ನಿವೃತ್ತಿ ನಂತರ ಮರಳಿದ ಯೋಧನಿಗೆ ತವರೂರಲ್ಲಿ ಅದ್ಧೂರಿ ಸ್ವಾಗತ..!

ವಿಜಯಪುರ: ಭಾರತಿ ಸೇನಾ ಪಡೆಯಲ್ಲಿ 17 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿಯಾಗಿ ತವರೂರಿಗೆ ಬಂದ ಯೋಧನಿಗೆ ಗ್ರಾಮಸ್ಥರು ಅದ್ಧೂರಿ ಸ್ವಾಗತ ನೀಡಿದ್ದಾರೆ. ಸೈನಿಕ ಅಮೀರ ಚಂದ ಅಲ್ಲಾವುದ್ದೀನ್ ಜಕಾತದಾರ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಅಂಜುಟಗಿ ಗ್ರಾಮದವರಾಗಿದ್ದು, ಇವರನ್ನ ಅಂಜುಟಗಿ ಗ್ರಾಮಸ್ಥರು ವಿಶೇಷ ಸ್ವಾಗತ ಮಾಡಿಕೊಂಡರು. ತಾಲೂಕಿನ ಅಂಜುಟಗಿ ಗ್ರಾಮದ ಅಲ್ಲಾವುದ್ದೀನ್ ಪುತ್ರ ಅಮೀರಚಾಂದ ದಿನಾಂಕ 25/11/2003 ರಂದು ಭಾರತೀಯ ಸೇನೆಯಲ್ಲಿ ಭರ್ತಿಯಾಗಿ ಕರ್ನಾಟಕದ ಬೆಳಗಾವಿ ಜಿಲ್ಲೆಯಿಂದ ತಮ್ಮ ಸೇವೆ ಪ್ರಾರಂಭ ಮಾಡಿ ಸಿಕಂದರಾಬಾದ್, ಮಣಿಪುರ, ಜಮ್ಮು ಕಾಶ್ಮೀರ, ಪೊಚ್ ಸೆಕ್ಟರ್, ಕೃಷ್ಣಾ ಘಾಟ್, ಬಾಂದಿಪೂರ, ಪಂಜಾಬ್, ಗುಜರಾತ್ ಹಾಗೂ ಜಮ್ಮು ಕಾಶ್ಮೀರ ದ ದ್ರಾಸ್ ಸೆಕ್ಟರ್ ಲ್ಲಿ ಸೇವೆ ಸಲ್ಲಿಸಿ ಸ್ವಗ್ರಾಮಕ್ಕೆ ಆಗಮಿಸಿದ್ದು ಗ್ರಾಮಸ್ಥರು ಚಪ್ಪಾಳೆ ತಟ್ಟಿ ಗೌರವ ಸಲ್ಲಿಸುವ ಮೂಲಕ ಸ್ವಾಗತ ಕೋರಿದರು.ವೇದಿಕೆ ಜಿಲ್ಲಾಧ್ಯಕ್ಷ ಅಣ್ಣಾರಾಯ ಬಬಲಾದ ಮಾತನಾಡಿ, ದೇಶದೊಳಗೆ ನಾವು ನೆಮ್ಮದಿಯಿಂದ ಇರುವುದಕ್ಕೆ ಸೈನಿಕರೇ ಕಾರಣ. ಹಗಲು ರಾತ್ರಿಯೆನ್ನದೆ ಸೈನಿಕರು ಕರ್ತವ್ಯ ನಿರ್ವಹಿಸುತ್ತಾರೆ. ಅದೇ ರೀತಿ ಅಮೀರಚಂದ್ ಅಲ್ಲಾವುದ್ದೀನ್ ಜಕಾತದಾರ ಅವರು ಸೇವೆ ಸಲ್ಲಿಸಿ ತವರಿಗೆ ಆಗಮಿಸಿದ್ದಾರೆ. ಆದ್ದರಿಂದ, ಅವರಿಗೆ ಗೌರವ ಸೂಚಿಸುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಮೂಲಕ ಅವರ ಸೇವೆಗೆ ನಮ್ಮ ಕೃತಜ್ಞತೆ ಅರ್ಪಿಸುತ್ತಿದ್ದೇವೆ ಎಂದಿದ್ದಾರೆ. ನಿವೃತ್ತ ಸೈನಿಕ ಅಮೀರ್ ಚಂದ ಅಲ್ಲಾವುದ್ದೀನ್ ಜಕಾತದಾರ ಮಾತನಾಡಿ,ಇದೊಂದು ಹೃದಯಸ್ಪರ್ಶಿ ಕ್ಷಣ.ಹಲವು ವರ್ಷ ದೇಶ ಸೇವೆ ಮಾಡಿ ತವರಿಗೆ ಬಂದಾಗ ಇಂತಹದೊಂದು ಸ್ವಾಗತ ಸಿಕ್ಕಿದ್ದು ಅವಿಸ್ಮರಣೀಯ. ಇದು ದೇಶದ ಸಾರ್ವಜನಿಕರಿಗೆ ಸೈನಿಕರ ಮೇಲಿನ ಗೌರವವನ್ನು ತೋರಿಸುತ್ತದೆ ಎಂದರು. ಈ ವೇಳೆ ಗ್ರಾಮದ ಮುಖಂಡರು ಹಾಗೂ ಗ್ರಾಮಸ್ಥರು ಭಾಗಿಯಾಗಿದ್ದರು.

ವರದಿ-ಶಂಕರ್ ಜಮಾದಾರ ಎಕ್ಸ್ಪ್ರೆಸ್ ಟಿವಿ ಇಂಡಿ..

Please follow and like us:

Related posts

Leave a Comment