11 ಸಾವಿರ ಪೊಲೀಸ್ ಉದ್ಯೋಗಗಳನ್ನು ಎರಡೂ ವರ್ಷಗಳಲ್ಲಿ ತುಂಬಿಕೊಳ್ಳಲಾಗುವುದು- ಬಸವರಾಜ್ ಬೊಮ್ಮಾಯಿ..!

ಸಿಂಧನೂರು : ನಗರ ಪೊಲೀಸ್ ಠಾಣೆಯ ನೂತನ ಕಟ್ಟಡ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ. ನೂತನ ಪೋಲಿಸ್ ಠಾಣೆ ಯನ್ನು ಉದ್ಘಾಟಿಸಿ ನಂತರ ಮಾತನಾಡಿದ ಬಸವರಾಜ್ ಬೊಮ್ಮಾಯಿ ಜನಸೇವೆ ಪೊಲೀಸರಾಗಿ ಕಾರ್ಯ ಪ್ರವೃತ್ತರಾಗಬೇಕು ನೊಂದು ಬರುವ ಸಾರ್ವಜನಿಕರಿಗೆ ನ್ಯಾಯ ಕೊಡಿಸುವ ರೀತಿಯಲ್ಲಿ ಕರ್ತವ್ಯ ನಿರ್ವಹಿಸಬೇಕು. ಕೋವಿಡ್ ವಾರಿಯರ್ಸ್ ಆಗಿ ರಾಯಚೂರು ಜಿಲ್ಲೆ. ಹಾಗೂ ಸಿಂಧನೂರು ಉಪ ವಿಭಾಗದ ಪೋಲಿಸರು ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ನಿರ್ವಹಿಸಿದ್ದಾರೆ. 5 ಪೊಲೀಸರು ಕೋವಿಡ್ ಗೆ ಬಲಿಯಾಗಿ ಮರಣವನ್ನು ಹೊಂದಿದ್ದರೆ ಆ ಕುಟುಂಬಗಳಿಗೆ 30 ಲಕ್ಷ ಪರಿಹಾರ ಸರ್ಕಾರದಿಂದ ಒದಗಿಸುತ್ತದೆ. ಜೊತೆಗೆ ಇನ್ನೂ ಪೋಲಿಸ್ ಇಲಾಖೆಗೆ 2ವರ್ಷಗಳಲ್ಲಿ ಹಂತ ಹಂತವಾಗಿ 11 ಸಾವಿರ ಹೊಸ ಉದ್ಯೋಗಗಳನ್ನು ತುಂಬಿಕೊಳ್ಳಲಾಗುವುದು ಸಿಂಧನೂರು ನಗರಕ್ಕೆ ನೂತನ ಟ್ರಾಫಿಕ್ ಸ್ಟೇಷನ್ ನಿರ್ಮಾಣಕ್ಕೆ ಹಣ ಮಂಜೂರು ಮಾಡಲಾಗುವುದು ಎಂದು ತಿಳಿಸಿದರು. ಬಳ್ಳಾರಿ ವಲಯದ ಐಜಿಪಿ ನಂಜುಂಡಯ್ಯ, ರಾಯಚೂರು ಎಸ್ಪಿ ಪ್ರಕಾಶ್ ನಿಕಮ್ ಹೆಚ್ಚುವರಿ ಎಸ್ಪಿ ಹರಿಬಾಬು ,ಡಿವೈಎಸ್ಪಿ ವಿಶ್ವನಾಥ ರಾವ್ ಕುಲಕರ್ಣಿ,ಸೇರಿದಂತೆ ಪೊಲೀಸ್ ಸಿಬ್ಬಂಧಿ ವರ್ಗ ವಿವಿಧ ಪಕ್ಷದ, ಮುಖಂಡರು ಭಾಗವಹಿಸಿದ್ದರು.

ವರದಿ-ಸೈಯದ್ ಬಂಧೇನವಾಜ್ ಎಕ್ಸ್ ಪ್ರೆಸ್ ಟಿವಿ ಸಿಂಧನೂರು

Please follow and like us:

Related posts

Leave a Comment