ಸಿಂಧನೂರು: ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ 36ನೇ ಕಾಲುವೆ ಕೆಳಭಾಗದ ರೈತರಾದ ಹೊಸಹಳ್ಳಿ, ಹೊಸಹಳ್ಳಿ ಕ್ಯಾಂಪ್, ಅಮರಾಪುರ, ಸಾಸಲಮರಿ, ಸಾಸಲಮರಿ ಕ್ಯಾಂಪ್ ಸೇರಿದಂತೆ ವಿವಿಧ ಗ್ರಾಮಗಳ ರೈತರು ಈಗಾಗಲೇ ಭತ್ತದ ನಾಟಿ ಮಾಡಿದ್ದು, ಇದುವರೆಗೂ ಕೂಡ ಈ ಭಾಗದ ರೈತರಿಗೆ ನೀರು ತಲುಪುತ್ತಿಲ್ಲ. ಈ ಬಗ್ಗೆ ದೂರು ನೀಡಲು ಸಿಂಧನೂರು ನೀರಾವರಿ ಇಲಾಖೆಯ ಅಧಿಕಾರಿಗಳು ಕೈಗೆ ಸಿಗುತ್ತಿಲ್ಲ ಹಾಗಾಗಿ ಅಸಮಾಧಾನಗೊಂಡ ರೈತರು ಇಂದು ಸಿಂಧನೂರು ನೀರಾವರಿ ಇಲಾಖೆ ಮುಂದೆ ಪ್ರತಿಭಟನೆ ಮಾಡುತ್ತಿದ್ದಾರೆ. ಇನ್ನೂ ಈ ಪ್ರತಿಭಟನೆ ಮುಖಂಡತ್ವ ವಹಿಸಿರುವ ಎಸ್ ಎನ್ ಬಡಿಗೇರ್ ಮಾತನಾಡಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕೆಳ ಭಾಗದ ರೈತರಿಗೆ ನೀರು ಸಿಗುತ್ತಿಲ್ಲ.ಇನ್ನಾದರೂ ಅಧಿಕಾರಿಗಳು ಕ್ರಮ ಕೈಗೊಂಡು ಕೆಳ ಭಾಗದ ರೈತರಿಗೆ ನೀರು ಮುಟ್ಟಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ವರದಿ- ಸೈಯದ್ ಬಂಧೇನವಾಜ್ ಎಕ್ಸ್ ಪ್ರೆಸ್ ಟಿವಿ…
Read MoreCategory: ಸಿಂಧನೂರು
ಗ್ರಾಮ ಪಂಚಾಯಿತಿ ಸದಸ್ಯರಿಗೆ ಅನ್ನದಾನೇಶ್ವರ ಕಲ್ಯಾಣ ಮಂಟಪದಲ್ಲಿ ಸನ್ಮಾನ..!
ಸಿಂಧನೂರು: ಇತ್ತೀಚಿಗೆ ಜರುಗಿದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ನೂತನವಾಗಿ ಆಯ್ಕೆಯಾದ ಗ್ರಾಮ ಪಂಚಾಯಿತಿ ಸದಸ್ಯರಿಗೆ ಗ್ರಾಮೀಣ ಹಾಗೂ ನಗರ ಬ್ಲಾಕ್ ಕಾಂಗ್ರೆಸ್ ವತಿಯಿಂದ ನಗರದ ಅನ್ನದಾನೇಶ್ವರ ಕಲ್ಯಾಣ ಮಂಟಪದಲ್ಲಿ ಸನ್ಮಾನ ಮಾಡಲಾಯಿತು.ರಾಯಚೂರು ಜಿಲ್ಲೆಯ ಸಿಂಧನೂರು ನಗರದ ಹೊರವಲಯದಲ್ಲಿರುವ ಅನ್ನದಾನೇಶ್ವರ ಕಲ್ಯಾಣ ಮಂಟಪದಲ್ಲಿ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಮಾತನಾಡಿ. ವೆಂಕಟರಾವ್ ನಾಡಗೌಡ ಯಾವುದೇ ಹೋರಾಟವಾಗಲಿ, ಸಂಘಟನೆಯಾಗಲಿ ಮಾಡಿಕೊಂಡು ಶಾಸಕರಾದವರಲ್ಲ ಸಾಂದರ್ಭಿಕವಾಗಿ ಶಾಸಕ, ಸಚಿವನಾದ ಆದರೆ ಅಭಿವೃದ್ಧಿ ವಿಷಯದಲ್ಲಿ ಮಾತ್ರ ಶೂನ್ಯ. ಗ್ರಾಮ ಪಂಚಾಯತಿಯಲ್ಲಿ ಅಧಿಕಾರಿ ಹಿಡಿಯಬೇಕೆಂಬ ಉದ್ದೇಶದಿಂದ ಆಸೆ ಆಮಿಷಗಳನ್ನು ಒಡ್ಡಬಹುದು. ಆಸೆ ಆಮಿಷಗಳಿಗೆ ಬಲಿಯಾಗ ಬಾರದು ಎಂದು ಹೇಳಿದರು. ಇನ್ನೂ ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಮಾತನಾಡಿ ಯುವಕರನ್ನು ರಾಜಕೀಯಕ್ಕೆ ಕರೆ ತರಬೇಕು ಹಾಗೂ ಗ್ರಾಮವನ್ನು ಅಭಿವೃದ್ಧಿಪಡಿಸುವ ದೃಷ್ಟಿಯಿಂದ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಜಾರಿಗೆಗೊಳಿಸಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ…
Read Moreಪರೋಕ್ಷವಾಗಿ ಬಸನಗೌಡ ಬಾದರ್ಲಿ ಗೆ ಟಾಂಗ್ ಕೊಟ್ಟ ಅಶೋಕ್ ಭೋಪಾಲ್ ಜಾಗೀರ್ದಾರ್..!
ಸಿಂಧನೂರು: ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿನ ದಡೇಸ್ಗೂರು ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಅಶೋಕ್ ಭೋಪಾಲ್ ಜಾಗೀರ್ದಾರ್ ಅವರ ನಿವಾಸದಲ್ಲಿ ಕಾಂಗ್ರೆಸ್ ಪಕ್ಷದ ಬೆಂಬಲದಿಂದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಆಯ್ಕೆಗೊಂಡ ದಡೆಸ್ಗೂರು, ಸಾಲಗುಂದ, ಹಾಗೂ ಅಲಬನೂರು ನೂತನ ಗ್ರಾಮ ಪಂಚಾಯತಿ ಸದಸ್ಯರುಗಳಿಗೆ ಹಾಗೂ ಕಾರ್ಯಕರ್ತರಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಇನ್ನೂ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ಶಾಸಕ ಹಂಪನಗೌಡ ಬಾದರ್ಲಿ ವಹಿಸಿದ್ದರು. ನಂತರ ಮಾತನಾಡಿದ ಅವರು ಕಾಂಗ್ರೆಸ್ ಬೆಂಬಲಿತ ಗ್ರಾಮ ಪಂಚಾಯಿತಿ ಚುನಾಯಿತ ಸದಸ್ಯರು, ಗ್ರಾಮದ ಅಭಿವೃದ್ಧಿ ವಿಚಾರದಲ್ಲಿ ಎಲ್ಲಾ ಸದಸ್ಯರು ಒಟ್ಟಾಗಿ ಕೆಲಸ ಮಾಡಿದಾಗ ಮಾತ್ರ ಗ್ರಾಮಗಳು ಸುಂದರ ಗ್ರಾಮವಾಗಿ ಅಭಿವೃದ್ಧಿಯಾಗಲು ಸಾಧ್ಯ ಎಂದು ತಿಳಿಸಿದರು. ನಂತರ ಮಾತನಾಡಿದ ಅಶೋಕ್ ಭೋಪಾಲ್ ಜಾಗೀರ್ದಾರ್ ಮೊದಲು ಕಾಂಗ್ರೆಸ್ ಪಕ್ಷದಲ್ಲಿ ಪಕ್ಷ ಸಂಘಟನೆ ಮುಖ್ಯವಾಗಿತ್ತು. ಆದರೆ ವ್ಯಕ್ತಿಯ ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡಿರುವುದು ವಿಪರ್ಯಾಸ ಎಂದು ಪರೋಕ್ಷವಾಗಿ ಬಸನಗೌಡ…
Read Moreಸಿಂಧನೂರು ಪದವಿ ಮಹಾವಿದ್ಯಾಲಯದಲ್ಲಿ ಮತ ಎಣಿಕೆ ಪ್ರಕ್ರಿಯೆ..!
