ತುಕ್ಕು ಹಿಡಿದ ಸರ್ಕಾರಿ ವಾಹನ: ಅಧಿಕಾರಿಗಳ ಕಾರ್ಯವೈಖರಿಯ ಕೈಗನ್ನಡಿ..!

ಇಂಡಿ: ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ, ಎಂಬ ವಚನ ಕೇಳಿದ್ದೀರಲ್ಲವೇ? ಇದು ಇಂಡಿ ತಾಲ್ಲೂಕಿನ ಸರಕಾರಿ ವಾಹನಕ್ಕೂ ಅನ್ವಯಿಸುತ್ತದೆ. ಸದಾ ಓಡಾಡುತ್ತಿರಲಿ ಎಂದುಕೊಂಡ ಸರಕಾರಿ ವಾಹನ ಚಲಿಸದೇ ಒಂದೇ ಕಡೆ ಸ್ಥಿರವಾಗಿ ನಿಂತು ತುಕ್ಕು ಹಿಡಿದಿದೆ. ತುಕ್ಕು ಹಿಡಿದ ಈ ವಾಹನ ನಮ್ಮ ಸರಕಾರಿ ಅಧಿಕಾರಿಗಳ ಕಾರ್ಯವೈಖರಿಗೆ ಕೈಗನ್ನಡಿಯಾಗಿದೆ. ಅಂಗೈಯ ಹುಣ್ಣು ನೋಡಿಕೊಳ್ಳಲು ಕನ್ನಡಿಯ ಅಗತ್ಯವಿಲ್ಲ. ಅಂತೆಯೇ ಸರಕಾರಿ ಇಲಾಖೆಯ ತುಕ್ಕುಹಿಡಿದು ನಿಂತ ವಾಹನ ಸರಕಾರಕ್ಕೆ ಎಷ್ಟು ಹಾನಿ ಎಂಬುದು ಅಧಿಕಾರಿಗಳ ಗಮನಕ್ಕೆ ಇದಿಯೋ ಇಲ್ಲವೊ ಎಂಬುದು ನೊವಿನ ಸಂಗತಿ ಎಂದು ಆರ್ ಟಿ ಐ ಕಾರ್ಯಕರ್ತ ಮಲ್ಲಿಕಾರ್ಜುನ ಹಾವಿನಾಳಮಠ ಆಕ್ರೊಷ ವ್ಯಕ್ತ ಪಡಿಸಿದರು. ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಬೂ ಮಾಪನ್ ಇಲಾಖೆಯ ವಾಹನ್ ಕೇವಲ 8 ವರ್ಷದಲ್ಲಿ ತುಕ್ಕು ಹಿಡಿದು ನಿಂತಿದೆ.ಈ ವಾಹನ ಬಳಸದೆ ಒಂದೇ ಕಡೆ ನಿಲ್ಲಿಸಿ ಧೂಳು ಹಿಡಿದು ತುಕ್ಕಿಗೆ ಆಹುತಿಯಾಗಿದೆ. ಅದು ಎಂತಹ ಹೊಸ ವಾಹನವೇ ಆಗಿದ್ದರೂ ಕೂಡ ಉಪಯೋಗಿಸದೇ ಹೊದಲ್ಲಿ ಒಂದೆರಡು ವಾರದಲ್ಲಿ ತುಕ್ಕು ಹಿಡಿಯುತ್ತದಂತೆ. ಇಂತಹ ಪರಿಸ್ಥಿತಿ ಹೀಗಿರುವಾಗ ವರ್ಷಾಗಟ್ಟಲೆ ನಿಂತಲ್ಲೇ ನಿಂತಿರುವ ವಾಹನಗಳ ಸ್ಥಿತಿ ಏನು? ಸರಕಾರದ ಹಲವಾರು ಇಲಾಖೆಗಳಿಗೆ ವಾಹನ ಇಲ್ಲದೇ ಖಾಸಗಿ ವಾಹನಕ್ಕೆ ಮೊರೆ ಹೊಗುತ್ತಾರೆ. ಇಂತಹ ಸಂದರ್ಭದಲ್ಲಿ ಸರಕಾರ ಸಾರ್ವಜನಿಕ ಕೆಲಸಗಳನ್ನು ಸಲಿಸಾಗಿ ನಿರ್ವಹಿಸಲೆಂದು ವಾಹನ ಕೊಟ್ಟಿರೆ, ಆ ವಾಹನ ಪರಿಸ್ಥಿತಿ ಗುಜರಿಗೆ ಕೊಡುವ ಹಾಗಿದೆ. ಒಟ್ಟಾರೆಯಾಗಿ ಸರಕಾರಿ ಕೆಲಸ ದೇವರ ಕೆಲಸ ಎಂಬ ನಾಣ್ಣುಡಿ ಕೇವಲ ನಾಣುಡ್ಡಿಯಾಗಿ ಉಳಿಯದೇ ಕಾರ್ಯರೂಪಕ್ಕೆ ತರುವ ಪ್ರಯತ್ನ ಅಧಿಕಾರಿಗಳು ತರಬೇಕು. ಈ ಕೂಡಲೇ ಸಂಬಂದಿಸಿದ ಮೆಲಾಧಿಕಾರಿಗಳು ಹಾಗೂ ಜನ ಪ್ರತಿನಿಧಿಗಳು ಗಮನ ಹರಿಸಿ ತಪ್ಪಿಸ್ಥರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೆಕೆಂದು ಆಗ್ರಹಿಸಿದರು.

ವರದಿ-ಶಂಕರ್ ಜಮಾದಾರ ಎಕ್ಸ್ ಪ್ರೆಸ್ ಟಿವಿ ಇಂಡಿ

Please follow and like us:

Related posts

Leave a Comment