ಕರ್ನಾಟಕ ರಾಜ್ಯ ಗೃಹರಕ್ಷ ದಳದಿಂದ ಕೋವಿಡ್- 19 ಜಾಗೃತಿ ಅಭಿಯಾನ.!

ಸಿಂಧಗಿ: ಕೋವಿಡ್ 19 ಕೋರನಾ ಕಾಯಿಲೆ ಮಹಾಮಾರಿಯಿಂದ ಇಡಿ ವಿಶ್ವವೇ ತತ್ತರಿಸಿ ಹೋಗಿದೆ. ಲಸಿಕೆ ಹುಡುಕಾಟದಲ್ಲಿ ಘಟಾನುಗಟಿ ದೇಶಗಳೆಲ್ಲ ನಾಮುಂದು ತಾಮುಂದು ಅಂತಾ ಕೋರಾನ ಲಸಿಕೆ ಕಂಡು ಹಿಡಿಯಲು ಶತ ಪ್ರಯತ್ನ ಪಡುತ್ತಿವೆ. ಜನರ ಹಿತದೃಷ್ಠಿಯಿಂದ ಸರಕಾರ ಕೂಡಾ ಕೋಟಿಗಟ್ಟಲೆ ಹಣಖರ್ಚು ಮಾಡಿ ಕೋರೊನಾದ ಬಗ್ಗೆ ಜಾಗೃತಿ ಮುಡಿಸಿದರು ಏನು ಉಪಯೊಗ ಆಗ್ತಿಲ ಇಂತಹ ಸಂದರ್ಬದಲ್ಲಿ ಜನರು ತಮ್ಮ ಆರೋಗ್ಯ ದೃಷ್ಠೀಯಿಂದ ಜಾಗೃತರಾಗಿರಬೇಕು. ಸಾರ್ವಜನಿಕರಿಗೆ ತಮ್ಮ ಆರೋಗ್ಯದ ಬಗ್ಗೆಯಾಗಲಿ ಕುಟುಂಬದ ಬಗ್ಗೆಯಾಗಲಿ ಕಿಂಚಿತ್ತು ಕಾಳಜಿಯಿಲ್ಲ, ಮುಖ ಕವಚ ದರಿಸದೆ ಬೇಕಾಬಿಟ್ಟಿ ಓಡಾಡುತ್ತಿದ್ದಾರೆ. ಇದನು ಅರಿತ ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದಲ್ಲಿ ಕರ್ನಾಟಕ ರಾಜ್ಯ ಗೃಹರಕ್ಷದಳ ಇಲಾಖೆಯಿಂದ ತಾಲೂಕಿನ ಜನತೆಗೆ ಮುಖಕ್ಕೆ ಮುಖ ಕವಚ ಧರಿಸಿ ಸ್ಯಾನಿಟೈಸರ್ ನಿಂದ ಪದೆ ಪದೆ ಕೈ ತೋಳೆಯ ಬೇಕು, ಕೈಗಳನ್ನು ನೈರ್ಮಲ್ಯದಿಂದ ಕಾಪಾಡಿಕೊಳ್ಳಿ, ಔಷದಿ ಸಿಗುವವರೆಗೂ ಯಾವುದೇ ಸಡಿಲಿಕೆ ಇಲ್ಲ ಎಂದು ದ್ವನಿ ವರ್ದಕದ ಮುಖಾಂತರ ತಾಲೂಕಿನ ಗೃಹರಕ್ಷದಳದ ಸಿಬ್ಬಂದಿಗಳು ಪಟ್ಟಣದ ಪ್ರಮುಖ ಬಿದಿಗಳಲ್ಲಿ ಸಂಚರಿಸಿ ಉಚಿತ ಮಾಸ್ಕ ವಿತರಸಿ ಕೋವಿಡ್ 19 ಕೋರೊನಾದ ಬಗ್ಗೆ ಜಾಗೃತಿ ಅಭಿಯಾನ ಮುಡಿಸಿದರು.

ವರದಿ: ಅಂಬರೀಶ್ ಸುಣಗಾರ ಎಕ್ಸ್ ಪ್ರೆಸ್ ಟಿವಿ ಸಿಂದಗಿ

Please follow and like us:

Related posts

Leave a Comment