ವೃದ್ಧರ ಮತ್ತು ಅನಾಥ ಮಕ್ಕಳಿಗಾಗಿ ಕುಟುಂಬವನ್ನೇ ದೂರಮಾಡಿ ಸಮಾಜ ಸೇವೆ ಮಾಡಿದ್ರು


ಚಿಕ್ಕಬಳ್ಳಾಪುರ :(ಚೇಳೂರು )
ಮನಸ್ಸಿನಿಂದ ಸೇವೆ ಮಾಡುವ ಮನೋಭಾವ ಇದ್ದರೆ ಹೇಗೆ ಸಮಾಜಮುಖಿ ಕೆಲಸ ಮಾಡುಬಹುದು ಎನ್ನುವುದಕ್ಕೆ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಚೇಳೂರಿನ ಮದರ್ ತೆರೇಸ ಅನಾಥಶ್ರಮದ ಭಾರತಿ ಎಂಬ ಯುವತಿ ಸಾಕ್ಷಿಯಾಗಿದ್ದಾರೆ. ಮದುವೆಯನ್ನು ಸಹ ಮಾಡಿಕೊಳ್ಳದೇ, ಕುಟುಂಬದಿಂದ ದೂರವಾಗಿ ಅನಾಥ ಮಕ್ಕಳ ಭವಿಷ್ಯಕ್ಕಾಗಿ ಭಾರತಿ ತಮ್ಮ ಜೀವನವನ್ನು ಮುಡುಪಾಗಿಟ್ಟಿದ್ದಾರೆ.

ಕಳೆದ 5ವರ್ಷಗಳಿಂದ ಇಲ್ಲಿಯೇ ವಾಸವಾಗಿ ಅನಾಥ ಮಕ್ಕಳನ್ನು ತಮ್ಮ ಮಕ್ಕಳಂತೆ ಸಾಕುತ್ತಿದ್ದಾರೆ. ಮಕ್ಕಳ ಊಟ, ನಿದ್ರೆ, ಓದು, ಪ್ರೀತಿ, ಮಮತೆ ವಿಶ್ವಾಸದಿಂದ ವಂಚಿತಗೊಂಡಿದ್ದ ಅನಾಥ ಮಕ್ಕಳಿಗೆ ತಾಯಿ ಸ್ಥಾನ ತುಂಬಿ ಸುಸಂಸ್ಕøತರನ್ನಾಗಿ ಮಾಡುತ್ತಿದ್ದಾರೆ.

ಆದರೆ ಈ ಅನಾಥ ಮಕ್ಕಳು ಮತ್ತು ವೃದ್ದರಿಗೆ ಶಾಶ್ವತವಾಗಿ ಆಶ್ರಯವನ್ನು ಕೊಡಬೇಕೆಂದು ತನ್ನ ಒಡವೆಗಳನ್ನು ಮಾರಿ ಸ್ವಂತ ಖರ್ಚುನಿಂದ 3 ಎಕೆರೆ ಜಾಮೀನು ಖರೀದಿ ಮಾಡಿ ಕಟ್ಟಡ ನಿರ್ಮಿಸಲು ತಯಾರು ಮಾಡುತಿದ್ದರೆ ಆದರೆ ಕಟ್ಟಡ ನಿರ್ಮಿಸಲು ತನ್ನ ಕೈಯಲ್ಲಿ ಶಕ್ತಿ ಇಲ್ಲವೆಂದು ದಾನಿಗಳ ಮೊರೆಹೋಗಿದ್ದಾರೆ.

ಇನ್ನು ಇಲ್ಲಿರುವ ಎಲ್ಲಾ ಮಕ್ಕಳಿಗೆ ಮತ್ತು ವೃದ್ದರಿಗೆ ಭಾರತಿ ಎಂದರೆ ಎಲ್ಲಿಲ್ಲದ ಪ್ರೀತಿ. ಒಂದು ವೇಳೆ ಅವರ ತಾಯಿ ಇದ್ದರು ಇಷ್ಟು ಕಾಳಜೀ ಮಾಡುತ್ತಿರಲ್ಲಿಲ್ಲ ಎನ್ನುವ ನಂಬಿಕೆ ಇಲ್ಲಿಯ ಮಕ್ಕಳದ್ದು.
ಇವರ ಈ ಸಮಾಜಮುಖಿ ಕಾರ್ಯ ಹೀಗೆ ಮುದುವರೆಯಲಿ ಎನ್ನವುದು ನಮ್ಮ ಅಶಯವಾಗಿದೆ.

Please follow and like us:

Related posts

Leave a Comment