ಸಿಂಧನೂರು: ಗ್ರಾಮ ಪಂಚಾಯಿತಿ ಚುನಾವಣೆಯ ಮತದಾನ ಪ್ರಕ್ರಿಯೆ ಮುಗಿದು ಮತ ಎಣಿಕೆ ಪ್ರಕ್ರಿಯೆ ನಗರದ ಪದವಿ ಮಹಾ ವಿದ್ಯಾಲಯದಲ್ಲಿ ಏರ್ಪಾಡು ಮಾಡಿಲಾಗಿದೆ. ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿನಲ್ಲಿ ಇಂದು ಬೆಳ್ಳಂಬೆಳಗ್ಗೆ 8 ಗಂಟೆಯಿಂದಲೇ ಮತ ಎಣಿಕೆ ಪ್ರಕ್ರಿಯೆ ಆರಂಭವಾಗಿದ್ದು, ಕೇಂದ್ರದ ಒಳಗೆ ಹೋಗಲು ಅಭ್ಯರ್ಥಿಗಳು ಮತ್ತು ಏಜೆಂಟರ್ ಗಳ ನೂಕು ನುಗ್ಗಲು ಆಗುತ್ತಿದೆ. ಇನ್ನೂ ಮತ ಎಣಿಕೆ ಪ್ರಕ್ರಿಯೆಗೆ ಆಗಮಿಸುವವರು ಕಡ್ಡಾಯವಾಗಿ ಮಾಸ್ಕ್ ಧರಿಸಿ ಮತ ಎಣಿಕೆ ಸಂದರ್ಭದಲ್ಲಿ ಸಾಮಾಜಿಕ ಅಂತರ ಕಾಪಾಡಲು ಪೋಲಿಸರು ತಿಳಿಸಿದ್ದಾರೆ. ಇನ್ನೂ ಸಿಂಧನೂರು ತಾಲೂಕಿನಲ್ಲಿ 3೦ ಗ್ರಾಮಪಂಚಾಯಿತಿಗಳಿಗೆ ಮತದಾನ ಪ್ರಕ್ರಿಯೆ ನಡೆದಿದ್ದು, ಈಗಾಗಲೇ ಮತ ಎಣಿಕೆ ಕಾರ್ಯ ಆರಂಭವಾಗಿದೆ ತಹಶೀಲ್ದಾರ್ ಎಲ್ಲಪ್ಪ ಸುಬೇದಾರ್ ನೇತೃತ್ವದಲ್ಲಿ ಇಂದು ಸ್ಟ್ರಾಂಗ್ ರೂಮ್ ಅನ್ನು ತೆರೆದು ಮತಪೆಟ್ಟಿಗೆಗಳನ್ನು ಕೊಠಡಿಗಳಿಗೆ ತೆಗೆದುಕೊಂಡು ಹೋಗಲಾಯಿತು. ಪ್ರತಿ ಎರಡರಿಂದ ಮೂರು ಗ್ರಾಮಪಂಚಾಯಿತಿಗಳ ಮತ ಎಣಿಕೆ ಕಾರ್ಯ ನಡೆಯುತ್ತಿದ್ದು ಅಭ್ಯರ್ಥಿಗಳು ಮತ್ತು…
Read Moreಕಾಂಗ್ರೆಸ್ ಪಕ್ಷದ ಸದಸ್ಯ ಪಡೆಯುವುದೇ ಒಂದು ದೊಡ್ಡ ಸಾಧನೆ- ಎಚ್ ಎನ್ ಬಡಿಗೇರ..!
