ಆನೆ ಮರಿ ಹಾಗೂ ನಾಯಿಯ ಫ್ರೆಂಡ್ ಶಿಪ್ ಹೇಗಿದೆ ನೋಡಿ…!

ಆನೆ ಮರಿಗಳು ತಮ್ಮ ಮುಗ್ಧತೆ ಹಾಗೂ ಮುದ್ದುತನದಿಂದ ಬಲೇ ಇಷ್ಟವಾಗುತ್ತವೆ. ಅವುಗಳ ಚಿನ್ನಾಟದ ವಿಡಿಯೋಗಳನ್ನು ನೆಟ್‌ನಲ್ಲಿ ನೋಡುವುದೇ ಒಂದು ಖುಷಿ. ಭಾರತೀಯ ಅರಣ್ಯ ಸೇವೆ ಅಧಿಕಾರಿ ಸುಶಾಂತಾ ನಂದಾ ಇಂಥದ್ದೇ ಒಂದು ವಿಡಿಯೋ ಶೇರ್‌ ಮಾಡಿಕೊಂಡಿದ್ದಾರೆ. ಆನೆ ಮರಿಯು ತನ್ನ ಮೆಚ್ಚಿನ ಸ್ನೇಹಿತ ನಾಯಿಯೊಂದಿಗೆ ಆಟವಾಡುತ್ತಿರುವುದನ್ನು ಈ ಎಂಟು ಸೆಕೆಂಡ್‌ಗಳ ಕ್ಲಿಪ್‌ನಲ್ಲಿ ವೀಕ್ಷಿಸಬಹುದಾಗಿದೆ. ಹಸಿರು ಹುಲ್ಲಿನ ನಡುವೆ ಆನೆ ಮರಿ ಹಾಗೂ ನಾಯಿ ಚಿನ್ನಾಟ ನೋಡುವುದೇ ಖುಷಿ. “ಸ್ನೇಹಿತರು ಎಲ್ಲಾ ಗಾತ್ರದಲ್ಲೂ, ಆಕಾರದಲ್ಲೂ ಇರುತ್ತಾರೆ” ಎಂದು ನಂದಾ ಈ ಪೋಸ್ಟ್ ಕ್ಯಾಪ್ಷನ್ ಕೊಟ್ಟಿದ್ದಾರೆ.

ವರದಿ-ನ್ಯೂಸ್ ಡೆಸ್ಕ್ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು

Please follow and like us:

Related posts

Leave a Comment