ಕಾಫಿ ಡೇ ನೂತನ ಸಿಇಒ ಆಗಿ ಮಾಳವಿಕಾ ನೇಮಕ…!

ಕೆಫೆ ಕಾಫಿ ಡೇ ಎಂಟರ್‌ ಪ್ರೈಸಸ್ ಲಿಮಿಟೆಡ್ ನೂತನ ಕಾರ್ಯಾನಿರ್ವಹಕ ಅಧಿಕಾರಿಯಾಗಿ ಕಾಫಿ ಡೇ ಸಂಸ್ಥಾಪಕ ದಿವಂಗತ ವಿ.ಜಿ. ಸಿದ್ದಾರ್ಥ್ ಪತ್ನಿ ಮಾಳವಿಕಾ ಹೆಗ್ಡೆ ನೇಮಕ ಗೊಂಡಿದ್ದಾರೆ.ದೇಶದಾದ್ಯಂತ ಇರುವ ಕೆಫೆ ಕಾಫಿ ಡೇ ರೆಸ್ಟಾರೆಂಟ್‌ಗಳ ಮಾಲೀಕತ್ವವು ಸಿಡಿಇಎಲ್‌ ಕೈಯಲ್ಲಿ ಇದೆ. ಕಂಪನಿಯ ನಿರ್ದೇಶಕಿ ಆಗಿರುವ ಮಾಳವಿಕ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸಿಇಒ ಆಗಿ ನೇಮಕ ಮಾಡಲಾಗಿದೆ’ ಎಂದು ಕಂಪನಿಯು ತಿಳಿಸಿದೆ. ಕಾಫಿ ಉದ್ಯಮದ ಟೈಕೊನ್ ಆಗಿದ್ದ ವಿಜಿ ಸಿದ್ಧಾರ್ಥ್ ಶವ ಮಂಗಳೂರು ಬಳಿಯ ನದಿಯಲ್ಲಿ ಪತ್ತೆಯಾದ ಒಂದು ವರ್ಷದ ನಂತರ ಮಾಳವಿಕಾ ಹೆಗ್ಡೆ ಕಾಫೀ ಡೇ ಎಂಟರ್‌ ಪ್ರೈಸಸ್ ನ ನೂತನ ಸಿಇಒ ಆಗಿ ನೇಮಕಗೊಂಡಿದ್ದಾರೆ.

ವರದಿ-ನ್ಯೂಸ್ ಡೆಸ್ಕ್ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು

Please follow and like us:

Related posts

Leave a Comment