ಸಿಂಧನೂರು: ಭಾರತಿಯ ಕಾಂಗ್ರೆಸ್ ಪಕ್ಷ ಸ್ವತಂತ್ರಕ್ಕಾಗಿ ನೂರಾರು ಸಾವಿರಾರು ಮುಖಂಡರು ಪ್ರಾಣತ್ಯಾಗ ಮಾಡಿದ್ದಾರೆ. ಪ್ರಜಾಪ್ರಭುತ್ವ ತಳದಲ್ಲಿ ಇಡೀ ವಿಶ್ವದಲ್ಲೇ ಅತ್ಯಂತ ದೊಡ್ಡ ಪಕ್ಷ ಕಾಂಗ್ರೆಸ್ ಪಕ್ಷದ ಸದಸ್ಯ ಪಡೆಯುವುದೇ ಒಂದು ದೊಡ್ಡ ಸಾಧನೆ ಎಚ್ ಎನ್ ಬಡಿಗೇರ ಮಾತನಾಡಿದರು. ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿನ ನಗರದ ಮಾಜಿ ಶಾಸಕರ ನಿವಾಸದಲ್ಲಿ 135ನೇ ಕಾಂಗ್ರೆಸ್ ಪಕ್ಷದ ಸಂಸ್ಥಾಪಕ ದಿನದ ಕಾರ್ಯಕ್ರಮವನ್ನು ಗಾಂಧೀಜಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ನಂತರ ಪ್ರತಿಜ್ಞಾವಿಧಿ ಬೋಧಿಸಿದರು. ಈ ದೇಶ ಹಲವಾರು ರಾಜ್ಯ ಪಾಳೆಗಾರರನ್ನು ಹಾಳಿದ ದೇಶ, ಇದನ್ನು ಸುಲಿಗೆ ಮಾಡುವ ವ್ಯವಸ್ಥೆ ಇತು. ರಾಜ್ಯ ಒಳಗೊಂಡಿತೆ ಬ್ರಿಟಿಷ್ ದೇಶವನ್ನು ಕೊಳ್ಳೆ ಹೊಡೆದಿದ್ದಾರೆ. ಬ್ರಿಟಿಷ್ ವಿರುದ್ಧ ಮಹ ನಾಯಕ ಹೊರಟ ಮಾಡಿದರು. ಆದರೆ ಅವುಗಳು ಬಿಡಿಬಿಡಿಯಾಗಿಯಾಗಿದವು ನಂತರ ಕಾಂಗ್ರೆಸ್ ಪಕ್ಷ ರಚನೆಗೊಂಡು ಸ್ವತಂತ್ರ ಪಡೆಯಲು ಸಾಧ್ಯವಾಯಿತು ಎಂದರು. ಇನ್ನೂ ಈ ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಶಾಸಕ…
Read Moreರಾಗಲಪರ್ವಿ ಆಸ್ಪತ್ರೆ ಸ್ಥಿತಿ ಆಟಕ್ಕುಂಟು ಲೆಕ್ಕಕ್ಕಿಲ್ಲ..!
ಸಿಂಧನೂರು: ಸಿಂಧನೂರು ತಾಲೂಕಿನ ರಾಗಲಪರ್ವಿ ಗ್ರಾಮದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರಿಲ್ಲ, ಹಾಗೂ ಸಿಬ್ಬಂದಿ ವರ್ಗದವರು ಸಹ ಸರಿಯಾದ ಸಮಯದಲ್ಲಿ ಇರುವುದಿಲ್ಲ. ರಾತ್ರಿ ಪರಿಸ್ಥಿತಿಯಂತೂ ದೇವರೇ ಬಲ್ಲ ಹೀಗಾಗಿ ‘ದೇವರಿಲ್ಲದ ಗುಡಿ ಯಂತಾಗಿದೆ’ ಹತ್ತಾರು ಗ್ರಾಮಗಳ ಜನರು ರಾಗಲಪರ್ವಿ ಸರ್ಕಾರಿ ಆಸ್ಪತ್ರೆಯನ್ನು ಅವಲಂಬಿಸಿದ್ದಾರೆ. ಆದರೆ ವೈದ್ಯರಿಲ್ಲದ ಕಾರಣ ಬಡರೋಗಿಗಳ ಬೇಸರದಿಂದ ಸಿಂಧನೂರ ಅಥವಾ ಮಾನ್ವಿ ಗೆ ಚಿಕಿತ್ಸೆ ಪಡೆಯಬೇಕಾಗಿದೆ. ಆದರೆ ಆಸ್ಪತ್ರೆ ಆಟಕ್ಕುಂಟು ಲೆಕ್ಕಕ್ಕಿಲ್ಲದ ಸ್ಥಿತಿಯಲ್ಲಿದೆ. ಆಸ್ಪತ್ರೆಯಲ್ಲಿ ವೈದ್ಯರು ಸೇರಿದಂತೆ ಅಗತ್ಯ ಸಿಬ್ಬಂದಿ ಇಲ್ಲದಿರುವುದರಿಂದ ಸಾರ್ವಜನಿಕರು ಹಲವಾರು ಬಾರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದರು ಶೂನ್ಯವಾಗಿದೆ. ಇತ್ತೀಚಿನ ನಾಲ್ಕೈದು ತಿಂಗಳಿಂದ ಕೋವಿಡ್-19 ವೈರಾಣು, ಎಲ್ಲಾ ಕಡೆಗೆ ಪಸರಿಸಿದ್ದು ಈ ಭಾಗದಲ್ಲಿ ಅಲ್ಲಲ್ಲಿ ಕಾಣಿಸಿಕೊಂಡಿದೆ ಸಾರ್ವಜನಿಕರು ಆಸ್ಪತ್ರೆಯ ಕುರಿತು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಆಸ್ಪತ್ರೆ ದುರಸ್ತೆ ಮಾಡಲಾರದಷ್ಟು ಅದೇ ಕಟ್ಟಿದ್ದರು ಸಿಂಧನೂರಿನ…
Read More11 ಸಾವಿರ ಪೊಲೀಸ್ ಉದ್ಯೋಗಗಳನ್ನು ಎರಡೂ ವರ್ಷಗಳಲ್ಲಿ ತುಂಬಿಕೊಳ್ಳಲಾಗುವುದು- ಬಸವರಾಜ್ ಬೊಮ್ಮಾಯಿ..!
ಸಿಂಧನೂರು : ನಗರ ಪೊಲೀಸ್ ಠಾಣೆಯ ನೂತನ ಕಟ್ಟಡ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ. ನೂತನ ಪೋಲಿಸ್ ಠಾಣೆ ಯನ್ನು ಉದ್ಘಾಟಿಸಿ ನಂತರ ಮಾತನಾಡಿದ ಬಸವರಾಜ್ ಬೊಮ್ಮಾಯಿ ಜನಸೇವೆ ಪೊಲೀಸರಾಗಿ ಕಾರ್ಯ ಪ್ರವೃತ್ತರಾಗಬೇಕು ನೊಂದು ಬರುವ ಸಾರ್ವಜನಿಕರಿಗೆ ನ್ಯಾಯ ಕೊಡಿಸುವ ರೀತಿಯಲ್ಲಿ ಕರ್ತವ್ಯ ನಿರ್ವಹಿಸಬೇಕು. ಕೋವಿಡ್ ವಾರಿಯರ್ಸ್ ಆಗಿ ರಾಯಚೂರು ಜಿಲ್ಲೆ. ಹಾಗೂ ಸಿಂಧನೂರು ಉಪ ವಿಭಾಗದ ಪೋಲಿಸರು ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ನಿರ್ವಹಿಸಿದ್ದಾರೆ. 5 ಪೊಲೀಸರು ಕೋವಿಡ್ ಗೆ ಬಲಿಯಾಗಿ ಮರಣವನ್ನು ಹೊಂದಿದ್ದರೆ ಆ ಕುಟುಂಬಗಳಿಗೆ 30 ಲಕ್ಷ ಪರಿಹಾರ ಸರ್ಕಾರದಿಂದ ಒದಗಿಸುತ್ತದೆ. ಜೊತೆಗೆ ಇನ್ನೂ ಪೋಲಿಸ್ ಇಲಾಖೆಗೆ 2ವರ್ಷಗಳಲ್ಲಿ ಹಂತ ಹಂತವಾಗಿ 11 ಸಾವಿರ ಹೊಸ ಉದ್ಯೋಗಗಳನ್ನು ತುಂಬಿಕೊಳ್ಳಲಾಗುವುದು ಸಿಂಧನೂರು ನಗರಕ್ಕೆ ನೂತನ ಟ್ರಾಫಿಕ್ ಸ್ಟೇಷನ್ ನಿರ್ಮಾಣಕ್ಕೆ ಹಣ ಮಂಜೂರು ಮಾಡಲಾಗುವುದು ಎಂದು ತಿಳಿಸಿದರು. ಬಳ್ಳಾರಿ ವಲಯದ ಐಜಿಪಿ ನಂಜುಂಡಯ್ಯ, ರಾಯಚೂರು ಎಸ್ಪಿ ಪ್ರಕಾಶ್ ನಿಕಮ್ ಹೆಚ್ಚುವರಿ…
Read Moreಸಾಮಾನ್ಯ ಸಭೆಯಲ್ಲಿ ಮಾತಿನ ಚಕಮಕಿ..!
