ಫಿಟ್ನೆಸ್ ಗಾಗಿ ಹೋಟೆಲ್ ಆವರಣದಲ್ಲಿ ಸೋನಿಯಾ ಸೈಕಲ್ ಸವಾರಿ..!

ಗೋವಾದಲ್ಲಿ ಬೀಡುಬಿಟ್ಟಿರುವ ಕಾಂಗ್ರೆಸ್ನ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಸೈಕಲ್ ಸವಾರಿ ಮಾಡುತ್ತಿರುವ ವಿಡಿಯೋ ಭಾರಿ ವೈರಲ್ ಆಗಿದೆ.ಇಂದು ಬೆಳಗ್ಗೆ ಗೋವಾದ ಲೀಲಾ ಪ್ಯಾಲೇಸ್ ಹೋಟೆಲ್‌ನ ಆವರಣದಲ್ಲಿ ಸೈಕಲ್ ಸವಾರಿ ಮಾಡಿದ್ದು, ಆ ದೃಶ್ಯವನ್ನು ಕಾಂಗ್ರೆಸ್ ಮುಖಂಡ ರಜತ ಉಳ್ಳಾಗಡ್ಡಿ ಮಠ ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ.ಸೋನಿಯಾ ಗಾಂಧಿ ಅವರು ಕೆಲ ತಿಂಗಳಿನಿಂದ ಶ್ವಾಸಕೋಶ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದಾರೆ. ಅವರಿರುವ ದೆಹಲಿಯಲ್ಲಿ ವಾಯು ಮಾಲಿನ್ಯ ಪ್ರಮಾಣ ದಿನೇದಿನೆ ಹೆಚ್ಚುತ್ತಿದ್ದು, ಆರೋಗ್ಯ ದೃಷ್ಟಿಯಿಂದ ವೈದ್ಯರ ಸಲಹೆ ಮೇರೆಗೆ ತಮ್ಮ ಪುತ್ರ ರಾಹುಲ್ ಗಾಂಧಿ ಜತೆಯಲ್ಲಿ ಗೋವಾದಲ್ಲಿ ಉಳಿದುಕೊಂಡಿದ್ದಾರೆ.ರಾಷ್ಟ್ರ ರಾಜಧಾನಿಯಲ್ಲಿ ವಾಯು ಮಾಲಿನ್ಯ ಪ್ರಮಾಣ ತಗ್ಗುವವರೆಗೂ ಅವರು ದೆಹಲಿಗೆ ಮರಳುವುದಿಲ್ಲ ಎಂದು ಕೆಲ ಮೂಲಗಳು ತಿಳಿಸಿವೆ.

Please follow and like us:

Related posts

Leave a Comment