠಡಿ ಗಳಲ್ಲಿ ಕುತರೆ ಗ್ರಾಮೀಣ ಪ್ರದೇಶಗಳಲ್ಲಿ ಅವರ ಅಧಿಕಾರಿಗಳು ಮಾಡುತ್ತಿರುವ ಕೆಲಸಗಳು ಯಾರು ಗಮನಿಸುತ್ತಾರೆ.ಕಾಡು ನಾಶ ಪಡಿಸುವಂತಹವರಿಗೆ ಹಿಂಬದಿಯಲ್ಲಿ ಸಹಾಯ ಮಾಡುತ್ತಾರೆ ಹೊರೆತು ಕೆಲಸ ಮಾತ್ರ ಹೇಳುವ ಹಾಗೆ ಇಲ್ಲ.ಸರ್ಕಾರ ನಿಮಗೆ ಸಂಬಳ ನೀಡಲಾಗುತ್ತಿರುವುದು ಪ್ರಾಮಾಣಿಕವಾಗಿ ಕೆಲಸ ಮಾಡಲು ನಿಮ್ಮ ಜವಾಬ್ದಾರಿ ಮೇಲಿರುತ್ತದೆ.ತಾಲ್ಲೂಕಿನ ಎಷ್ಟು ಗಿಡ ನೆಟ್ಟಲಾಗಿದೆ ಎಂಬುದು ಮಾಹಿತಿ ನೀಡಿ ಎಂದು ಬಾಷಣದಲ್ಲಿ ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡಿದ್ದರು.ಹಾಗೂ ತಾಲೂಕಿನ ಜಿಲ್ಲಾ ಪಂಚಾಯಿತಿ ಸದಸ್ಯರುಗಳು, ತಾಲೂಕ ಪಂಚಾಯಿತಿ ಸದಸ್ಯರು, ಹಾಗೂ ಪಾವಗಡ ಪುರಸಭಾ ಅಧ್ಯಕ್ಷರು ಉಪಾಧ್ಯಕ್ಷರು ಮತ್ತು ಪುರಸಭಾ ಸದಸ್ಯರುಗಳು ಮತ್ತು ಅಪಾರ ಬೆಂಬಲಿಗರು ಹಾಜರಿದ್ದರು. ಈವೇಳೆ ಮಧುಗಿರಿ ಉಪವಿಭಾಗಧಿಕಾರಿ ರೂಪದೇವಿ.ತಹಶಿಲ್ದಾರ್ ನಾಗರಾಜ್.ಅರಣ್ಯ ಅಧಿಕಾರಿಗಳಾದ ಹಚ್.ಸಿ.ಗಿರೀಶ್. ಶ್ರೀನಿವಾಸ್. ಆರ್.ಎಫ್.ಓ.ಸುರೇಶ್.ಹಾಗೂ ಪುರಸಭೆಯ ಸದಸ್ಯರುಗಳು ಭಾಗವಹಿಸಿದ್ದರು.

ವರದಿ- ಇಮ್ರಾನ್ ಉಲ್ಲಾ ಎಕ್ಸ್ ಪ್ರೆಸ್ ಟಿವಿ ಪಾವಗಡ

Please follow and like us:

Related posts

Leave a Comment