ಸಿಂಧನೂರು: ನಗರ ಸಭೆಯ ಸಭಾಂಗಣದಲ್ಲಿ ಪ್ರಥಮ ಸಾಮಾನ್ಯ ಸಭೆಯನ್ನು ನಗರಸಭೆ ಅಧ್ಯಕ್ಷರ ಮಲ್ಲಿಕಾರ್ಜುನ ಪೋಲಿಸ್ ಪಾಟೀಲ್ ಅಧ್ಯಕ್ಷತೆಯಲ್ಲಿ ನಡೆಸಲಾಯಿತು. ಪಕ್ಷಭೇದ ಮರೆತು ನಗರ ಅಭಿವೃದ್ಧಿಗಾಗಿ ಸಭೆಯಲ್ಲಿ ಚರ್ಚೆ ನಡೆಸಿದರು. ನಗರಸಭೆ ಸದಸ್ಯರನ್ನು ಪೌರಾಯುಕ್ತರು ಸೇರಿದಂತೆ ಇತರೆ ಅಧಿಕಾರಿಗಳು ಎರಡೂ ವರ್ಷಗಳ ಕಾಲ ಕಡೆಗಣಿಸಿದ್ದನ್ನು ವಿಚಾರವಾಗಿ ಇಟ್ಟುಕೊಂಡು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. 2018 ರಿಂದ 22-ಅಕ್ಟೋಬರ್ 2020 ರ ವರೆಗೆ ನಗರಸಭೆಗೆ ನಡೆದ ಜಮಾ ಖರ್ಚುಗಳ ಬಗ್ಗೆ ಮಂಡಿಸಿ ಅನುಮೋದನೆ ನೀಡುವ ವಿಚಾರಕ್ಕೆ ನಗರಸಭೆ ಸದಸ್ಯ ಶೇಖರಪ್ಪ ಗಿಣಿವಾರ ಮಾತನಾಡಿ 2 ವರ್ಷಗಳ ನಗರಸಭೆಯಲ್ಲಿ ತುಘಲಕ್ ದರ್ಬಾರ್ ನಡೆದಿದ್ದು. ತೆರಿಗೆ ಹಣ 9 ಕೋಟಿ ಯಾವ ರೀತಿ ಬಳಕೆ ಮಾಡಿಕೊಳ್ಳಲಾಗಿದೆ. ಯಾವ ಸದಸ್ಯರಿಗೂ ಸ್ಪಷ್ಟವಾದ ಮಾಹಿತಿ ಇಲ್ಲ. ದರ ಬಗ್ಗೆ ಮುಂದಿನ ಸಭೆಯಲ್ಲಿ ಚರ್ಚೆಗೆ ಅವಕಾಶ ಕೊಡಬೇಕು.ಜೊತೆಗೆ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ತನಿಖೆ ನಡೆಸಬೇಕು ಎಂದು ಆಗ್ರಹಿಸಿದಾಗ ನಗರಸಭೆ…
Read Moreಸಿಂಧನೂರು ನಗರದಲ್ಲಿ ಬೆಳಂಬೆಳಿಗ್ಗೆ ಅಕ್ರಮವಾಗಿ ಮದ್ಯ ಮಾರಾಟ..!
