ಯುವರತ್ನ ಚಿತ್ರದ ಎರಡನೇ ಹಾಡು ರಿಲೀಸ್ ಬಗ್ಗೆ ಸುಳಿವು ಕೊಟ್ಟ ತಮನ್..!

ಇತ್ತೀಚೆಗೆ ಲಾಕ್ ಡೌನ್ ಬಳಿಕ ಕನ್ನಡದಲ್ಲಿ ಸಾಕಷ್ಟು ಚಿತ್ರಗಳು ತೆರೆಮೇಲೆ ಬರಲು ಸಜ್ಜಾಗಿವೆ. ಅದರಲ್ಲಿ ಪುನೀತ್ ರಾಜ್ ಕುಮಾರ್ ಅಭಿನಯದ ಯುವರತ್ನ ಚಿತ್ರ ಕೂಡ ಒಂದು. ಈಗಾಗಲೇ ಚಿತ್ರದ ಚಿತ್ರೀಕರಣ ಮುಗಿದಿದ್ದು, ಚಿತ್ರಬಿಡುಗಡೆಗೆ ಪೂರ್ಣಪ್ರಮಾಣದಲ್ಲಿ ಚಿತ್ರಮಂದಿರಗಳಿಗೆ ಅವಕಾಶ ಸಿಗಲಿ ಎಂದು ಚಿತ್ರ ತಂಡ ಕಾಯುತ್ತಿದೆ. ಇನ್ನೂ ಚಿತ್ರತಂಡ ಚಿತ್ರದ ಹಾಡುಗಳನ್ನು ಈಗಾಗಲೇ ರಿಲೀಸ್ ಮಾಡಿದ್ದು ಹಾಡಿಗೆ ಅಭಿಮಾನಿಗಳು ಫುಲ್ ಫೀಧಾ ಆಗಿದ್ದಾರೆ. ಇನ್ನೂ ಚಿತ್ರದ ಟೈಟಲ್ ಅನ್ನು ಡಿಸೆಂಬರ್ 2ರಂದು ಬಿಡುಗಡೆ ಮಾಡಿದ್ದ ಚಿತ್ರತಂಡ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಲಾಗಿತ್ತು. ಚಿತ್ರದ ಪವರ್ ಆಫ್ ಯೂತ್ ಹಾಡಿನ ಅಬ್ಬರಕ್ಕೆ ಅಪ್ಪು ಅಭಿಮಾನಿಗಳು ಫಿದಾ ಆಗಿದ್ದು ಇದೀಗವ ಯುವರತ್ನ ಚಿತ್ರದ ಎರಡನೇ ಹಾಡನ್ನು ರಿಲೀಸ್ ಮಾಡಲು ಚಿತ್ರತಂಡ ಮುಂದಾಗಿದೆ. ಈ ಚಿತ್ರಕ್ಕೆ ಸಂತೋಷ್ ಆನಂದ್ ರಾಮ್ ಸಾಹಿತ್ಯವಿದ್ದು, ಎಸ್ ಎಸ್ ತಮನ್ ಅವರ ಮ್ಯೂಸಿಕ್ ಬೀಟ್ಸ್ ಸೇರಿ ಪವರ್ ಸ್ಟಾರ್ ಅಭಿಮಾನಿಗಳನ್ನು ಕುಣಿಯುವಂತೆ ಮಾಡಿದೆ. ಇದೀಗ ಚಿತ್ರದ 2ನೇ ಹಾಡಾದ ‘ಊರಿಗೊಬ್ಬ ರಾಜ’ ಎಂಬ ಹಾಡನ್ನು ರಿಲೀಸ್ ಮಾಡುವ ಬಗ್ಗೆ ಸಂಗೀತ ನಿರ್ದೇಶಕ ತಮನ್ ಸುಳಿವು ನೀಡಿದ್ದಾರೆ. ವಿಶೇಷ ಅಂದ್ರೆ ಈ ಹಾಡನ್ನು ಸ್ವತಃ ಪುನೀತ್ ಹಾಡಿದ್ದಾರೆ. ಆ ಫೋಟೋವನ್ನು ಸಹ ತಮನ್ ಹಂಚಿಕೊಂಡಿದ್ದು, ಕನ್ನಡ ಪ್ರೇಕ್ಷಕರ ಕುತೂಹಲ ಹೆಚ್ಚಿಸಿದ್ದಾರೆ.ಇದು ಮಾಸ್ ಸಾಂಗ್ ಆಗಿದ್ದು, ಹಾಡಿನಲ್ಲಿ ಭರ್ಜರಿ ಡ್ಯಾನ್ಸ್ ಸಹ ಇದೆಯಂತೆ. ಇನ್ನೂ ಈ ಹಾಡಿಗೆ ತೆಲುಗಿನ ಜಾನಿ ಮಾಸ್ಟರ್ ನೃತ್ಯ ಸಂಯೋಜನೆ ಮಾಡಿದ್ದಾರೆ. ಈಗಾಗಲೇ ಯುವರತ್ನ ಚಿತ್ರದ ಪವರ್ ಆಫ್ ಯೂತ್ ಹಾಡು ಕನ್ನಡ ಮತ್ತು ತೆಲುಗಿನಲ್ಲಿ ತೆರೆಕಂಡಿದ್ದು, ಕನ್ನಡದಲ್ಲಿ 3 ಮಿಲಿಯನ್ ವೀಕ್ಷಣೆ ಕಂಡಿದೆ. ತೆಲುಗಿನಲ್ಲಿ 2.1 ಮಿಲಿಯನ್ ವೀಕ್ಷಣೆ ಕಂಡಿದೆ.

ವರದಿ-ನ್ಯೂಸ್ ಡೆಸ್ಕ್ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು

Please follow and like us:

Related posts

Leave a Comment