ಸಿಂಧನೂರು: ನಿಯಮ ಬಾಹಿರವಾಗಿ ಬಾರ್ ಗಳಲ್ಲಿ ಬೆಳಿಗ್ಗೆ 6 ಗಂಟೆಯಿಂದಲೇ ಮಧ್ಯ ಮಾರಾಟ ಮಾಡುತ್ತಿರುವ ಘಟನೆ ಬೆಳಕಿದೆ ಬಂದಿದೆ. ನಿಯಮದಂತೆ 9 ಗಂಟೆ ನಂತರ ಬಾರ್ ಗಳನ್ನು ತೆರೆಯಬೇಕು. ಆದರೆ ಸಿಂಧನೂರು ನಗರದ ಸಾಮ್ರಾಟ್ ಮತ್ತು ಸ್ವಪ್ನಾ ಬಾರ್ ಗಳಲ್ಲಿ ಬೆಳಿಗ್ಗೆ 6 ಗಂಟೆಯಿಂದಲೇ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ. ಇಂದು ಮುಷ್ಕರ ಹಿನ್ನಲೆ ಮದ್ಯಕ್ಕೆ ಮತ್ತಷ್ಟು ಬೇಡಿಕೆ ಬಂದಿದ್ದು. ಅಂಗಡಿಯ ಅರ್ಧಬಾಗಿಲು ತೆಗೆದು ದುಪ್ಪಟ್ಟು ಬೆಲೆಗೆ ಮಧ್ಯ ಮಾರಾಟ ಮಾಡುತ್ತಿದ್ದಾರೆ. ಅಬಕಾರಿ ಇಲಾಖೆ ಅಧಿಕಾರಿಗಳು ಇತ್ತ ಗಮನ ಹರಿಸಬೇಕಿದೆ. ಪ್ರತಿನಿತ್ಯ ಇದೇ ಕೆಲಸ ಮಾಡುತ್ತಿದ್ದು ನಿಯಮ ಬಾಹಿರವಾಗಿ ಮದ್ಯ ಮಾರಾಟ ಮಾಡುವ ಬಾರ್ ಗಳ ವಿರುದ್ದ ಕ್ರಮಕ್ಕೆ ಮುಂದಾಗಬೇಕಿದೆ. ವರದಿ- ಸೈಯದ್ ಬಂಧನವಾಜ್ ಎಕ್ಸ್ ಪ್ರೆಸ್ ಟಿವಿ ಸಿಂಧನೂರು
Read Moreಸಿಂಧನೂರಿನಲ್ಲಿ ಪ್ರಯಾಣಿಕರಿಗೆ ತಟ್ಟಿದ ಮುಷ್ಕರ ಬಿಸಿ..!
ಸಿಂಧನೂರು:ಸಿಂಧನೂರು ನಗರದಲ್ಲಿ ಮುಷ್ಕರ ಹಿನ್ನೆಲೆ ಪ್ರಯಾಣಿಕರಿಗೆ ಬಿಸಿ ತಟ್ಟಿದೆ. ನಗರದಲ್ಲಿ ಕಾರ್ಮಿಕರು ಬೆಳಿಗ್ಗೆ 5 ಗಂಟೆಯಿಂದಲೇ ಮುಷ್ಕರಕ್ಕೆ ಸಹಕರಿಸುವಂತೆ ಎಲ್ಲಡೆ ಕೇಳಿಕೊಳ್ಳುತ್ತಿದ್ದು. ಸಾರಿಗೆ ಬಸ್ಸುಗಳನ್ನು ಸದ್ಯದ ಮಟ್ಟಿಗೆ ನಿಲ್ಲಿಸಲಾಗಿದೆ. ಹೀಗಾಗಿ ದೂರದ ಊರುಗಳಿಗೆ ತೆರಳಲು ನಿಲ್ದಾಣಕ್ಕೆ ಬಂದ ಪ್ರಯಾಣಿಕರು ಪರದಾಡುವಂತಾಗಿ. ಖಾಸಗಿ ವಾಹನಗಳಿಗಾಗಿ ರಸ್ತೆಯಲ್ಲಿ ನಿಂತು ಕಾಯುತ್ತಿದ್ದಾರೆ. ಆದರೆ ಇದನ್ನೆ ಬಂಡವಾಳ ಮಾಡಿಕೊಂಡ ಖಾಸಗಿ ವಾಹನದವರು ದುಪ್ಪಟ್ಟು ಬೆಲೆ ಹೇಳಿ ಪ್ರಯಾಣಿಕರಿಂದ ಸುಲಿಗೆ ಮಾಡುತ್ತಿದ್ದಾರೆ. ವರದಿ-ಸೈಯದ್ ಬಂಧೇನವಾಜ್ ಎಕ್ಸ್ ಪ್ರೆಸ್ ಟಿವಿ ಸಿಂಧನೂರು
Read More